Slide
Slide
Slide
previous arrow
next arrow

ಆಡುವ ಮಾತುಗಳಿಗೆ ಕಿವಿಯಾಗದೇ ಪ್ರಾಮಾಣಿಕ ಕೆಲಸ ನಿರ್ವಹಿಸಿ: ಸಚಿವ ವೈದ್ಯ

300x250 AD

ಶಿರಾಲಿಯ ಹಳೆಕೋಟೆ ಹನುಮಂತ ದೇವಸ್ಥಾನದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆ

ಭಟ್ಕಳ: ರಾಜ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು, ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯು ಇಲ್ಲಿನ ಶಿರಾಲಿಯ ಶ್ರೀ ಹಳೆಕೋಟೆ ಹನುಮಂತ ದೇವಸ್ಥಾನದ ಸಭಾಂಗಣದಲ್ಲಿ  ಭಟ್ಕಳ ಮತ್ತು ಮಂಕಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯು ನಡೆಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ
ಉದ್ಘಾಟಿಸಿ ಮಾತನಾಡಿದ ಸಚಿವ ಮಂಕಾಳ ವೈದ್ಯ, ಪ್ರತಿ ಪಂಚಾಯತ ಮಟ್ಟದಲ್ಲಿ ಸರಕಾರದ ಯೋಜನೆಯನ್ನು ತಲುಪಿಸುವ ಕೆಲಸ ಮಾಡುತ್ತಿದ್ದೇವೆ. ನೀರಿನ ಸಮಸ್ಯೆಗಳನ್ನು ನನ್ನ ಗಮನಕ್ಕೆ ತಂದಿದ್ದು ಈ ಕುರಿತು ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳ ಸಭೆಯನ್ನು ಮಾಡಿದ್ದೇವೆ. ಮುಂದಿನ ವರ್ಷ ಈ ನೀರಿನ ಸಮಸ್ಯೆ ಕ್ಷೇತ್ರದಲ್ಲಿ ತಲೆದೋರುವುದಿಲ್ಲ. ಕುಡಿಯುವ ನೀರಿನ ಸರಬರಾಜು ಯೋಜನೆಗೆ 240 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಬಿಡುಗಡೆ ಮಾಡಲಾಗಿದ್ದು, ಸದ್ಯ ಪೈಪ್ ಲೈನ್ ಕಾಮಗಾರಿ ಹಂತದಲ್ಲಿದೆ. ಇದರ ಜೊತೆಗೆ ಭಟ್ಕಳ ಪುರಸಭೆಗೆ ಪ್ರತ್ಯೇಕವಾಗಿ 37 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಿದ್ದೇವೆ. ಹೊನ್ನಾವರ ಮಂಕಿಯಲ್ಲಿಯೂ ಸಹ 106 ಕೋಟಿ ರೂ. ವೆಚ್ಚದಲ್ಲಿ ಇನ್ನು ಟೆಂಡರ ಆಗಬೇಕಾಗಿದ್ದು, ಭಟ್ಕಳ ಜಾಲಿಯ ಪಟ್ಟಣ ಪಂಚಾಯತನಲ್ಲಿ 86 ಕೋಟಿ ರೂ. ವೆಚ್ಚದಲ್ಲಿ ಸರಕಾರದಿಂದ ಕುಡಿಯುವ ನೀರಿನ ಯೋಜನೆ ಬಿಡುಗಡೆಯಾಗಬೇಕಾಗಿದ್ದು ಸರಕಾರದ ಹಂತದಲ್ಲಿದೆ. ಇವೆಲ್ಲದರ ಬಳಿಕ ಕ್ಷೇತ್ರದಲ್ಲಿ ಎಲ್ಲಿಯೂ ಸಹ ಕುಡಿಯುವ ನೀರಿನ ಸಮಸ್ಯೆಗಳು ಮುಂಬರಲಿರುವ ದಿನಗಳಲ್ಲಿ ಎದುರಾಗುವುದಿಲ್ಲ ಎಂದರು. 

