Slide
Slide
Slide
previous arrow
next arrow

ಇರುವುದರಲ್ಲೇ ಹಂಚಿ ಪರೋಪಕಾರಿಯಾಗಿ ಎಂಬ ಸಂದೇಶ ನೀಡಿದ ‘ಊದಬತ್ತಿ ವಿನಾಯಕ’

300x250 AD

ಶಿರಸಿ: ಬಡ ಮಕ್ಕಳು ಬರುವಂತ ಶಾಲೆಗೆ ತನ್ನಿಂದ ಏನಾದರು  ಕೈಲಾದ ಸಹಾಯ ಮಾಡಬೇಕೆಂಬ ಉದ್ದೇಶದಿಂದ ತಾನು ದುಡಿದ ಹಣದಲ್ಲಿಯೇ ಮಕ್ಕಳಿಗೆ ಪಟ್ಟಿ ಪೆನ್ನುಗಳನ್ನು ವಿತರಣೆ ಮಾಡುವ ಮೂಲಕ ವಿಶೇಷ ಚೇತನ ಯುವಕ  ಮಾನವಿಯತೆಯನ್ನು ತೊರಿದ್ದಾರೆ.

ದಿನಾ ಮುಂಜಾನೆ ಎದ್ದು ತನ್ನ ಕಾಯಕವಾದ ಊದಬತ್ತಿ ಮಾರಾಟಕ್ಕೆ ಅಣಿಯಾಗುವ ಊದಬತ್ತಿ ವಿನಾಯಕ ಎಂದೆ ಜನರಿಂದ ಕರೆಯಿಸಿಕೊಳ್ಳುವ  ನಗುಮೊಗದ ವಿನಾಯಕ ಹೆಗಡೆ ಅತ್ಯುತ್ತಮ ಪರಿಮಳ ಬಿರುವ ಊದಬತ್ತಿಗಳನ್ನು ಮಾರಾಟ ಮಾಡಿ ಬದುಕಿನ ಬಂಡಿಯನ್ನು ಸಾಗಿಸುತ್ತಿದ್ದಾನೆ.

ತಾನು ದುಡಿದು ಗಳಿಸಿದ ಹಣದಲ್ಲಿಯೇ ಶಿಕ್ಷಣಕ್ಕೆ ತನ್ನದೊಂದು ಅಳಿಲು ಸೇವೆ ಇರಲಿ ಎಂಬ ಸದುದ್ದೇಶದಿಂದ ತಾಲೂಕಿನ ಗಣೇಶನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 200 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳನ್ನು ನೀಡುವ ಮುಖಾಂತರ ಪರೊಪಕಾರವನ್ನು ತೋರಿದ್ದಾನೆ.

ಶಾಲೆಗೆ ತೆರಳಿದ ವಿನಾಯಕ ಹೆಗಡೆಯನ್ನು ಸ್ನೇಹ ಪೂರ್ವಕವಾಗಿ ಬರಮಾಡಿಕೊಂಡ ಶಿಕ್ಷಕ ವರ್ಗ ಕಾರ್ಯಕ್ರಮ ಆಯೋಜಿಸಿ ಮಕ್ಕಳಿಗೆ ಪಠ್ಯ ಪರಿಕರಗಳನ್ನು ವಿತರಣೆ ಮಾಡಿದರು.

ವಿಶೇಷ ಚೇತನನಾಗಿದ್ದರೂ ,ಅದನ್ನು ಮೆಟ್ಟಿ ನಿಂತು ಸ್ವಂತ ದುಡಿಮೆಯೊಂದಿಗೆ ಸ್ವಾಭಿಮಾನದ ಬದುಕನ್ನು ನಡೆಸುತ್ತಾ ತಾನು ಕಷ್ಟದಲ್ಲಿದ್ದರೂ, ಬಡ ಮಕ್ಕಳಿಗೆ ತನ್ನದೊಂದು ಕಾಣಿಕೆ ಇರಲಿ ಎಂದು ಕೈಲಾದ ಸೇವೆ ಮಾಡಿದ್ದಾನೆ.

300x250 AD

ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಆಗಮಿಸಿದ ಕರಾವಳಿ ಮುಂಜಾವು ವರದಿಗಾರ ರಾಜು ಕಾನ್ಸೂರ್ ಮಾತನಾಡಿ ಎಲ್ಲರಲ್ಲೂ ಸಹಾಯ ಮಾಡುವ ಮನೋಭಾವನೆ ಇರುವುದಿಲ್ಲಾ, ಹಣದ ಶ್ರೀಮಂತಿಕೆ ಇದ್ದವರು ಇನ್ನಷ್ಟು ಕೂಡಿ ಹಾಕುವ ಆಸೆ ಇರುತ್ತದೆ ಆದರೆ, ವಿಶೇಷ ಚೇತನವಾದ ವಿನಾಯಕ ಹೆಗಡೆ ತನ್ನ ಜೀವನವೇ ಕಷ್ಟದ ಹಾದಿಯಲ್ಲಿದ್ದರೂ ,ಮತ್ತೊಬ್ಬರಿಗೆ ಆಸರೆಯಾಗಬೇಕೆಂಬ ಅವನ ಆಲೋಚನೆ ನಿಜಕ್ಕೂ ಶ್ಲಾಘನೀಯ, ಈತನ ಆದರ್ಶ ಬದುಕು ಮತ್ತೊಬ್ಬರಿಗೆ ಸ್ಪೂರ್ತಿಯಾಗುತ್ತದೆ ಎಂದು ಅಭಿಮಾನ ವ್ಯಕ್ತಪಡಿಸಿದರು.

ಶಾಲಾ ಶಿಕ್ಷಕರು ಕೂಡಾ ವಿನಾಯಕನ ಆದರ್ಶ ಗುಣಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರಾದ ಡಿ.ಜಿ.ಗೌಡ, ಅನಂತ್ ಭಟ್,ಸತೀಶ್ ನಾಯ್ಕ,ಉಷಾರಾಣಿ, ಚಂದ್ರಕಾಲ ನಾಯ್ಕ,ಶ್ರೀಮತಿ ಹೆಗಡೆ, ಯಮುನಾ ಪಟಗಾರ,ಜಯಶ್ರೀ ಹೆಗಡೆ,ಕಲ್ಪನಾ ಹೆಗಡೆ,ನಾಗೇಶ ನಾಯ್ಕ ಸೇರಿದಂತೆ ಶಾಲಾ ಮಕ್ಕಳು ಹಾಜರಿದ್ದರು..

Share This
300x250 AD
300x250 AD
300x250 AD
Back to top