ದಾಂಡೇಲಿ : ನಗರದ ದಂಡಕಾರಣ್ಯ ಇಕೋ ಪಾರ್ಕ್ ಹತ್ತಿರ ಆಹಾರವನ್ನರಸಿ ಕಾಡಿನಿಂದ ನಾಡಿಗೆ ಬಂದಿದ್ದ ಜಿಂಕೆಯೊಂದನ್ನು ಬೀದಿನಾಯಿಗಳು ಅಟ್ಟಾಡಿಸಿ ಲೆನಿನ್ ರಸ್ತೆಯ ಹತ್ತಿರ ದಾಳಿ ಮಾಡಲು ಯತ್ನಿಸಿದ ಸಂದರ್ಭದಲ್ಲಿ ಸ್ಥಳೀಯರು ಜಿಂಕೆಯನ್ನು ನಾಯಿಗಳ ದಾಳಿಯಿಂದ ರಕ್ಷಿಸಿ, ಆರೈಕೆ ಮಾಡಿ, ಆನಂತರ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹಸ್ತಾಂತರಿಸಿದ ಘಟನೆ ಬುಧವಾರ ನಡೆದಿದೆ.
ಯುವ ಮುಖಂಡ ಹಾಗೂ ಮಂಜು ಆರ್ಟ್ಸ್ ಮಾಲಕರಾದ ಮಂಜು ಮತ್ತು ಸ್ಥಳೀಯರಾದ ಮೋಹನ್ ಹಾಗೂ ಫಾರೂಕ್ ಅವರು ಜಿಂಕೆಯನ್ನು ನಾಯಿಗಳ ದಾಳಿಯಿಂದ ರಕ್ಷಣೆ ಮಾಡಿ ವನ್ಯ ಕಾಳಜಿಯನ್ನು ಮೆರೆದಿದ್ದಾರೆ.