ಹೊನ್ನಾವರ: ಕರ್ನಾಟಕ ಅರಣ್ಯ ಇಲಾಖೆ, ಹೊನ್ನಾವರ ವಿಭಾಗ, ಹೊನ್ನಾವರ ಹಾಗೂ ಕುಮಟಾದ ಪ್ರತಿಷ್ಠಿತ ಕೆನರಾ ಕಾಲೇಜ್ ಸೊಸೈಟಿಯ ಡಾ.ಎ.ವಿ. ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ’ಬಾಯೋ ಕ್ಲಬ್’ ಇವರ ಸಂಯುಕ್ತಾಶ್ರಯದಲ್ಲಿ ಏ.7 ಹಾಗೂ 8 ರಂದು ’ಅಘನಾಶಿನಿ ಎಶ್ಚುರಿ ರಾಮಸರ್ ಸೈಟ್ : ಡೆವಲಪ್ಪಿಂಗ್ ಸಸ್ಟೇನಬಲ್ ಮೆನೇಜಮೆಂಟ್ ಕ್ರೈಟೇರಿಯಾ ಫಾರ್ ಇಕೋಸಿಸ್ಟಮ್ ಎಂಡ್ ಲೈವಲಿಹುಡ್’ ಈ ವಿಷಯದ ಮೇಲೆ ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಎರಡು ದಿನಗಳ ಅಂತರ್ರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಿದೆ. ಏ.7, ಮುಂಜಾನೆ 10.30ಕ್ಕೆ ವಿಚಾರ ಸಂಕಿರಣದ ಉದ್ಘಾಟನೆಯನ್ನು ಸಚಿವ ಮಂಕಾಳ ಎಸ್. ವೈದ್ಯ ನೆರವೇರಿಸಲಿದ್ದಾರೆ. ಶಾಸಕ ದಿನಕರ ಕೆ. ಶೆಟ್ಟಿ, ಐ.ಎಫ್.ಎಸ್. ಕನ್ಸರ್ವೇಟರ್ ಆಫ್ ಫಾರೆಸ್ಟ್ ವಸಂತ ರೆಡ್ಡಿ ಕೆ. ವಿ.,ವೇಸ್ಟ್ ಲ್ಯಾಂಡ್ ಇಂಟರನ್ಯಾಶನಲ್ ನಿರ್ದೇಶಕ ಡಾ. ರಿತೇಶ ಕುಮಾರ, ಕೆನರಾ ಕಾಲೇಜು ಸೊಸೈಟಿ ಕಾರ್ಯಾಧ್ಯಕ್ಷ ಎಚ್. ಕೆ. ಶಾನಭಾಗ ಉಪಸ್ಥಿತರಿದ್ದು ಹಾಗೂ ದಿಕ್ಸೂಚಿ ಭಾಷಣವನ್ನು ವಿಜ್ಞಾನಿ ಡಾ.ಎಂ. ಡಿ. ಸುಭಾಷ ಚಂದ್ರನ್, ಹಾಗೂ. ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಾ. ನಾರಾಯಣ ಕೆ ನಾಯಕ ವಹಿಸಲಿದ್ದಾರೆ. ವಿಚಾರ ಸಂಕಿರಣವನ್ನು ಸಹ ಪ್ರಾಧ್ಯಾಪಕ ಡಾ. ಪ್ರಕಾಶ ಪಂಡಿತ ಸಂಯೋಜಿಸಲಿದ್ದಾರೆ.
ವಿಚಾರ ಸಂಕಿರಣದ ಸಂಪನ್ಮೂಲ ವ್ಯಕ್ತಿಗಳಾದ ಯೋಗೀಶ ಸಿ. ಕೆ., ಐ.ಎಫ್.ಎಸ್., ಡೆಪ್ಯೂಟಿ ಕನ್ಸರ್ವೇಟರ್ ಆಫ್ ಫಾರೆಸ್ಟ್, ಹೊನ್ನಾವರ ಅರಣ್ಯ ವಿಭಾಗ, ಡಾ. ಪಿ. ಪ್ರಮೋದ, ಸಿನಿಯರ್ ಪ್ರಿನ್ಸಿಪಾಲ್ ಸೈಂಟಿಸ್ಟ್, ಸಿಕಾನ್, ಕೋಯಂಬತ್ತೂರ, ಡಾ. ದೀಪ್ತ ಸತೀಶ, ಪ್ರೊಫೆಸರ್ ಹಾಗೂ ವಿಭಾಗಾಧ್ಯಕ್ಷರು, ಮಣಿಪಾಲ್ ಸೆಂಟರ್ ಫಾರ್ ದ್ವೀಪಾ, ಸೃಷ್ಟಿ-ಮಣಿಪಾಲ್ ಇನ್ಸಟ್ಯೂಟ್, ಮಾಹೇ, ಬೆಂಗಳೂರು, ರಾಕೇಶ ಸೋನ್ಸ್, ಪ್ರೆಸಿಡೆಂಟ್, ಎಫ್.