ಕಾಗೇರಿ ಶಿಫಾರಸ್ಸು: ಕ್ಷೇತ್ರದ ರಸ್ತೆಗಳ ಮರುಡಾಂಬರೀಕರಣಕ್ಕೆ 2 ಕೋಟಿ ಮಂಜೂರಿ

ಶಿರಸಿ: 2017-18 ನೇ ಸಾಲಿನ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಶಿರಸಿ ಸಿದ್ದಾಪುರ ವಿಧಾನಸಭಾ ಕ್ಷೇತ್ರ ರಸ್ತೆಗಳ ಮರುಡಾಂಬರೀಕರಣ ಮಾಡಿ ನಿರ್ವಹಣೆ ಮಾಡಲು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಶಿಫಾರಸ್ಸಿನ ಮೇರೆಗೆ ಹೆಚ್ಚುವರಿ ಅನುದಾನ ಮಂಜೂರಾಗಿದೆ. ಅನುದಾನಿತ ರಸ್ತೆಗಳು ತಾಲೂಕಿನ ಶಿರಸಿ ಬನವಾಸಿ ರಸ್ತೆಯಿಂದ ಕೊಪ್ಪ ರಸ್ತೆ ವಾಯಾ ಪಡಂಬೈಲ್ 75 ಲಕ್ಷ, ಶಿರಸಿ ಹೊಸಕೊಪ್ಪ ರಸ್ತೆಯಿಂದ ಎಸಳೆ ರಸ್ತೆಗೆ 25 ಲಕ್ಷ, ಸಿದ್ದಾಪುರ ತಾಲೂಕಿನ ಅಮ್ಮಿನಳ್ಳಿ ನಿಲ್ಕುಂದ ರಸ್ತೆಯ ಹೀನಗಾರ ಕ್ರಾಸ್ ನಿಂದ ಹೀರೇಕೈಗದ್ದೆ ರಸ್ತೆಗೆ 20 ಲಕ್ಷ, ಹುಲ್ಕುತ್ರಿಯಿಂದ ಕತ್ರಗಾಲ ಕ್ರಾಸ್  joining SH48 ರಸ್ತೆಗೆ 30 ಲಕ್ಷ, ಕೊಂಡ್ಲಿ ಕ್ರಾಸ್ ನಿಂದ ಸೊರಬಾ ಭಟ್ಕಳ ರಸ್ತೆಗೆ 30 ಲಕ್ಷ, ಖಾನಾಪುರ ತಾಳಗುಪ್ಪ ರಸ್ತೆಯಿಂದ ಗೋಳ್ಗೋಡ್ ಹೊಸೂರು ರಸ್ತೆಗೆ 20 ಲಕ್ಷ ಸೇರಿದಂತೆ ಒಟ್ಟೂ 2 ಕೋಟಿ ಮಂಜೂರಿ ದೊರೆತಿದೆ ಎಂದು ಕಾಗೇರಿಯವರ ಆಪ್ತ ಸಹಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.