Slide
Slide
Slide
previous arrow
next arrow

ಅಂಬೇಡ್ಕರ್ ಜಯಂತಿ: ಪೂರ್ವಭಾವಿ ಸಭೆ

300x250 AD

ದಾಂಡೇಲಿ : ಏ. 14ರಂದು ಅಂಬೇಡ್ಕರ್ ಜಯಂತಿ ಆಚರಣೆಯ ನಿಮಿತ್ತ ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನಾ ಸಮಿತಿಯ ನೇತೃತ್ವದಲ್ಲಿ ನಗರದ ಪ್ರವಾಸಿ ಮಂದಿರದಲ್ಲಿ ಅಂಬೇಡ್ಕರ್ ಮೂರ್ತಿ ಪ್ರತಿಷ್ಟಾಪನಾ ಸಮಿತಿಯ ನೇತೃತ್ವದಲ್ಲಿ ಪೂರ್ವಭಾವಿ ಸಭೆಯು ಜರುಗಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಂಬೇಡ್ಕರ್ ಮೂರ್ತಿ ಪ್ರತಿಷ್ಟಾಪನಾ ಸಮಿತಿಯ ಅಧ್ಯಕ್ಷರಾದ ರಾಜಶೇಖರ.ಐ.ಹೆಚ್ ಅವರು ನಗರದಲ್ಲಿ ಅಂಬೇಡ್ಕರ್ ಮೂರ್ತಿ ಪ್ರತಿಷ್ಟಾಪನೆಯಾಗಿ ಒಂದು ವರ್ಷ ಆಗಿರುವ ಹಿನ್ನಲೆಯಲ್ಲಿ ಈ ಬಾರಿ ಅತ್ಯಂತ ವಿಶೇಷವಾಗಿ ಮತ್ತು ವಿಜೃಂಭಣೆಯಿಂದ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಗುವುದು ಎಂದರು. ನಗರದ ಎಲ್ಲಾ ಸಂಘ ಸಂಸ್ಥೆಗಳ ಹಾಗೂ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಪಡೆದುಕೊಂಡು ವಿನೂತನ ರೀತಿಯಲ್ಲಿ ಅಂಬೇಡ್ಕರ್ ಜಯಂತಿಯನ್ನು ಆಚರಿಸುವ ಮೂಲಕ ಈ ರಾಷ್ಟ್ರಕ್ಕೆ ಮಹಾನ್ ಗ್ರಂಥವನ್ನು ದಯಪಾಲಿಸಿದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸ್ಮರಿಸುವ ಮತ್ತು ಗೌರವಿಸುವ ಕಾರ್ಯವನ್ನು ಮಾಡುವುದೇ ಈ ಕಾರ್ಯಕ್ರಮದ ಮುಖ್ಯ ಆಶಯವಾಗಿದೆ ಎಂದರು. ಇದು ಕೇವಲ ಅಂಬೇಡ್ಕರ್ ಮೂರ್ತಿ ಪ್ರತಿಷ್ಟಾಪನಾ ಸಮಿತಿಯ ಕಾರ್ಯಕ್ರಮವಲ್ಲ, ಇದು ಸಮಸ್ತ ದಾಂಡೇಲಿಗರ ಕಾರ್ಯಕ್ರಮವಾಗಬೇಕು. ಅಂಬೇಡ್ಕರ್ ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ. ಅವರು ಈ ದೇಶದ ಎಲ್ಲಾ ಸಮುದಾಯಕ್ಕೂ ಹಾಗೂ ಎಲ್ಲರಿಗೂ ನ್ಯಾಯಯುತವಾದ ಬದುಕುವ ಹಕ್ಕನ್ನು ಕಲ್ಪಿಸಿದ ಮಹಾನ್ ಚೇತನರಾಗಿದ್ದಾರೆ. ಅಂಬೇಡ್ಕರ್ ಅವರ ಆಶಯ ಮತ್ತು ತತ್ವಾದರ್ಶಗಳನ್ನು ನಾವು ನೀವೆಲ್ಲರೂ ಮೈಗೂಡಿಸಿಕೊಳ್ಳಬೇಕೆಂಬ ಸಂಕಲ್ಪದಡಿ ಮತ್ತು ನಮ್ಮ ದೇಶದ ಪರಮೋಚ್ಚ ಗ್ರಂಥವಾದ ಸಂವಿಧಾನದ ಮಹತ್ವವನ್ನು ಪ್ರತಿಯೊಬ್ಬರೂ ಅರಿತು ನಡೆದುಕೊಳ್ಳಬೇಕು. ಆ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು. ಈ ಕಾರ್ಯಕ್ರಮದ ಯಶಸ್ಸಿಗೆ ಎಲ್ಲ ಸಂಘ-ಸಂಸ್ಥೆಯವರು, ಎಲ್ಲ ರಾಜಕೀಯ ಪಕ್ಷದವರು ಹಾಗೂ ಸಮಸ್ತ ದಾಂಡೇಲಿಗರು ತುಂಬು ಹೃದಯದ ಸಹಕಾರವನ್ನು ನೀಡಿ, ಇದು ನಮ್ಮೆಲ್ಲರ ಕಾರ್ಯಕ್ರಮವಾಗುವ ರೀತಿಯಲ್ಲಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕೆಂದು ವಿನಂತಿಸಿದರು. ಏ:14ರ ಸೋಮವಾರ ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ನಗರಸಭೆಯ ಆವರದಲ್ಲಿರುವ ಅಂಬೇಡ್ಕರ್ ಮೂರ್ತಿ ಸ್ಥಳದವರೆಗೆ ಅದ್ದೂರಿ ಮೆರವಣಿಗೆಯನ್ನು ಆಯೋಜಿಸಲಾಗಿದ್ದು, ಈ ಮೆರವಣಿಗೆಯಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜನ ಭಾಗವಹಿಸಿ ನಮ್ಮೆಲ್ಲರ ಆರಾಧ್ಯ ದೇವರಾದ ಅಂಬೇಡ್ಕರ್ ಅವರನ್ನು ನಾವು ನೀವೆಲ್ಲರೂ ಜೊತೆಯಾಗಿ ಸ್ಮರಿಸೋಣ ಎಂದರು.

