ಕುಮಟಾ: ತಾಲೂಕಿನ ಮೊರಬಾದಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕಗಳಿಸಿದ ಆರ್ಥಿಕವಾಗಿ ಹಿಂದುಳಿದ ಹಳ್ಳೇರ ಸಮಾಜದ ವಿದ್ಯಾರ್ಥಿಗಳಿಗೆ ಬಿಜೆಪಿ ಮುಖಂಡ ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟಿನ ಅಧ್ಯಕ್ಷ ನಾಗರಾಜ ನಾಯಕ ತೊರ್ಕೆ ಸನ್ಮಾನಿಸಿ ಗೌರವಿಸಿದರು.
ನಂತರ ಮಾತನಾಡಿದ ಅವರು, ಬಡತನದಲ್ಲಿಯೂ ಉತ್ತಮವಾಗಿ ಶೈಕ್ಷಣಿಕ ಸಾಧನೆ ಮಾಡಿರುವುದು ನಿಜಕ್ಕೂ ಉತ್ತಮ ಬೆಳವಣಿಯಾಗಿದೆ. ನಾನು ಕೂಡಾ ಈ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮಾಡಲು ಇಚ್ಛಿಸುತ್ತೇನೆ, ಇದು ಕೇವಲ ಆಶ್ವಾಸನೆಯಲ್ಲ. ಉತ್ತಮವಾಗಿ ಶಿಕ್ಷಣವನ್ನು ಕಲಿಯುವ ವಿದ್ಯಾರ್ಥಿಗಳಿಗೆ ಯಾವಾಗಲು ನನ್ನ ಪ್ರೋತ್ಸಾಹ ಇದ್ದೇ ಇರುತ್ತದೆ ಎಂದರು.
ಹಳ್ಳೇರ ಸಮಾಜದ ವಿದ್ಯಾರ್ಥಿಗಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಇದೆ. ಇದರ ಸದುಪಯೋಗ ಪಡೆದುಕೊಳ್ಳಿ. ಆಗ ಮಾತ್ರ ಸಮಾಜವು ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ. ಮಕ್ಕಳಿಗೆ ಶಿಕ್ಷಣವನ್ನು ನೀಡಿದಾಗ ಸಮಾಜದಲ್ಲಿ ಮಹತ್ವದ ಬದಲಾವಣೆ ಸಾಧ್ಯವಿದ್ದು, ವಿದ್ಯಾರ್ಥಿಗಳು ಹೆಚ್ಚು ಸರಕಾರಿ ಉದ್ಯೋಗದ ಕಡೆ ಪ್ರಯತ್ನಿಸಬೇಕು. ಈ ಬಗ್ಗೆ ಪಾಲಕರು ತಮ್ಮ ಮಕ್ಕಳಿಗೆ ಶಿಕ್ಷಣದ ಮಹತ್ವ ತಿಳಿಸಬೇಕು ಎಂದರು.
ಬಿಜೆಪಿಯ ಮುಖಂಡ ರಾಮು ಕೆಂಚನ್ ಮಾತನಾಡಿ, ವಿದ್ಯಾರ್ಥಿಗಳಿಗೆ ಕಲಿಯಬೇಕು ಎನ್ನುವ ಆಸಕ್ತಿ ಇರಬೇಕು. ಆಗ ಮಾತ್ರ ಬಡತನವಿದ್ದರೂ ಕೂಡಾ ಅದನ್ನು ಮೆಟ್ಟಿನಿಂತು ಉತ್ತಮ ಶಿಕ್ಷಣವನ್ನು ಪಡೆದು ಸಮಾಜದಲ್ಲಿ ಬದಲಾವಣೆ ಪಡೆಯಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.
ಹಿರೇಗುತ್ತಿ ಗ್ರಾಮ ಪಂಚಾಯತಿ ಸದಸ್ಯ ಮಹೇಶ ನಾಯಕ, ಉತ್ತಮವಾಗಿ ಪಿಯುಸಿ ಸೈನ್ಸ್ ಲ್ಲಿ 91.16% ಪಡೆದ ವಿದ್ಯಾರ್ಥಿನಿ ಶ್ರೀದೇವಿ ಹಳ್ಳೇರ ಅವರಿಗೆ 5000 ಸಾವಿರ ಹಾಗೂ ಎಸ್ಎಸ್ಎಲ್ಸಿಯಲ್ಲಿ 80% ಅಂಕಗಳಿಸಿದ ವಿದ್ಯಾ ಹಳ್ಳೇರ, ದಾಕ್ಷಾಯಿಣಿ ಹಳ್ಳೇರ, ಭೂಮಿಕಾ ಹಳ್ಳೇರ, ಸ್ವಾತಿ ಹಳ್ಳೇರ, ಭಾಗೀರಥಿ ಹಳ್ಳೇರ, ದಿಲೀಪ್ ಹಳ್ಳೇರ ಅವರಿಗೆ 2000 ಸಾವಿರ ರೂಪಾಯಿ ನೀಡಿ ಸನ್ಮಾನಿಸಿ ಗೌರವಿಸಿದರು.
ಹಿರೇಗುತ್ತಿ ಗ್ರಾ.ಪಂ ಸದಸ್ಯ ರಮಾಕಾಂತ ಹರಿಕಾಂತ, ಮೊರಬಾ ಹೊಸನಗರ ಶಾಲೆಯ ಮುಖ್ಯಾಧ್ಯಪಕ ಜಗದೀಶ ನಾಯಕ, ಶಿಕ್ಷಕ ವಿನಾಯಕ ಪಟಗಾರ, ಗ್ರಾಮಸ್ಥರಾದ ಬೊಮ್ಮಯ್ಯ ಹಳ್ಳೇರ, ಗಣಪತಿ ಹಳ್ಳೇರ, ಮಂಜುನಾಥ ಹಳ್ಳೇರ, ಮುಕುಂದ ಹಳ್ಳೇರ ಇತರರಿದ್ದರು.