ಶಿರಸಿ: ಯಕ್ಷಸಿರಿ ಯಕ್ಷಗಾನ ಮತ್ತು ಸಾಂಸ್ಕೃತಿಕ ವೇದಿಕೆ ಮೆಣಸಿ ವತಿಯಿಂದ ತಾಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆ ಕಡೆಮನೆ ಕಟ್ಟೆಯಲ್ಲಿ ಏ.5 ರಿಂದ 14 ನೇ ವರ್ಷದ ಯಕ್ಷಗಾನ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ. ಅನುಭವಿ ಯಕ್ಷಗಾನ ಕಲಾವಿದ ನರೇಂದ್ರ ಅತ್ತೀಮುರುಡು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಲಿದ್ದು, ತರಬೇತಿಯನ್ನು ನೀಡಲಿದ್ದಾರೆ. ಆಸಕ್ತರು ಮಾ.31 ರ ಒಳಗೆ ಹೆಸರನ್ನು ನೋಂದಾಯಿಸಿಕೊಳ್ಳಲು ಸಂಘಟಕರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ Tel:+919480320086,Tel:+919449292895 ಸಂಖ್ಯೆಗೆ ಸಂಪರ್ಕಿಸಲು ಕೋರಿದೆ.
ಏ.5ರಿಂದ ಯಕ್ಷಗಾನ ತರಬೇತಿ ಶಿಬಿರ