ಮನಮೋಹನ ಸಿಂಗ್ ಪ್ರಧಾನಮಂತ್ರಿ ಆಗಿರುವ ಅವಧಿಯಲ್ಲಿ ಅರಣ್ಯ ಅತಿಕ್ರಮಣದಾರರಿಗೆ ಹಕ್ಕು ಪತ್ರ ನೀಡಬೇಕೆಂಬ ಆದೇಶ ಮಾಡಿದ್ದು ಆದರೆ ಅಂದು ರಾಜ್ಯದಲ್ಲಿ ಕ್ರಮವಾಗಿ ಬಿಜೆಪಿ ಸರಕಾರ ಮತ್ತು ಸಮಿಶ್ರ ಸರಕಾರವಿದ್ದ ಹಿನ್ನೆಲೆ 2013 ರ ತನಕ ಅದು ಕಾರ್ಯರೂಪಕ್ಕೆ ಬಂದಿಲ್ಲ. ನಂತರ ಪಂಚಾಯತ, ತಾಲೂಕು ಜಿಲ್ಲಾ ಸಮಿತಿ ರಚಿಸಿ ಜಿ.ಪಿ.ಎಸ್. ನೀಡಿತ್ತು. ಕೆಲವು ಅತಿಕ್ರಮಣದಾರರಿಗೆ ಹಕ್ಕು ಪತ್ರ ಸಹ ನೀಡಿದ್ದೇವೆ. ನಮ್ಮ ಕ್ಷೇತ್ರದಲ್ಲಿ 25 ಸಾವಿರ ಅತಿಕ್ರಮಣದಾರರಿದ್ದು ಅವರೆಲ್ಲರಿಗೂ ಸಮಸ್ಯೆ ಪರಿಹಾರಕ್ಕೆ ನಮ್ಮ ಕೆಲಸವು ಮುಂದುವರೆಯುತ್ತಿದೆ.‌
ಆದರೆ ಹೊಸ ಅತಿಕ್ರಮಣಕ್ಕೆ ನಮ್ಮ‌ ಸಹಕಾರ ಇಲ್ಲ‌ ಎಂದರು. 

ಭಟ್ಕಳದಲ್ಲಿ ವಿದ್ಯುತ್ ಘಟಕ ನಿರ್ಮಾಣ ಹಂತದಲ್ಲಿದ್ದು, ಕ್ಷೇತ್ರದಲ್ಲಿ ಮುಂದಿನ ದಿನದಲ್ಲಿ ವಿದ್ಯುತ್ ಸಮಸ್ಯೆಗಳು ತಲೆದೋರುವುದಿಲ್ಲ.
ಭಟ್ಕಳದಲ್ಲಿ ಸಾಗರ ರಸ್ತೆ – ಬಂದರ ರಸ್ತೆಯ 25 ಕೋಟಿ ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಯು ನಡೆಯುತ್ತಿದ್ದು ಅದು ಸಹ ಕ್ಷೇತ್ರದಲ್ಲಿ ಶಾಶ್ವತ ಅಭಿವೃದ್ಧಿಯಾಗಂತಾಗಲಿದೆ. ಗ್ಯಾರಂಟಿ ಯೋಜನೆಯ ಫಲಾನುಭವಿಗಳಿಗೆ ನೇರವಾಗಿ ಅವರ ಖಾತೆಗೆ ಹಣವು ತಲುಪುತ್ತಿದೆ. ಇನ್ನು ಕಾರ್ಯಕರ್ತರ ಸಹ ಯಾವುದೇ ಗೊಂದಲಕ್ಕೆ ಒಳಗಾಗದೇ ಯಾವುದೇ ಸಮಸ್ಯೆಗಳು ಇದ್ದರೆ ನೇರವಾಗಿ ನನ್ನ‌ ಬಳಿಯಲ್ಲಿಯೇ ಬಂದು ಮಾತನಾಡಬೇಕು ಹೊರತು ಪಕ್ಷಕ್ಕೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು.
ಹಣದ ಲಭ್ಯತೆಯ ಕೊರತೆಯಿಂದ ಈ ಬಾರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಘೋಷಣೆ ಮಾಡಿಲ್ಲವಾಗಿದ್ದು ಮುಂದಿನ ಬಜೆಟನಲ್ಲಿ ಘೋಷಣೆಯ ನಿರೀಕ್ಷೆಯಿದೆ. ಇಲ್ಲವಾದಲ್ಲಿ ನಾನು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲಿದ್ದೇವೆ. ಕುಮಟಾ ಹೊನ್ನಾವರ ಅಥವಾ ಭಟ್ಕಳ ಈ ಮೂರು ಭಾಗದಲ್ಲಿ ಆಗುವ ನಿರೀಕ್ಷೆ ಇದೆ. ಹಾಗೂ ಮುರುಡೇಶ್ವರವನ್ನು ಬಂದರು ಪ್ರವಾಸೋದ್ಯಮ ಅಭಿವೃದ್ಧಿ ಜಾಗವಾಗಿ ಮಾಡಲು ಪ್ರಯತ್ನ ನಡೆಯುತ್ತಿದೆ ಎಂದರು.

