ದಾಂಡೇಲಿ : ನಗರದ ರೋಟರಿ ಕ್ಲಬ್ ವತಿಯಿಂದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಮಾಲಕರಾದ ಶ್ರೀಕುಮಾರ್ ಬಾಂಗಾಡ್ ಅವರನ್ನು ರೋಟರಿ ಕ್ಲಬ್ಬಿನ ಪ್ರಧಾನ ಕಾರ್ಯದರ್ಶಿಯಾಗಿರುವ ಅಶುತೋಷ್ ರಾಯ್ ಅವರ ನೇತೃತ್ವದಲ್ಲಿ ಶನಿವಾರ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯು ಸಿಎಸ್ಆರ್ ಯೋಜನೆಯಡಿ ದಾಂಡೇಲಿ ನಗರ ಹಾಗೂ ನಗರದ ಸುತ್ತಮುತ್ತಲು ಆರೋಗ್ಯ, ಶಿಕ್ಷಣ, ಸಾಮಾಜಿಕ ಕ್ಷೇತ್ರಕ್ಕೆ ನೀಡುತ್ತಿರುವ ಸೇವೆಯ ಜೊತೆ ಜೊತೆಗೆ ರೋಟರಿ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ಚಟುವಟಿಕೆಗೆ ವಿಶೇಷ ಅನುದಾನ ಹಾಗೂ ಮೂಲಸೌಕರ್ಯಗಳನ್ನು ಒದಗಿಸಿಕೊಟ್ಟಿರುವುದಕ್ಕೆ ಕಾಗದ ಕಾರ್ಖಾನೆಯ ಮಾಲಕರಾದ ಶ್ರೀ ಕುಮಾರ್ ಬಾಂಗಡ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ಬಿನ ಖಜಾಂಚಿ ಲಿಯೋ ಪಿಂಟೋ, ರೋಟರಿ ಕ್ಲಬ್ಬಿನ ಪ್ರಮುಖರುಗಳಾದ ಡಾ.ಮೋಹನ ಪಾಟೀಲ್, ಎಸ್.ಜಿ.ಬಿರದಾರ, ಪ್ರಕಾಶ ಶೆಟ್ಟಿ, ಆರ್.ಪಿ.ನಾಯ್ಕ, ರಾಜೇಶ ತಿವಾರಿ, ಪ್ರಕಾಶ ಕಣಿಮೆಹಳ್ಳಿ, ಡಾ.ಎಸ್.ಎಲ್.ಕರ್ಕಿ, ಡಾ.ಆಸೀಪ್ ದಪೇದಾರ, ಮಿಥುನ್ ನಾಯಕ, ಶೇಖರ ಪೂಜಾರಿ, ಡಾ.ಜ್ಞಾನದೀಪ ಗಾಂವಕರ ಮೊದಲಾದವರು ಉಪಸ್ಥಿತರಿದ್ದರು.