ಎಸ್.ಎಲ್., ಇಂಡಿಯಾ, ಪ್ರಕಾಶ ಪುರೋಹಿತ್, ಅಸೊಸಿಯೇಟ್ ಪಾರ್ಟ್ನರ್ ಸೌಥ್ ಏಷ್ಯಾ ಕೆಪಿಟಲ್, ಡಾ. ಡಿ. ಎಲ್. ರಾಠೋಡ್, ಪ್ರೊಫೆಸರ್, ಡಿಪಾರ್ಟಮೆಂಟ್ ಆಫ್ ಸ್ಟಡೀಸ್ ಇನ್ ಮರೀನ್ ಬಾಯೊಲೊಜಿ, ಕರ್ನಾಟಕ್ ಯುನಿವರ್ಸಿಟಿ, ಪಿ.ಜಿ. ಸೆಂಟರ್, ಕಾರವಾರ, ಡಾ. ಪ್ರಕಾಶ್ ಮೆಸ್ತ, ಎನ್.ಆರ್.ಡಿ.ಎಂ.ಎಸ್., ಉತ್ತರ ಕನ್ನಡ, ಕಾರವಾರ, ಧಾನ್ ಫೌಂಡೇಶನ್, ಮಧುರೈ ಹಾಗೂ ನಾಗರಾಜ ಎಂ. ನಾಯ್ಕ, ಇನ್ನೊವೇಟಿವ್ ಫಾರ್ಮರ್, ಕಾಗಾಲ, ಕುಮಟಾ ತಮ್ಮ ಪ್ರಬಂಧವನ್ನು ಮಂಡಿಸಲಿದ್ದಾರೆ. ಆಸಕ್ತ ವಿದ್ಯಾರ್ಥಿಗಳಿಗೆ ವೇದಿಕೆಯಲ್ಲಿ ತಮ್ಮ ಪ್ರಬಂಧವನ್ನು ಮಂಡಿಸಲು ಅವಕಾಶವನ್ನು ನೀಡುವುದರ ಜೊತೆಗೆ ರಾಮ್ ಸರ್ ಸ್ಥಳದ ವೀಕ್ಷಣೆಗೆ ಸದವಕಾಶವನ್ನು ಒದಗಿಸಲಾಗಿದೆ. ವಿಚಾರ ಸಂಕಿರಣದ ಸಂಪನ್ಮೂಲ ವ್ಯಕ್ತಿಗಳಾದ ನಾಗರಾಜ ಎಂ. ನಾಯ್ಕ ಅಳವೆದಂಡೆಯಲ್ಲಿ ಬೆಳೆಯುವ ಅಳಿವಿನಂಚಿನಲ್ಲಿರುವ ಭತ್ತದ ತಳಿಗಳ ಪ್ರದರ್ಶನವನ್ನು ಏರ್ಪಡಿಸಿದ್ದಾರೆ.
ವಿಚಾರ ಸಂಕಿರಣದ ಮುಕ್ತಾಯ ಸಮಾರಂಭವು ಏ.8, ಮಧ್ಯಾಹ್ನ 4.00 ಗಂಟೆಗೆ ಡಾ. ನಾರಾಯಣ ಕೆ. ನಾಯಕ, ಪ್ರಾಚಾರ್ಯರು, ಡಾ. ಎ. ವಿ. ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಇವರ ಅಧ್ಯಕ್ಷತೆಯಲ್ಲಿ ನಡೆಯುತ್ತದೆ. ಮುಖ್ಯ ಅತಿಥಿಗಳಾಗಿ ವಸಂತ ರೆಡ್ಡಿ ಕೆ. ವಿ., ಐ.ಎಫ್.ಎಸ್., ಕನ್ಸರ್ವೇಟರ್ ಆಫ್ ಫಾರೆಸ್ಟ್, ಕೆನರಾ ಸರ್ಕಲ್, ಯೋಗೀಶ ಸಿ. ಕೆ., ಐ.ಎಫ್.ಎಸ್., ಡೆಪ್ಯೂಟಿ ಕನ್ಸರ್ವೇಟರ್ ಆಫ್ ಫಾರೆಸ್ಟ್, ಹೊನ್ನಾವರ ಅರಣ್ಯ ವಿಭಾಗ ಹಾಗೂ ಡಾ. ಎಂ. ಡಿ. ಸುಭಾಷ ಚಂದ್ರನ್, ವಿಜ್ಞಾನಿಗಳು, ಸೆಂಟರ್ ಫಾರ್ ಇಕೊಲೊಜಿಕ ಸೈನ್ಸ್, ಐ.ಐ.ಎಸ್.ಸಿ., ಬೆಂಗಳೂರು ಭಾಗವಹಿಸುವರು. ವಿಚಾರ ಸಂಕಿರಣದ ಸಂಘಟಕರು ಸರ್ವರಿಗೂ ಆದರದ ಸ್ವಾಗತವನ್ನು ಕೋರಿದ್ದಾರೆ.