ಸಿದ್ದಾಪುರ: ತೋಟಗಾರಿಕೆ ಇಲಾಖೆ ಮತ್ತು ರಾಷ್ಟ್ರೀಯ ಜೇನು ಮಂಡಳಿ ನವದೆಹಲಿ ಹಾಗೂ ಭಾಗ್ಯವಿಧಾತ ರೈತ ಉತ್ಪಾದಕ ಸಂಘ,ಬಿಳಗಿ ಇವರುಗಳ ಸಂಯುಕ್ತ ಆಶ್ರಯದಲ್ಲಿ 2024-25 ನೇ ಸಾಲಿನ ಜಿಲ್ಲಾಮಟ್ಟದ ವೈಜ್ಞಾನಿಕ ಜೇನು ಬೇಸಾಯ ಪದ್ಧತಿ ಕಾರ್ಯಾಗಾರ ಏರ್ಪಡಿಸಲಾಗಿತ್ತು. ತೋಟಗಾರಿಕೆ ಮಹಾವಿದ್ಯಾಲಯ ಶಿರಸಿ ವಿದ್ಯಾರ್ಥಿಗಳು ಪ್ರಾರ್ಥನೆ ಮತ್ತು ರೈತ ಗೀತೆಯೊಂದಿಗೆ ಶೋಭೆ ತಂದರು. ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಅರುಣ್ ಹೆಚ್. ಜಿ. ಎಲ್ಲರನ್ನು ಸ್ವಾಗತಿಸಿದರು. ತೋಟಗಾರಿಕೆ ಉಪನಿರ್ದೇಶಕರಾದ ಡಾ. ಬಿ.ಪಿ. ಸತೀಶ್ ಪ್ರಾಸ್ತಾವಿಕ ನುಡಿ ತಿಳಿಸಿದರು. ತಾಲ್ಲೂಕ ಕೃಷಿಕ ಸಮಾಜ ಅಧ್ಯಕ್ಷ ವೀರಭದ್ರ ನಾಯ್ಕ್ ಜೇನುತುಪ್ಪ ಯಂತ್ರದ ಮುಖಾಂತರ ಜೇನಿನ ಎರಿಗಳಿಂದ ತುಪ್ಪ ಬಿಡಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು ಹಾಗೂ ಜೇನು ಕೃಷಿಯ ಮಹತ್ವದ ಬಗ್ಗೆ ರೈತರಿಗೆ ತಿಳಿಸಿದರು. ತೋಟಗಾರಿಕೆ ಉಪನಿರ್ದೇಶಕರಾದ ಡಾ. ಬಿ.ಪಿ. ಸತೀಶ್ ರವರು ಜೇನು ಕೃಷಿಕರಿಗಾಗಿ ಮಧು ಸಿಂಚನ ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬಿಳಗಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜು ದ್ಯಾವ ನಾಯ್ಕ ಮಾತನಾಡಿ ಜೇನು ಕೃಷಿಯನ್ನು ಉದ್ಯಮವಾಗಿ ಬೆಳೆಸಲು ರೈತರಿಗೆ ಕರೆ ನೀಡಿದರು. ವೇದಿಕೆಯ ಮೇಲೆ ಭಾಗ್ಯವಿಧಾತ ರೈತ ಉತ್ಪಾದಕ ಸಂಘ ಬಿಳಿಗಿ ಅಧ್ಯಕ್ಷ ಪ್ರಸನ್ನ ಹೆಗಡೆ, ಸಿದ್ದಾಪುರ ತಾಲ್ಲೂಕು ಆತ್ಮಾ ಸಮಿತಿ ಅಧ್ಯಕ್ಷ ಪರಮೇಶ್ವರ ಭಟ್, ಶ್ರೀಮತಿ ಮಾಲಿನಿ ಮಡಿವಾಳ, ವಸಂತ ದಾಸ ನಾಯ್ಕ ಗ್ರಾಮ ಪಂಚಾಯತ್ ಸದಸ್ಯರು ಬಿಳಗಿ, ಕಾನಸೂರು ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಮತಿ ಅನಿತಾ ನಾಯ್ಕ , ದೊಡ್ಮನೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಾರದಾ ವಿಘ್ನೇಶ್ವರ ಹೆಗಡೆ, ಬಿದ್ರಕಾನ್ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶ್ಯಾಮಲಾ ಗೌಡ, ಕ್ಯಾದಗಿ ಗ್ರಾಮ ಪಂಚಾಯತ್ ಶ್ರೀಮತಿ ಶಾಂತಲಾ ಹರೀಶ ನಾಯ್ಕ , ಪ್ರಗತಿಪರ ಜೇನು ಕೃಷಿಕ ಬೆನಕ ನಾಯ್ಕ ಕ್ಯಾದಗಿ ಹಾಜರಿದ್ದರು. ಡಾ. ಮಂಜುನಾಥ್ ತೋಟದ ಸಹಾಯಕ ತೋಟಗಾರಿಕೆ ನಿರ್ದೇಶಕರು ಶಿರಸಿ ಹಾಗೂ ಡಾ. ಧನರಾಜ್ ಸಹ ಪ್ರಾಧ್ಯಾಪಕರು ತೋಟಗಾರಿಕೆ ಮಹಾವಿದ್ಯಾಲಯ ಶಿರಸಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಜೇನು ಕೃಷಿ ವಿಭಾಗ ಜಿಕೆವಿಕೆ ಬೆಂಗಳೂರು ಇದರ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ. ಕೆ.ಎಸ್.ಜಗದೀಶ್ ಹಾಜರಿದ್ದು ಜೇನು ಸಾಕಾಣಿಕೆ ಮತ್ತು ಜೇನು ಉತ್ಪಾದನೆಯಲ್ಲಿ ಪ್ರಾಯೋಗಿಕ ಸವಾಲುಗಳು ಮತ್ತು ಪರಿಹಾರ ಹಾಗೂ ಸ್ಥಳಾಂತರ ಜೇನು ಕೃಷಿಯ ಬಗ್ಗೆ ರೈತರಿಗೆ ಮಾಹಿತಿ ನೀಡಿದರು. ಅದೇ ರೀತಿ ಪ್ರಗತಿಪರ ಜೇನು ಕೃಷಿಕ ಭಾರ್ಗವ ಹೆಗಡೆ ಶೀಗೆಹಳ್ಳಿ ಶಿರಸಿ ಮುಜಂಟಿ ಜೇನು ಕೃಷಿಯ ಪ್ರಾಮುಖ್ಯತೆ ಬಗ್ಗೆ ಮಾಹಿತಿ ನೀಡಿದರು. ತಾಲ್ಲೂಕಿನ ವಿವಿಧ ಭಾಗಗಳಿಂದ 200 ಕ್ಕೂ ಹೆಚ್ಚು ಆಸಕ್ತ ಜೇನು ಕೃಷಿಕರು ಹಾಜರಿದ್ದರು. ಮಧುವನ ಕೇಂದ್ರದಲ್ಲಿ ಇಡಲಾದ ಜೇನು ಕೃಷಿಯ ವಿವಿಧ ಪ್ರದರ್ಶಿಕೆಗಳು ಜೇನುಕೃಷಿಕರ ಗಮನ ಸೆಳೆದವು. ಸಹಾಯಕ ತೋಟಗಾರಿಕೆ ಅಧಿಕಾರಿ ಬಸಪ್ಪ ಬಂಡಿ ವಂದಿಸಿದರು. ಸಹಾಯಕ ತೋಟಗಾರಿಕೆ ಅಧಿಕಾರಿ ಕಾಶಿನಾಥ್ ಪಾಟೀಲ್, ಕಾರ್ಯಕ್ರಮ ನಿರೂಪಿಸಿದರು. ತೋಟಗಾರಿಕೆ ಇಲಾಖೆಯ ಎಲ್ಲಾ ಸಿಬ್ಬಂದಿಗಳು ಹಾಜರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಲು ಸಹಕರಿಸಿದರು.
ಬಿಳಗಿಯಲ್ಲಿ ಜೇನಿನ ಝೇಂಕಾರ