ಬೇಕಾಬಿಟ್ಟಿ ಮಾತನಾಡುವವರ ಮಾತಿಗೆ ಕಾರ್ಯಕರ್ತರು ಕಿವಿಗೊಡಬೇಡಿ.ನಮ್ಮದು ಕೆಲಸ ಮಾಡುವ ಚಿಂತನೆ ಹೊರತು ಬರಿ ಬಾಯಲ್ಲಿ ಹೇಳುವ ಕೆಲಸ ನಾವು ಮಾಡುವುದಿಲ್ಲ ಎಂದ ಅವರು ನಮ್ಮ ಸರಕಾರ ನುಡಿದಂತೆ ಎಲ್ಲಾ ಕೆಲಸವನ್ನು ಮಾಡಿದ್ದೇವೆ ಎಂದರು. 

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಾಯಿ ಗಾಂವಕರ ಮಾತನಾಡಿ, ಸರಕಾರದ ನಡೆ ಕಾರ್ಯಕರ್ತರ ಕಡೆ ಎಂದರೆ ಅವರ ಸಮಸ್ಯೆ ಮತ್ತು ಅವರ ಅಭಿಪ್ರಾಯಗಳನ್ನು ಆಲಿಸುವ ಉದ್ದೇಶ ಆಗಿದೆ. 
ಪಕ್ಷ ಸಂಘಟನೆಯನ್ನು ಇನ್ನಷ್ಟು ಬಲ ಪಡಿಸುವ ಜೊತೆಗೆ ಮುಂಬರಲಿರುವ ಚುನಾವಣೆಯಲ್ಲಿ ಬೂತ್ ಮಟ್ಟದಿಂದ ಜಿಲ್ಲಾ ಮಟ್ಟದ ತನಕ ಕಾರ್ಯಕರ್ತರನ್ನು ಒಗ್ಗೂಡಿಸುವ ಕಾರ್ಯಕ್ರಮ ಇದಾಗಿದೆ.‌

300x250 AD

ಬೂತ್‌ನಿಂದ ಜಿಲ್ಲಾ ಮಟ್ಟದ ಕಾರ್ಯಕರ್ತರ, ಮುಖಂಡರ, ಬ್ಲಾಕ್ ಸಮಿತಿ ಪದಾಧಿಕಾರಿಗಳ ಡಾಟಾ ಸಂಗ್ರಹಣೆ ಮತ್ತು ಗೂಗಲ್ ಪಾರ್ಮ ತುಂಬಿಕೊಡುವ ಕೆಲಸ ಮಾಡಬೇಕಿದೆ. ಹೊಸಬರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ ಪಕ್ಷಕ್ಕೆ ಸೇರಿಸಿಕೊಳ್ಳಬೇಕು. ಸಮಿತಿಗಳನ್ನು ವಿಸರ್ಜನೆ ಮಾಡಿ ಮತ್ತೆ ಪುನರ್‌ ರಚನೆ ಮಾಡಬೇಕಾಗಿದೆ. ಬಿಜೆಪಿ ಕೋಮುವಾದಿ ಪಕ್ಷವಾಗಿದೆ. ಜೆ.ಡಿ.ಎಸ್. ಜಾತ್ಯಾತೀತ ಪಕ್ಷವಾದರು ಸಹ ಬಿಜೆಪಿಯಂತಹ ಕೋಮುವಾದಿ ಪಕ್ಷದ ಜೊತೆಗೆ ಕೈಜೋಡಿಸಿ ಜನರನ್ನು ದಾರಿ ತಪ್ಪಿಸುವ ಕೆಲಸವನ್ನು ಜೆ.ಡಿ.ಎಸ್ ಬಿಜೆಪಿ ಮಾಡುತ್ತಿದೆ ಎಂದರು. 

