ಯಲ್ಲಾಪುರ:ಪಟ್ಟಣದ ಕಾಳಮ್ಮಾನಗರದ ಕೆರೆಯಲ್ಲಿ ಮಹಿಳೆಯೋರ್ವಳ ಶವ ಗುರುವಾರ ಪತ್ತೆಯಾಗಿದೆ.ಮೃತ ಮಹಿಳೆಯನ್ನು ಉದ್ಯಮನಗರದ ರಾಜೇಶ್ವರಿ ಪಾಂಡುರಂಗ ವರ್ಣೇಕರ್ (55) ಎಂದು ಗುರುತಿಸಲಾಗಿದೆ.
ಉದ್ಯಮ ನಗರದವಳಾದ ಈಕೆ ಜುಲೈ 10ರ ರಾತ್ರಿಯಿಂದ ಕಾಣೆಯಾಗಿದ್ದಳು.ಕಾಣೆಯಾದ ಈಕೆ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಈಕೆಯ ಸಾವಿಗೆ ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲ. ಕೌಟುಂಬಿಕ ಸಮಸ್ಯೆ ಕಾರಣ ಇರಬಹುದೆಂದು ನಂಬಲಾಗಿದೆ. ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.