ಸಿದ್ದಾಪುರ: ಆಕರ್ಷಣೆಯವಾದ ಶಿಸ್ತುಬದ್ಧ ವ್ಯಕ್ತಿತ್ವವನ್ನು ಹೊಂದಿದ್ದ ರಾಜಪ್ಪ ಸರ್ರವರು 32 ವರ್ಷಗಳ ಸೇವೆಯಲ್ಲಿ ತಮ್ಮತನವನ್ನು ಬಿಡದೆ ಮಕ್ಕಳಿಗೆ ಮಾರ್ಗದರ್ಶನ ಮಾಡುತ್ತಿದ್ದರು. ಆ ಮೂಲಕ ತಾವು ಸೇವೆ ಸಲ್ಲಿದ ಶಾಲೆಗಳಲ್ಲಿ ತಮ್ಮ ನೆನಪಿನ ಗುರುತು ಅಚ್ಚಳಿಯುವಂತೆ ಸೇವೆ ಸಲ್ಲಿಸಿದ್ದಾರೆ ಎಂದು ಎಸ್ಡಿಎಂಸಿ ಅಧ್ಯಕ್ಷ ವಿ.ಎನ್.ನಾಯ್ಕ ಬೇಡ್ಕಣಿ ಹೇಳಿದರು.
ಅವರು ತಾಲೂಕಿನ ಬೇಡ್ಕಣಿಯ ಜನತಾ ವಿದ್ಯಾಲಯ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಟಿ.ರಾಜಪ್ಪರವರನ್ನು ಸನ್ಮಾನಿಸಿ ಬಿಳ್ಕೊಟ್ಟು ಮಾತನಾಡಿದರು. ಗುರುಗಳು ಹೇಳಿದ ಮಾತನ್ನು ಕೇಳಿದರೆ ಸಾಲದು, ಅದನ್ನು ನಮ್ಮಲ್ಲಿ ಅಳವಡಿಸಿಕೊಳ್ಳಬೇಕು. ಪಠ್ಯ ಚಟುವಟಿಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳು ಅವಶ್ಯಕ. ಅವುಗಳನ್ನು ದೈಹಿಕ ಶಿಕ್ಷಕರು ಕಲಿಸುತ್ತಾರೆ. ರಾಜಪ್ಪ ಸರ್ ಅತ್ಯಂತ ದೃಢವಾದ ನಿರ್ಧಾರದಿಂದ ಮಕ್ಕಳಿಗೆ ದೈಹಿಕ ಶಿಕ್ಷಣ ನೀಡುತ್ತಿದ್ದರು. ಆಟೋಟಗಳು, ಧ್ಯಾನ, ಶಿಸ್ತು, ಗುರುಗಳ ಮಾರ್ಗದರ್ಶನದಲ್ಲಿ ನಡೆದರೆ ನಮ್ಮ ಜೀವನ ಉತ್ತಮವಾಗಿ ಸಾಗುತ್ತದೆ ಎಂದರು.
ನಿವೃತ್ತರಾದ ದೈಹಿಕ ಶಿಕ್ಷಣ ಶಿಕ್ಷಕ ಟಿ.ರಾಜಪ್ಪ ಮಾತನಾಡಿ, ಶಿಕ್ಷಕರು ಹೇಳಿದ ಮಾತು ಕೇಳಿದರೆ ನಿಮ್ಮ ಗುರಿ ಈಡೇರಿಸಲು ಸಾಧ್ಯವಾಗುತ್ತದೆ. ನಮ್ಮಲ್ಲಿ ನಿರಂತರವಾಗಿ ಪ್ರಯತ್ನ ಇರಬೇಕು. ಮುಂದೆ ಪ್ರಯತ್ನ ಕ್ಕೆ ತಕ್ಕ ಫಲ ಸಿಕ್ಕೆ ಸಿಗುತ್ತದೆ. ಶಿಕ್ಷಕರ ಮಾರ್ಗದರ್ಶನ ದಲ್ಲಿ ಬೆಳೆಯಿರಿ ಎಂದರು.
ಶಿಕ್ಷಕ ಜಿ.ಟಿ.ಭಟ್ ಸ್ವಾಗತಿಸಿದರು. ಶಿಕ್ಷಕ ವಿ.ಟಿ.ಗೌಡ ವಂದಿಸಿದರು. ಶಿಕ್ಷಕ ಪಿ.ಎಂ.ನಾಯ್ಕ ನಿರೂಪಿಸಿದರು. ಮುಖ್ಯಶಿಕ್ಷಕಿ ಪ್ರತಿಮಾ ಪಾಲೇಕರ್ ಶಾಲೆಯಲ್ಲಿ ರಾಜಪ್ಪ ಅವರೊಂದಿಗೆ ತಮ್ಮ ಒಡನಾಟವನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ರಾಜಪ್ಪರ ಪತ್ನಿ ಸುಶಿಲಮ್ಮ, ಮಗಳು ಪೂಜಾ, ಪತ್ರಕರ್ತ ಸುರೇಶ ಮಡಿವಾಳ, ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.