ಶಿರಸಿ: ತಾಲೂಕಿನ ಬಂಕನಾಳ ಗ್ರಾಮ ಪಂಚಾಯತಿಯ ತೆರುವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹರೀಶ ನಾಯ್ಕ ಆಯ್ಕೆಯಾಗಿದ್ದಾರೆ.
ಈ ಹಿಂದೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಕೆರಿಯಾ ಗೌಡಾ 15 ತಿಂಗಳುಗಳ ಕಾಲ ಆಡಳಿತ ನಡೆಸಿ ರಾಜೀನಾಮೆ ನೀಡಿದ್ದರು. 10 ಸದಸ್ಯರ ಬಲವುಳ್ಳ ಬಂಕನಾಳ ಪಂಚಾಯತಿಯ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಹರೀಶ ನಾಯ್ಕ ಹಾಗೂ ಬಿಜೆಪಿ ಬೆಂಬಲಿತ ಶಶಿಕುಮಾರ ನಾಯ್ಕ ಸ್ಪರ್ಧಿಸಿದ್ದರು.
ಚಲಾವಣೆಗೊಂಡ 10 ಮತಗಳ ಪೈಕಿ ಹರೀಶ ನಾಯ್ಕ 6 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರೆ, 4 ಮತಗಳನ್ನು ಪಡೆದ ಶಶಿಕುಮಾರ ನಾಯ್ಕ ಸೋಲು ಅನುಭವಿಸಬೇಕಾಯಿತು.