ಸಿದ್ದಾಪುರ: ಜೈ ಶ್ರೀರಾಮ್ ಸಾಂಸ್ಕೃತಿಕ ಸಂಘ ಕೋಡ್ಸರದ ರಜತ ಮಹೋತ್ಸವ ಕಾರ್ಯಕ್ರಮವು ಇಂದು ತಾಲೂಕಿನ ಮಹಾಲಕ್ಷ್ಮೀ ಹಿರಿಯ ಪ್ರಾಥಮಿಕ ಶಾಲೆ ಕೋಡ್ಸರದಲ್ಲಿ ಆಯೋಜಿಸಲಾಗಿದೆ.
ಮಧ್ಯಾಹ್ನ 3ಗಂಟೆಗೆ ಖ್ಯಾತ ಯಕ್ಷಗಾನ ಕಲಾವಿದರಿಂದ ಶುಂಭ ನಿಶುಂಭ ತಾಳಮದ್ದಳೆ ನಡೆಯಲಿದೆ. ಸಂಜೆ 6 ಗಂಟೆಯಿಂದ ಶಾಲಾ ಮಕ್ಕಳಿಂದ ಮನರಂಜನಾ ಕಾರ್ಯಕ್ರಮ ಹಾಗೂ ಸನ್ನಿಧಿ ಹೆಗಡೆ ಬಾಳೆಗದ್ದೆ ಇವರಿಂದ ನೃತ್ಯ ಪ್ರದರ್ಶನ ಏರ್ಪಡಿಸಲಾಗಿದೆ.
ರಾತ್ರಿ 9 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಪ್ರಕಾಶ ಹೆಗಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿ.ಎಸ್ ಹೆಗಡೆ ಕಂಚಿಕೈ, ಶ್ರೀಕಾಂತ ಹೆಗಡೆ ಹುಣಸೇಕೊಪ್ಪ , ಪಿ.ಎನ್ ನಾಯ್ಕ ಹಳ್ಳಿಬೈಲ್, ಬಲರಾಮ ನಾಮಧಾರಿ ಕಾನಸೂರು ಉಪಸ್ಥಿತರಿರಲಿದ್ದಾರೆ. ರಾತ್ರಿ 9.30ಕ್ಕೆ ಅನಂತ ಯಕ್ಷ ಕಲಾ ಪ್ರತಿಷ್ಠಾನ ಸಿದ್ದಾಪುರ ಹಾಗೂ ಅತಿಥಿ ಕಲಾವಿದರಿಂದ ಗದಾಯುದ್ಧ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಜೈ ಶ್ರೀರಾಮ್ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಚಂದ್ರಶೇಖರ ಹೆಗಡೆ ಗದ್ದೆಮನೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.