ಬನವಾಸಿ: ಬನವಾಸಿ ಸೊರಬ ಮುಖ್ಯ ರಸ್ತೆಯ ಯಡೂರಬೈಲ್ ಬಳಿಯಿರುವ ವರದಾ ನದಿ ಸೇತುವೆ ಕೆಳಗೆ ಅಪರಿಚಿತ ಶವವೊಂದು ಬುಧವಾರ ಪತ್ತೆಯಾಗಿದೆ. ಶವವು ಸಂಪೂರ್ಣ ಕೊಳೆತುಹೋದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸುಮಾರು 45 ರಿಂದ 55ವರ್ಷದೊಳಗಿನ ಪುರುಷನ ಶವವೆಂದು ಪ್ರಾಥಮಿಕ ವರದಿಯಲ್ಲಿ ತಿಳಿದು ಬಂದಿದೆ. ಬನವಾಸಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಪರಿಚಿತ ಶವ ಪತ್ತೆ
