ಶಿರಸಿ: ಇಲ್ಲಿಯ ಕರಕುಶಲ ಮಹಿಳೆ ವಿಜಯಲಕ್ಷ್ಮಿ ಅವರ ಕರಕುಶಲ ವಸ್ತುಗಳು ಯುಗಾದಿ ಸಂತೆಯಲ್ಲಿ ಪ್ರದರ್ಶನಗೊಂಡ ಚಿತ್ರಣವು ಚಂದನ ಟಿವಿಯಲ್ಲಿ ಬುಧವಾರ ರಾತ್ರಿ ಬಿತ್ತರಗೊಂಡಿದೆ.
ಪ್ರತಿ ಭಾನುವಾರ ಬೆಂಗಳೂರಿನಲ್ಲಿ ನಡೆಯುವ ಯುಗಾದಿ ಸಂತೆಯ ರಾಗಿಕಣ ಎಂಬುದು ಗಮನ ಸೆಳೆದಿದೆ. ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿ ಕರಕುಶಲ, ಅಪರೂಪದ ಕಲಾ ವಸ್ತುಗಳನ್ನು ಮಾಡಿ ಮಾರುಕಟ್ಟೆಯಲ್ಲಿ ಪ್ರದರ್ಶನ ಹಾಗೂ ಮಾರಾಟ ಮಾಡಿ ಅನೇಕರು ಗಮನ ಸೆಳೆದಿದ್ದಾರೆ.
ಮಾರುಕಟ್ಟೆಗಾಗಿ ಅನೇಕ ವಸ್ತುಗಳನ್ನು ಒಯ್ಯುವವರು ಎಜೆಂಟರು, ವ್ಯಾಪಾರಿಗಳು.ಆದರೆ ಅವುಗಳನ್ನು ಸಿದ್ದಪಡಿಸಿದವರಿಗೆ ಸಿಗುವುದು ಅತ್ಯಲ್ಪ ಎಂಬುದು ನಿಜಕ್ಕೂ ಅನ್ಯಾಯವಾದುದು. ಇಂತಹವುಗಳನ್ನು ಚಂದನದ ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ಡಾ. ಸೋಮೇಶ್ವರ ಬೆಳಕು ಚೆಲ್ಲುತ್ತಿದ್ದಾರೆ.
ಬಾಳೆ ಗಿಡದ ಕಡದ ಕವಚ (ಪಟ್ಟಿ)ವನ್ಮು ಒಣಗಿಸಿ ಅವುಗಳನ್ನು ಕಲಾತ್ಮಕವಾಗಿ ವಿವಿಧ ಪ್ರಸಾಧನಗಳನ್ನು ವಿಜಯಲಕ್ಷ್ಮಿ ಹಾಗು ಇತರರು ಸಿದ್ದಪಡಿಸುತ್ತಿದ್ದಾರೆ.