ದಾಂಡೇಲಿ : ಕುಡಿದ ನಶೆಯಲ್ಲಿ ಯುವಕನೋರ್ವ ನೇಣಿಗೆ ಶರಣಾದ ಘಟನೆ ನಗರದ 14ನೇ ಬ್ಲಾಕಿನ ಭಾಗ್ಯಮಂದಿರದಲ್ಲಿ ಶನಿವಾರ ನಡೆದಿದೆ.
14ನೇ ಬ್ಲಾಕಿನ ಭಾಗ್ಯಮಂದಿರದ ನಿವಾಸಿಯಾಗಿರುವ 22 ವರ್ಷ ವಯಸ್ಸಿನ ಅಜಯ್ ಸಿಂಗ್ ಬಾಲಾಜಿ ಸಿಂಗ್ ಸುಬೇದಾರ್ ಎಂಬಾತನೆ ಕುಡಿದ ನಶೆಯಲ್ಲಿ ನೇಣಿಗೆ ಶರಣಾದ ಯುವಕನಾಗಿದ್ದಾನೆ. ಮನೆಯಲ್ಲಿ ಯಾರೂ ಇಲ್ಲದಿದ್ದ ಸಮಯದಲ್ಲಿ ಈತ ನೇಣಿಗೆ ಶರಣಾಗಿದ್ದಾನೆ. ಸುದ್ದಿ ತಿಳಿದು ಸ್ಥಳಕ್ಕೆ ನಗರ ಠಾಣೆಯ ಪಿಎಸ್ಐ ಅಮೀನ್ ಅತ್ತಾರ್ ಹಾಗೂ ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.