ಹೃದಯಪೂರ್ವಕ ಅಭಿನಂದನೆಗಳು
ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ನಡೆದ 33ನೇ ಘಟ್ಟಿಕೋತ್ಸವದಲ್ಲಿ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರಿಂದ ಪಿಎಚ್‌ಡಿ ಪದವಿಗೆ ಭಾಜನರಾಗಿರುವ ಶಿರಸಿಯ ಅಸ್ಮಿತೆ ಫೌಂಡೇಶನ್ ನ ಮುಖ್ಯಕಾರ್ಯನಿರ್ವಾಹಕ ನಿರ್ದೇಶಕ ರಿಯಾಜ್ ಸಾಗರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ರಿಯಾಜ್ ಸಾಗರ್ ಅವರು ಕನ್ನಡ ವಿವಿ ಬುಡಕಟ್ಟು ಅಧ್ಯಯನ ವಿಭಾಗ ಹಿರಿಯ ಪ್ರಾಧ್ಯಾಪಕ ಡಾ. ಎ. ಎಸ್. ಪ್ರಭಾಕರ ಅವರ ಮಾರ್ಗದರ್ಶನದಲ್ಲಿ “ಸಿದ್ದಿ ಬುಡಕಟ್ಟು ಸಮುದಾಯದ ಅಭಿವೃದ್ಧಿ – ಸವಾಲು ಮತ್ತು ಸಾಧ್ಯತೆಗಳು ( ಸರ್ಕಾರಿ ಅಭಿವೃದ್ಧಿ ಯೋಜನೆಗಳ ಒಂದುವರೆ ದಶಕದ ಅಧ್ಯಯನ) ಎಂಬ ವಿಷಯದಲ್ಲಿ ಸಂಶೋಧನ ಮಹಾಪ್ರಬಂಧಕ್ಕೆ ಪಿಹೆಚ್‌ಡಿ ಪಡೆದಿದ್ದಾರೆ. ಅವರ ಸಾಧನೆಯ ಪಥ ಇನ್ನಷ್ಟು ಉಜ್ವಲವಾಗಲಿ. ಭವಿಷ್ಯ ಪ್ರಜ್ವಲಿಸಲಿ ಎಂಬ ಹಾರೈಕೆ ನಮ್ಮದು.
ಶುಭ ಕೋರುವವರು :
ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಗ್ರೀನ್ ಕೇರ್ (ರಿ.) ಸಂಸ್ಥೆ, ಶಿರಸಿ