ಕಾಂಗ್ರೆಸ್ ಮುಖಂಡ ತಂಜೀ ಅಧ್ಯಕ್ಷ ಇನಾಯತವುಲ್ಲಾ ಶಾಬಂದ್ರಿ ಮಾತನಾಡಿ ‘ ಜೆಡಿಎಸ್ ಪಕ್ಷದಲ್ಲಿನ ಜಾತ್ಯಾತೀತತೆ ಎನ್ನುವ ಶಬ್ಧದ ಅರ್ಥವು ಅಳಿಸಿಹೋಗಿದೆ. ಹಾಗಾಗಿ ನಮಗೆ ಅಲ್ಲಿನ ವ್ಯವಸ್ಥೆ ಸರಿಯಿಲ್ಲದ ಹಿನ್ನೆಲೆ ಕಳೆದ 18 ತಿಂಗಳ ಹಿಂದೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಹೊಂದಿದ್ದೇನೆ. ಜಾತ್ಯಾತೀತ ಕಾಂಗ್ರೆಸ ಪಕ್ಷದಲ್ಲಿ ಎಲ್ಲಾ ಹಂತದಲ್ಲಿಯು ಕೆಲಸ ಮಾಡಲು ನಾನು ಸಿದ್ದನಿದ್ದೇನೆ. ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು ಉತ್ತಮರಾಗಿದ್ದು ಅವರಿಂದ ಕ್ಷೇತ್ರದಲ್ಲಿ ಸಾಕಷ್ಟು ಕೆಲಸಗಳು ಆಗುತ್ತಿದ್ದು ಅವರಿಗೆ ಸಹಕಾರಿಯಾಗಿ ಪಕ್ಷದಲ್ಲಿ ಕೆಲಸ ನಿರ್ವಹಿಸಲಿದ್ದೇನೆ ಎಂದರು.

ಪ್ರಾಸ್ತಾವಿಕವಾಗಿ ಬ್ಲಾಕ್ ಕಾಂಗ್ರೆಸ್ ಸಮಿತಿ ಮಂಕಿ ಅಧ್ಯಕ್ಷ ಗೋವಿಂದ ನಾಯ್ಕ ಮಾತನಾಡಿದ್ದು ಈ ಹಿಂದೆ ಸಚಿವರಾದವರು ಬೆಂಗಳೂರಿಗೆ ಮಾತ್ರ ಸೀಮಿತರಾಗಿರುತ್ತಿದ್ದರು. ಆದರೆ ಸಚಿವ ಮಂಕಾಳ ವೈದ್ಯ ಅವರು ತಮ್ಮ ಕ್ಷೇತ್ರದಲ್ಲಿ ಹೆಚ್ಚಿನ ಪಾಲು ಜನರೊಂದಿಗೆ, ಕಾರ್ಯಕರ್ತರೊಂದಿಗೆ ಬೆರೆತು ಅವರು ಕೆಲಸವನ್ನು ಸರಕಾರದ ಅಭಿವೃದ್ಧಿ ಕಾರ್ಯವನ್ನು  ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರಕಾರದ ನಡೆ ಕಾರ್ಯಕರ್ತರ ಕಡೆ ಎಂಬ ಕಾರ್ಯಕ್ರಮದೊಂದಿಗೆ ಕಾರ್ಯಕರ್ತರಿಂದ ಅಹವಾಲು ಸ್ವೀಕರಿಸುವ ಚಿಂತನೆಯನ್ನು ಹಾಕಿಕೊಂಡಿದ್ದು ಪಕ್ಷವನ್ನು ಇನ್ನಷ್ಟು ರೀತಿಯಲ್ಲಿ ಬಲ ವರ್ಧನೆಗೆ ಮುನ್ನುಡಿ ಇಟ್ಟಿದೆ ಎಂದರು.  ಗ್ಯಾರಂಟಿ ಯೋಜನೆ ಸಮಿತಿ ಭಟ್ಕಳ ತಾಲುಕು ಅಧ್ಯಕ್ಷ ರಾಜು ನಾಯ್ಕ, ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಅಲ್ಬರ್ಟ ಡಿಕೋಸ್ತಾ ಮಾತನಾಡಿದರು. 

