ಶಿರಸಿ: ಶ್ರೀ ರಾಜರಾಜೇಶ್ವರೀ ವಿದ್ಯಾ ಸಂಸ್ಥೆ, ಸೋಂದಾ ಇದರ ಅಡಿಯಲ್ಲಿ ನಡೆಯುತ್ತಿರುವ ಶ್ರೀನಿಕೇತನ ಶಾಲೆಯಲ್ಲಿ ಗ್ರೀನ್ ಪೀಸ್ ರೋಟರಿ ಇಂಟರಾಕ್ಟ್ ಕ್ಲಬ್ನ ಉದ್ಘಾಟನೆಯನ್ನು ದೀಪ ಬೆಳಗಿಸುವುದರ ಮೂಲಕ ನಡೆಸಲಾಯಿತು.
ನಂತರ ಸಹ ಶಿಕ್ಷಕಿಯಾದ ಶ್ರೀಮತಿ ವಿಜಯಲಕ್ಷ್ಮಿ ಭಟ್ ವಾರ್ಷಿಕ ಕ್ರಿಯಾ ಯೋಜನೆಗಳ ಬಗ್ಗೆ ವಿವರಿಸಿದರು. ನಂತರ ರೋಟರಿಕ್ಲಬ್ ನ ಅಧ್ಯಕ್ಷ ಗಣೇಶ್ ಹೆಗಡೆ ಮಾತನಾಡಿ ಕ್ಲಬ್ ನ ಮಹತ್ವದ ಬಗ್ಗೆ ವಿವರಿಸಿದರು. ಇನ್ಸ್ಟಾಲೇಷನ್ ಅಧಿಕಾರಿಗಳಾದ ಪ್ರವೀಣ್ ಕಾಮತ್ ಮಾತನಾಡಿ ಕ್ಲಬ್ ನ ಚಟುವಟಿಕೆಗಳ ಬಗ್ಗೆ ವಿವರಿಸಿದರು. ಸುಧೀಂದ್ರ ದೇಶಪಾಂಡೆ ಮಾತನಾಡಿ ಬೇರೆ ಬೇರೆ ಸಂಸ್ಥೆಗಳಿಗೆ ಭೇಟಿ ನೀಡುವ ಕುರಿತು ಮಾಹಿತಿ ಹಂಚಿಕೊಂಡರು. ನಂತರ ಆಯ್ದ ವಿದ್ಯಾರ್ಥಿಗಳಿಗೆ ಪಠ್ಯ ಸಾಮಗ್ರಿಗಳನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಶಾಲೆಯ ಆವರಣದಲ್ಲಿ ವನ ಮಹೋತ್ಸವವನ್ನುಆಚರಿಸಲಾಯಿತು. ವೇದಿಕೆಯಲ್ಲಿ ಗಣಪತಿ ಹೆಗಡೆ, ತೇಜಸ್ವಿ ವರ್ಣೇಕರ್, ಶ್ರೀಮತಿ ಮಾಧುರಿ ಶಿವರಾಮ್, ಶ್ರೀಮತಿ ವಿದ್ಯಾ ನಾಯಕ್, ಶ್ರೀಮತಿ ಸಂಧ್ಯಾ ನಾಯಕ್, ಶ್ರೀ ವಿಶಾಖ್ ಇಸ್ಲೂರ್, ಪ್ರಶಾಂತ ಭಟ್ ಮತ್ತು ಪ್ರಾಚಾರ್ಯರಾದ ವಸಂತ ಭಟ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.