Slide
Slide
Slide
previous arrow
next arrow

ಭಗವದ್ಗೀತೆ ಕಂಠಪಾಠ: ವಿಧಾತ್ರಿಗೆ ರಾಷ್ಟ್ರಮಟ್ಟದ ವಿಶಿಷ್ಟ ಪುರಸ್ಕಾರ

300x250 AD

ಹೊನ್ನಾವರ: ಪಟ್ಟಣದ ಎಂ.ಪಿ.ಇ.ಸೊಸೈಟಿಯ ಸೆಂಟ್ರಲ್ ಶಾಲೆಯ ಐದನೇ ತರಗತಿಯ ವಿದ್ಯಾರ್ಥಿನಿ ವಿಧಾತ್ರಿ ಬಿ. ಇವಳು ಪತಂಜಲಿ ವಿಶ್ವವಿದ್ಯಾಲಯ ಉತ್ತರಾಖಂಡದ ಪತಂಜಲಿ ವಿಶ್ವವಿದ್ಯಾಲಯದಲ್ಲಿ ನಡೆದ ರಾಷ್ಟ್ರಮಟ್ಟದ ಪೂರ್ಣ ಭಗವದ್ಗೀತೆ ಕಂಠಪಾಠ ಸ್ಪರ್ಧೆಯಲ್ಲಿ ವಿಶಿಷ್ಟ ಪುರಸ್ಕಾರವನ್ನು ಪಡೆದು ಶಾಲೆಗೆ ಅಷ್ಟೆ ಅಲ್ಲ ನಮ್ಮ ರಾಜ್ಯಕ್ಕೆ ಕೀರ್ತಿಯನ್ನು ತಂದಿರುತ್ತಾಳೆ. ಮಾ. ೧೮ ರಿಂದ ಮಾರ್ಚ್ ೨೫ ರವರೆಗೆ ಸ್ಫರ್ಧೆಯನ್ನು ನಡೆಸಲಾಗಿತ್ತು. ಇದು ರಾಷ್ಟ್ರಮಟ್ಟದ ಸ್ಫರ್ಧೆಯಾಗಿದ್ದು , ೨೧ ರಾಜ್ಯಗಳಿಂದ ಸ್ಫರ್ಧಾಳುಗಳು ಆಗಮಿಸಿದ್ದರು. ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದ ವಿದ್ಯಾರ್ಥಿಗಳಿಗೆ ರಾಷ್ಟ್ರಮಟ್ಟದಲ್ಲಿ ಭಾಗವಹಿಸುವ ಅವಕಾಶವನ್ನು ನೀಡಲಾಗಿತ್ತು. ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಧಾಮಿ , ಸೆಂಟ್ರಲ್ ಯುನಿವರ್ಸಿಟಿಯ ಕುಲಪತಿ ಪ್ರೋ. ಶ್ರೀನಿವಾಸ ವರಖೇಡಿ ಹಾಗೂ ಯೋಗ ಗುರು ಬಾಬಾ ರಾಮ್ ದೇವ್  ಇವರ ಉಪಸ್ಥಿತಿಯಲ್ಲಿ  ಕಾರ್ಯಕ್ರಮದ ಸಮಾರೋಪ ಸಮಾರಂಭ ಜರುಗಿತು. ಇದೇ ವೇಳೆ ವಿಧಾರ್ತಿ .ಬಿ ಪತಂಜಲಿಯ ಆಚಾರ್ಯ ಬಾಲಕೃಷ್ಣ ಅವರು ಗೌರವಿಸಿದರು. ವಿಧಾತ್ರಿ ಇವಳು ತನ್ನ ತಾಯಿ ಹಾಗೂ ಸಂಸ್ಕೃತ ಉಪನ್ಯಾಸಕಿ ಆಗಿರುವ ಡಾ. ಗೌರಿ ಹೆಗಡೆ ಇವರ ಮಾರ್ಗದರ್ಶನದಲ್ಲಿ ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿ ತಾಲೂಕಿಗೆ ಹಾಗೂ ರಾಜ್ಯಕ್ಕೆ ಕೀರ್ತಿಯನ್ನು ತಂದಿರುತ್ತಾಳೆ.

300x250 AD
Share This
300x250 AD
300x250 AD
300x250 AD
Back to top