ಹೊನ್ನಾವರ ಭಾಗದ ಕಾಂಗ್ರೆಸ್ ಕಾರ್ಯಕರ್ತರ ಕೆ.ಎಸ್.ಆರ್.ಟಿ.ಸಿ. ಚಾಲಕ ನಿರ್ವಾಹಕರು ಮಹಿಳೆಯರನ್ನು ಕಂಡರೆ ಬಸ್ ನಿಲ್ಲಿಸುತ್ತಿಲ್ಲ. ಸರಕಾರದ ಯೋಜನೆ ಸಕಾಲ ಸ್ಪಂದನೆಗೆ ಸಿಗುವಂತೆ ಗಮನ ಹರಿಸಬೇಕೆಂದು ಕೇಳಿಕೊಂಡರು. 
ಮಾರ್ಚ ತಿಂಗಳು ಬರದ ಸಮಸ್ಯೆ ಇರುವದರಿಂದ ಪಂಚಾಯತ ಪಿಡಿಓ ಅವರಿಗೆ ಖಡಕ ಸೂಚನೆ ನೀಡಬೇಕು ಕಾರಣ ಈ ನೀರಿನ ಸರಬರಾಜು ಟೆಂಡರನಲ್ಲಿ ಆಯಾ ಪಂಚಾಯತ ಪಿಡಿಓ ಮತ್ತು ವಾಟರ ಮೆನ್ ಅವರಲ್ಲಿ ಲಾಬಿ‌ ನಡೆಯುತ್ತಿದ್ದು ಇದಕ್ಕೆ ಕಡಿವಾಣ ಹಾಕಬೇಕಾಗಿದೆ ಎಂದು ಮನವಿ ಮಾಡಿದರು.

ಬ್ಲಾಕ್ ಕಾಂಗ್ರೆಸ್ ಸಮಿತಿ ಭಟ್ಕಳ ಅಧ್ಯಕ್ಷ ವೆಂಕಟೇಶ ನಾಯ್ಕ ಅವರು ಸ್ವಾಗತಿಸಿದರು. ಬ್ಲಾಕ್ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಸುರೇಶ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ‌ಮಹಿಳಾ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ  ನಯನಾ ನಾಯ್ಕ ವಂದಿಸಿದರು.

ವೇದಿಕೆಯಲ್ಲಿ ಗ್ಯಾರಂಟಿ ಯೋಜನೆ ಸಮಿತಿ ಮಂಕಿ ಅಧ್ಯಕ್ಷ ಅಣ್ಣಪ್ಪ ನಾಯ್ಕ, ಮಂಕಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ  ಉಷಾ ನಾಯ್ಕ, ಪುರಸಭೆ ಪ. ಅಧ್ಯಕ್ಷ ಅಲ್ತಾಪ್ ಖರೂರಿ ಸೇರಿದಂತೆ ಕಾಂಗ್ರೆಸನ ಮುಖಂಡರು ಕಾರ್ಯಕರ್ತರು ಇದ್ದರು.

Share This
300x250 AD
300x250 AD
300x250 AD
Back to top