ವಿದ್ಯಾರ್ಥಿಗಳಿಗೆ ವಾಲಿಬಾಲ್, ಹಾಗೂ ವಿದ್ಯಾರ್ಥಿನಿಯರಿಗೆ ಹಗ್ಗ ಜಗ್ಗಾಟ ಸ್ಪರ್ಧೆ
ಶಿರಸಿ: ದೇಶಕ್ಕಾಗಿ ಪ್ರಾಣ ನೀಡಿದ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ರಾಜ್ ಗುರು , ಸುಖದೇವ್ ಇವರ ಬಲಿದಾನದ ಸ್ಮರಣೆಗಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಶಿರಸಿ ವಿಭಾಗದ ವತಿಯಿಂದ ಏಪ್ರಿಲ್ 5 ಕ್ಕೆ ನಗರದ ಎಂ.ಇ.ಎಸ್ ವಾಣಿಜ್ಯ ಮಹಾವಿದ್ಯಾಲಯದ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೂಟ ಆಯೋಜಿಸಲಾಗಿದೆ. ಮಾರಿಕಾಂಬಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಎಬಿವಿಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾದ ದರ್ಶನ್ ಹೆಗಡೆ ,ಹಾಗೂ ರಾಜ್ಯ ಕಾರ್ಯಾಸಮಿತಿ ಸದಸ್ಯರಾದ ಸಂಜಯ್ ಗಾoವ್ಕರ್ , ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಶಶಾಂಕ್ ನಾಯ್ಕ್ ಪೋಸ್ಟರ್ ಬಿಡುಗಡೆ ಮಾಡಿದರು. ಪ್ರಮುಖರಾದ ಅಕ್ಷಯ್ ಮೊಗೇರ , ವೆಂಕಟೇಶ್ ನಾಯಕ್ ಇದ್ದರು.
ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾದ ದರ್ಶನ್ ಹೆಗಡೆ ಹಾಗೂ ಸಂಜಯ್ ಗಾoವ್ಕರ್ ಮಾತನಾಡಿ ಯೌವ್ವನದಲ್ಲೇ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಕ್ರಾಂತಿಕಾರಿಗಳ ಬಲಿದಾನದ ಸ್ಮರಣೆಗಾಗಿ ಈ ಕ್ರೀಡಾಕೂಟ ಯೋಜಿಸಲಾಗುತ್ತಿದೆ. ದೈಹಿಕವಾಗಿ ಸದೃಢವಾಗಿರುವ ಯುವಕರೇ ಈ ದೇಶದ ಆಸ್ತಿ. ಸ್ವಾಮಿ ವಿವೇಕಾನಂದರು ಬಯಸಿದ್ದು ಕಬ್ಬಿಣದಂತ ಮಾಸ ಕಂಡ ಹಾಗೂ ಉಕ್ಕಿನಂತ ನರಮಂಡಲ ಹೊಂದಿರುವ ಯುವಜನತೆಯನ್ನು, ಕ್ರೀಡೆಗೆ ಜಗತ್ತನ್ನು ಒಂದುಗೂಡಿಸುವ ಶಕ್ತಿ ಇದೆ. ಆ ಕಾರಣಕ್ಕಾಗಿ ಕ್ರೀಡಾಕೂಟದ ಮೂಲಕ ದೇಶಕ್ಕಾಗಿ ಬಲಿದಾನ ಮಾಡಿದ ಕ್ರಾಂತಿಕಾರಿಗಳನ್ನು ಸ್ಮರಿಸಲಾಗುತ್ತಿದೆ ಎಂದು ಹೇಳಿದರು.
ವಿದ್ಯಾರ್ಥಿಗಳಿಗಾಗಿ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಿದ್ದು ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ಹಾಗೂ ಬಲಿದಾನ ಟ್ರೋಪಿಯನ್ನು ಇರಿಸಲಾಗಿದೆ. ವಿದ್ಯಾರ್ಥಿನಿಯರಿಗೆ ಹಗ್ಗ ಜಗ್ಗಾಟದ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಭಾಗಗಳಿಂದ ತಂಡಗಳು ಆಗಮಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು . ಕ್ರೀಡಾಕೂಟದ ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿಗಳು ಈ ಸಂಖ್ಯೆಗಳನ್ನು ಸಂಪರ್ಕಿಸಬಹುದು
81237 32028 , 7975165271 ಎಂದು ತಿಳಿಸಿದರು.