ಭಟ್ಕಳ:ತಾಲೂಕಿನ ಜಾಲಿಯ ಸ್ವಾಮಿ ವಿವೇಕಾನಂದ ಜನಸ್ಪಂದನ ಫೌಂಡೇಶನ್ ವತಿಯಿಂದ “ನೀರು ನೀಡಿ-ಜೀವ ಉಳಿಸಿ” ಅಭಿಯಾನವನ್ನು ಆಯೋಜಿಸಲಾಗಿದೆ. ಈ ವರ್ಷ ಬಿಸಿಲಿನ ಝಳ ಅತಿಯಾಗಿ ಹೆಚ್ಚಿದ್ದು ಇದರಿಂದ ಪ್ರಾಣಿ ಪಕ್ಷಿಗಳು ತೀವ್ರವಾಗಿ ಬಳಲುತ್ತಿವೆ. ಈ ಕಾರಣದಿಂದ ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರು ಇಡುವ ಅಭಿಯಾನದ ಮೂಲಕ ಜನರಲ್ಲಿ ಜಾಗೃತಿಯನ್ನು ಮೂಡಿಸಿ, ಪ್ರಾಣಿ ಪಕ್ಷಿಗಳ ರಕ್ಷಣೆಯ ಕೈಂಕರ್ಯದಲ್ಲಿ ಸ್ಟ ಇಚ್ಛೆಯಿಂದ ತೊಡಗಿಕೊಂಡಿರುವವರಿಗೆ ಬಹುಮಾನ ನೀಡಿ ಉತ್ತೇಜಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.ಬೇಸಿಗೆಯ ಈ ಸುಡು ಬಿಸಿಲಿನಲ್ಲಿ ಪ್ರಾಣಿ-ಪಕ್ಷಿಗಳ ನೀರಿನ ದಾಹ ತೀರಿಸಲು ಸಂಘಟಿಸಿರುವ ವಿಶಿಷ್ಟವೂ ವಿನೂತನವೂ ಆಗಿರುವ ಈ ಅಭಿಯಾನದಲ್ಲಿ ಹೆಚ್ಚು ಜನರು ಕೈಜೋಡಿಸಬೇಕು ಎಂದು ಸಂಘಟಕರು ವಿನಂತಿಸಿಕೊಂಡಿದ್ದಾರೆ.ಈ ಅಭಿಯಾನದಲ್ಲಿ ಭಾಗವಹಿಸಿದವರನ್ನು ಚೀಟಿಯ ಮೂಲಕ ಆಯ್ಕೆ ಮಾಡಿ ಬಹುಮಾನಗಳನ್ನು ವಿತರಿಸಲಾಗುವುದು. ಮೊದಲ ಫಲಾನುಭವಿಗೆ 2000 ರೂ. ಎರಡನೇ ಫಲಾನುಭವಿಗೆ -1000 ರೂ. ಮೂರನೇ ಫಲಾನುಭವಿಗೆ – 500 ರೂ.ನಂತರದ 5 ಫಲಾನುಭವಿಗಳಿಗೆ ತಲಾ – 150 ರೂ.ನಂತೆ ಬಹುಮಾನ ನೀಡಿ ಉತ್ತೇಜಿಸಲಾಗುವುದು.ಈ ಅಭಿಯಾನದಲ್ಲಿ ಭಾಗವಹಿಸುವವರು ಕುಡಿಯಲು ಯೋಗ್ಯವಾದ ಜಾಗದಲ್ಲಿ ತೊಟ್ಟಿಯಲ್ಲಿ ಅಥವಾ ಪಾತ್ರೆಗಳಲ್ಲಿ ತಾಜಾ ನೀರು ತುಂಬಿಸಿ, ಪ್ರಾಣಿ-ಪಕ್ಷಿಗಳಿಗೆ ಜೀವಜಲ ಒದಗಿಸಿ ಅದರ ಪೋಟೋ ತೆಗೆದು ಸಂಪೂರ್ಣ ವಿಳಾಸದೊಂದಿಗೆ ಕೆಳಗೆ ತಿಳಿಸಿರುವ ಮೊಬೈಲ್ ನಂಬರಿಗೆ ಕಳುಹಿಸಬೇಕು.ಮಾರ್ಚ್ 29 ರ ಶನಿವಾರ ಫೋಟೋ ಕಳುಹಿಸಲು ಕೊನೆಯ ದಿನವಾಗಿದ್ದು ಮಾರ್ಚ್ 30 ರ ಯುಗಾದಿ ದಿನದಂದು ಆಯ್ಕೆಯಾದವರ ಮಾಹಿತಿಯನ್ನು ತಿಳಿಸಲಾಗುವುದು. ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆಗಳು -ತಿಮ್ಮಪ್ಪ ಶೇಡ್ಲುಳಿ: 9964187923/ವಸಂತ್ ಬಬ್ಬನಕಲ್: 9986144540/ಸುರೇಶ್ ನಾಯ್ಕ : 97317 35728/ವೆಂಕಟೇಶ್ ದೇವಿನಗರ:9901192392/ದೇವೇಂದ್ರ ಗೊಂಡ: 9611089065/ವೆಂಕಟ್ರಮಣ ನಾಯ್ಕ : 9591485388/ ಗಿರೀಶ್ ನಾಯ್ಕ : 9900468641 / ಶ್ರೀಧರ್ ಬಾರ್ವಿ : 7795979757.
“ನೀರು ನೀಡಿ-ಜೀವ ಉಳಿಸಿ” ಅಭಿಯಾನ