ಡಿವೈಎಫ್‌ಐ ಸಂಘಟನೆಯ ರಾಜ್ಯ ಸಮಿತಿಯ ಸದಸ್ಯರಾದ ಡಿ ಸ್ಯಾಮಸನ್, ಬಿಜೆಪಿ ತಾಲೂಕು ಘಟಕದ ಉಪಾಧ್ಯಕ್ಷರಾದ ಗುರು ಮಠಪತಿ, ಯುವ ಮುಖಂಡರಾದ ರಾಜೇಶ್ ರುದ್ರಪಾಟಿ, ಆದಿಜಾಂಬವಂತ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಚಂದ್ರಕಾಂತ ನಡಿಗೇರ, ನ್ಯಾಯವಾದಿ ವಿಶ್ವನಾಥ್ ಲಕ್ಷ್ಯಟ್ಟಿ, ಬಿಜೆಪಿ ಮುಖಂಡರಾದ ಅಶೋಕ ಪಾಟೀಲ್, ಕನ್ನಡಪರ ಸಂಘಟನೆಯ ಸಾಧಿಕ್ ಮುಲ್ಲಾ ಮೊದಲಾದವರು ಮಾತನಾಡಿ ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಎಲ್ಲರೂ ಒಗ್ಗಟ್ಟಾಗಿ ಮಾದರಿಯಾಗಿ ಮಾಡೋಣ. ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಸಹಕರಿಸಬೇಕೆಂದು ಕರೆ ನೀಡಿದರು.

300x250 AD

ಸಭೆಯಲ್ಲಿ ಉದ್ಯಮಿ ಪ್ರೇಮಾನಂದ ಗವಸ್, ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷ ರೇಣುಕಾ ಬಂದA, ನ್ಯಾಯವಾದಿ ಮುಸ್ತಾಕ್ ಶೇಖ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಪವನ್ ಕೊಣ್ಣೂರ್, ಬೀದಿ ಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾದ ಸಿಲೇಮಾನ್ ಸೈಪುದ್ದೀನ್ ಶೇಖ, ಪ್ರಮುಖರಾದ ಆರೀಶ ಖಾದರ್, ಶ್ರೀಕಾಂತ್ ಅಸೋದೆ, ಪ್ರಭುದಾಸ ಎನಿಬೇರಾ, ಈಶ್ವರಪ್ಪ ಹರಿಜನ, ರೋಹಿತ್ ಮಾಲ್ವಾಡೆ, ಅಸ್ಲಾಂ ನೀರಲಗಿ, ರಫೀಕ್ ಅಹ್ಮದ್ ಖಾನ್, ರೇಣುಕಾ ಮಾದರ, ಸರಸ್ವತಿ ಚೌವ್ಹಾಣ, ಉಸ್ಮಾನ್ ಶೇಖ, ಸೂರ್ಯನಾರಾಯಣ ಹರಿಜನ, ರಾಮಚಂದ್ರ ಕಾಂಬಳೆ, ಆಯಿಷಾ ಮುಕಾಶಿ, ಈಶ್ವರ ಗಾವಡಾ, ರಾಜೇಶ ಖಾನಪುರ, ಮಂಜುನಾಥ ಹತಿಜನ, ರಾಮು ಹರಿಜನ, ವಿನಾಯಕ ಹರಿಜನ, ರಮೇಶ ಬಾದ್ವಾನ್ಕರ, ಅಪ್ಪಾಸಾಬ ಕಾಂಬಳೆ, ವಿನೋದ ಮನಿಯಾರ್ಕರ್, ಸತೀಶ ಚೌವ್ಹಾಣ್, ರಾಜಶೇಖರ ನಿಂಬಾಳ್ಕರ, ಗಣೇಶ ಕೇರ್ಕರ, ವಿಜಯ ವಡ್ಡರ, ಸುನೀಲ್ ಮೆನನ್, ಆಜಾದ್ ಶೇಖ, ಯಲ್ಲಪ್ಪ ಹರಿಜನ, ಮಂಥಾನ್ ಶಿರ್ಸಾಟ್, ಯೋಹಾನ ಹರಿಜನ ಮೊದಲಾದವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top