ಶಿರಸಿ: ತಾಲೂಕಿನ ಇಸಳೂರಿನ ಶ್ರೀನಿಕೇತನ ಸಿ.ಬಿ.ಎಸ್.ಇ. ಶಾಲೆಯಲ್ಲಿ 2024-25 ನೇ ಸಾಲಿನ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗಾಗಿ ಏಪ್ರಿಲ್ 4 ಮತ್ತು 5ರಂದು ಎರಡು ದಿನಗಳ ಬೇಸಿಗೆ ಶಿಬಿರವನ್ನು ಏರ್ಪಡಿಸಲಾಗಿತ್ತು. ಈ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ವಿ.ಎಚ್ ಭಟ್ಕಳ್,ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಗೈಡ್ಸ್ ಶ್ರೀಮತಿ ಅಂಜನಾ ಹೆಗಡೆ ಉಪಸ್ಥಿತರಿದ್ದರು. ಹಾಗೂ ಗೌರವಾನ್ವಿತ ಅತಿಥಿಗಳಾಗಿ ಭಾರತ ಸ್ಕೌಟ್ ಮತ್ತು ಗೈಡ್ಸ್ ಸಹಾಯಕ ರಾಜ್ಯ ಸಂಘಟನಾ ಆಯುಕ್ತ ವೀರೇಶ್ ಮಾದರ್, ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಎನ್. ಎಸ್. ಭಾಗ್ವತ, ಶ್ರೀನಿಕೇತನ ಶಾಲೆ ಪ್ರಾಂಶುಪಾಲ ವಸಂತ ಭಟ್, ಉಪ ಪ್ರಾಂಶುಪಾಲೆ ಶ್ರೀಮತಿ ವಸುಧಾ ಹೆಗಡೆ ಉಪಸ್ಥಿತರಿದ್ದರು. ಈ ಶಿಬಿರದಲ್ಲಿ ಶಾಲೆಯ 50 ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳಾದ ಮೇಘನಾ, ತೇಜಸ್, ಜಗದೀಶ ಹಾಗೂ ಪ್ರಾರ್ಥನಾ ತಮ್ಮ ಶಿಬಿರ, ಸ್ಕೌಟ್ಗೈಡ್ಸ್ ಮತ್ತು ಶಾಲೆಯ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ನಿಸರ್ಗದ ಮಡಿಲಿನಲ್ಲಿ ನಡೆಸಲಾಗಿದ್ದ ಈ ಬೇಸಿಗೆ ಶಿಬಿರದಲ್ಲಿ ವಿದ್ಯಾರ್ಥಿಗಳು ಅನೇಕ ಹೊಸ ವಿಷಯಗಳ ಬಗ್ಗೆ ಅರಿತು ಸಂತಸಪಟ್ಟರು.
ಈ ಶಿಬಿರಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಜಿಲ್ಲಾ ತರಬೇತಿ ಆಯುಕ್ತ ಚಂದ್ರಶೇಖರ ಎಸ್.ಸಿ. ಇವರು ಇತಿಹಾಸ ವಿಷಯದ ಕುರಿತು, ರಾಜ್ಯ ಪ್ರತಿನಿಧಿ ಸ್ಕೌಟ್ ಡಾ|| ನವೀನ ಕುಮಾರ ಎ.ಜಿ., ಇವರು ಪ್ರಥಮ ಚಿಕಿತ್ಸೆ, ಗೈಡ್ ಕ್ಯಾಪ್ಟನ್ ಫ್ರೀ.ಎ.ಎಲ್.ಟಿ ಶ್ರೀಮತಿ ಚೇತನಾ ಪಾವಸ್ಕರ್ ಇವರು ಪ್ರಾರ್ಥನಾ ಗೀತೆ, ಧ್ವಜಗೀತೆ ಮತ್ತು ಧ್ವಜದ ಮಹತ್ವದ ಕುರಿತು ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಸ್ಕೌಟ್ ಮಾಸ್ಟರ್, ಎಚ್.ಡಬ್ಲೂ.ಬಿ ರಾಘವೇಂದ್ರ ಹೊಸೂರು ಇವರು ಅಂದಾಜಿಸುವಿಕೆ ಬಗ್ಗೆ ತಿಳಿಸಿದರು. ಸ್ಕೌಟ್ ಮಾಸ್ಟರ್ ಕಮಲಾಕರ್ ಪಟಗಾರ್ ಗಂಟುಗಳು ವಿಷಯದ ಬಗ್ಗೆ ತಿಳಿಸಿದರು. ಅಡ್ವಾನ್ಸ್ ಸ್ಕೌಟ್ ಮಾಸ್ಟರ್ ಹೇಮಂತ ಭಂಡಾರಿ ಇವರು ನಕ್ಷೆಯ ಬಗ್ಗೆ ಮಾಹಿತಿ ನೀಡಿದರು.
ಶಾಲಾ ಆಡಳಿತ ಮಂಡಳಿಯವರು ಈ ಶಿಬಿರಕ್ಕೆ ಎರಡು ದಿನದ ಮಧ್ಯಾಹ್ನದ ಉಪಹಾರದ ವ್ಯವಸ್ಥೆ ಮತ್ತು ಬಸ್ಸಿನ ವ್ಯವಸ್ಥೆಯನ್ನು ಕಲ್ಪಿಸಿದರು. ಹಾಗೂ ಸಿಬ್ಬಂದಿ ವರ್ಗದವರು ಶಿಬಿರಾರ್ಥಿಗಳಿಗೆ ತಂಪು ಪಾನಿಯ, ಹಣ್ಣು, ಬಿಸ್ಕೆಟ್ ನೀಡಿ ಸಹಕರಿಸಿದರು. ಶಾಲೆಯ ಸಿಬ್ಬಂದಿಗಳಾದ ಸ್ಕೌಟ್ ಮಾಸ್ಟರ್, ಶ್ರೀನಿಕೇತನ ಶಾಲೆ ಬಸವರಾಜ್ ಹೊಸಮನಿ ಮತ್ತು ಗೈಡ್ ಕ್ಯಾಪ್ಟನ್, ಶ್ರೀನಿಕೇತನ ಶಾಲೆ ಶ್ರೀಮತಿ ದೀಪಾ. ಜಿ ಮಡಗಾಂವಕರ್ ಶಿಬಿರದ ಉಸ್ತುವಾರಿಯನ್ನು ವಹಿಸಿದ್ದರು. ಶಿಬಿರದ ಯಶಸ್ಸಿಗಾಗಿ ಅನುವು ಮಾಡಿ ಕೊಟ್ಟ ಶಾಲೆಗೆ ಮತ್ತು ಪಾಲಕರಿಗೆ ಧನ್ಯವಾದಗಳನ್ನು ಸಲ್ಲಿಸಲಾಯಿತು.
ಶ್ರೀನಿಕೇತನ ಸ್ಕೌಟ್-ಗೈಡ್ಸ್ಗಳ ಬೇಸಿಗೆ ಶಿಬಿರ ಯಶಸ್ವಿ
