ದಾಂಡೇಲಿ : ನಗರದ ಸಮೀಪದಲ್ಲಿರುವ ಹಸನ್ಮಾಳದಲ್ಲಿ ನೂತನವಾಗಿ ಲೋಕಾರ್ಪಣೆಗೊಂಡ ಶ್ರೀ ಕೃಷ್ಣ ದೇವಸ್ಥಾನಕ್ಕೆ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು ಹಾಗೂ ಶಾಸಕರಾದ ಆರ್.ವಿ.ದೇಶಪಾಂಡೆ ಶನಿವಾರ ಭೇಟಿ ನೀಡಿದರು.
ದೇವಸ್ಥಾನಕ್ಕೆ ಭೇಟಿ ನೀಡಿದ ಆರ್.ವಿ.ದೇಶಪಾಂಡೆ ಅವರನ್ನು ದೇವಸ್ಥಾನದ ಆಡಳಿತ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಗೌರವದಿಂದ ಬರಮಾಡಿಕೊಂಡರು. ಶ್ರೀ ಕೃಷ್ಣ ದೇವರ ದರ್ಶನವನ್ನು ಪಡೆದು ವಿಶೇಷ ಪೂಜೆಯನ್ನು ಸಲ್ಲಿಸಿದರು. ದೇವಸ್ಥಾನ ನಿರ್ಮಾಣ ಕಾರ್ಯದ ಕುರಿತಂತೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ದೇವಸ್ಥಾನ ನಿರ್ಮಾಣಕ್ಕೆ ಸರಕಾರದಿಂದ 11.50 ಲಕ್ಷ ರೂ ಅನುದಾನವನ್ನು ನೀಡಿರುವ ಆರ್.ವಿ.ದೇಶಪಾಂಡೆಯವರನ್ನು ಇದೇ ಸಂದರ್ಭದಲ್ಲಿ ದೇವಸ್ಥಾನದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಆರ್.ವಿ.ದೇಶಪಾಂಡೆ ಈ ಭಾಗದ ಗೌಳಿ ಸಮುದಾಯದವರ ಅನೇಕ ವರ್ಷಗಳ ಬೇಡಿಕೆ ಶ್ರೀ ಕೃಷ್ಣ ದೇವಸ್ಥಾನ ನಿರ್ಮಾಣದ ಮೂಲಕ ಈಡೇರಿದೆ. ಸುಂದರವಾಗಿ ದೇವಸ್ಥಾನ ನಿರ್ಮಾಣವಾಗಿದೆ. ನಿಯಮದಂತೆ ಪೂಜೆ, ಪುರಸ್ಕಾರಗಳು ನಿರಂತರವಾಗಿ ಶ್ರದ್ಧಾಭಕ್ತಿಯಿಂದ ನಡೆಯಲಿ ಎಂದು ಶುಭ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ನಗರ ಸಭೆಯ ಅಧ್ಯಕ್ಷ ಅಷ್ಪಾಕ್ ಶೇಖ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ, ಹಳಿಯಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ್, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಗೌಸ್ ಖತೀಬ್, ಗ್ಯಾರಂಟಿ ಯೋಜನಾ ಅನುಷ್ಟಾನ ತಾಲೂಕು ಸಮಿತಿಯ ಅಧ್ಯಕ್ಷ ರಿಯಾಜ್ ಬಾಬು ಸೈಯದ್, ಅಂಬೇವಾಡಿ ಗ್ರಾ.ಪಂ ಅಧ್ಯಕ್ಷ ಪ್ರಕಾಶ ಜಿ.ಈ, ಯುವ ಕಾಂಗ್ರೆಸ್ ಕ್ಷೇತ್ರಾಧ್ಯಕ್ಷ ಅಬ್ದುಲ್ ಕರೀಂ ಖತೀಬ್, ತಹಶೀಲ್ಸಾರ್ ಶೈಲೇಶ ಪರಮಾನಂದ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಟಿ.ಸಿ.ಹಾದಿಮನಿ, ನಗರ ಸಭೆಯ ಪೌರಾಯುಕ್ತ ವಿವೇಕ ಬನ್ನೆ, ಮಾಜಿ ನಗರ ಸಭಾ ಸದಸ್ಯ ಅನಿಲ್ ದಂಡಗಲ್, ಕಾಂಗ್ರೆಸ್ ಮುಖಂಡ ಮ್ಯಾಥ್ಯೂಸ್ ಕೊಂಡಟ್ಟಿ, ಪ್ರವಾಸೋದ್ಯಮಿಗಳಾದ ಮೋಹನ ಸನದಿ, ಪ್ರಥ್ವಿ ಸನದಿ, ಶ್ರೀ ಕೃಷ್ಣ ದೇವಸ್ಥಾನದ ಆಡಳಿತ ಸಮಿತಿಯ ಮುಖ್ಯ ಕಾರ್ಯನಿರ್ವಹಕ ಜ್ಯೋತಿಬಾ ಪಾಟೀಲ್ ಸೇರಿದಂತೆ ಶ್ರೀ ಕೃಷ್ಣ ದೇವಸ್ಥಾನದ ಆಡಳಿತ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಸ್ಥಳಿಯ ಭಕ್ತಾಭಿಮಾನಿಗಳು, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.