ಶಿರಸಿ: ಇಲ್ಲಿನ ಪ್ರಸಿದ್ಧ ವೈದ್ಯ ದಂಪತಿಗಳಾದ ಡಾ. ದಿನೇಶ ಹೆಗಡೆ ಹಾಗೂ ಡಾ. ಸುಮನ್ ಹೆಗಡೆ ಅವರ ಅವಳಿ ಜವಳಿ ಮಕ್ಕಳಿಬ್ಬರೂ ಪಿಯುಸಿಯಲ್ಲಿ ರಾಜ್ಯಮಟ್ಟದ ಆರನೇ ರ್ಯಾಂಕ್ ಪಡೆದು ಇಲ್ಲೂ ಸಹೋದರತೆ ಸಾರಿದ್ದಾರೆ.
600 ಕ್ಕೆ 594 ಅಂಕ ಪಡೆದು ಶೇ.99 ಸಾಧನೆ ಮಾಡಿದ ವಿದ್ಯಾರ್ಥಿಗಳಾದ ದಕ್ಷ ಹಾಗೂ ರಕ್ಷಾ ಇಬ್ಬರೂ ಒಂದೇ ಸಂಖ್ಯೆಯ ಅಂಕ ಪಡೆದಿರುವುದು ವಿಶೇಷವಾಗಿದೆ. ಈ ಇಬ್ಬರೂ ವಿದ್ಯಾರ್ಥಿಗಳು ಬೆಂಗಳೂರಿನ ದೀಕ್ಷಾ ಕಾಲೇಜಿನಲ್ಲಿ ಓದುತ್ತಿದ್ದರು. ದಕ್ಷನಿಗೆ ನಾಲ್ಕು ವಿಷಯದಲ್ಲಿ ಶೇ.100, ರಕ್ಷಾಳಿಗೆ ಎರಡು ವಿಷಯದಲ್ಲಿ ಶೇ.100 ಅಂಕ ಪಡೆದಿದ್ದಾರೆ. ರಕ್ಷಾ ಕಳೆದ ಜೆಇಇ ಮೆನ್ಸ್ ಬಿಆರ್ಕ್ ನಲ್ಲಿ ದೇಶಕ್ಕೆ ಐದನೇ ರ್ಯಾಂಕ್ ಪಡೆದಿದ್ದು ಉಲ್ಲೇಖನೀಯ.