ಹೊನ್ನಾವರ : ಹೆಚ್.ಐ.ವಿ ಸೊಂಕು ಹರಡಲು ಅಸುರಕ್ಷಿತ ಲೈಂಗಿಕ ನಡುವಳಿಕೆ ಪ್ರಮುಖ ಕಾರಣವಾಗಿದೆ. ಕಾಲೇಜು ವಿದ್ಯಾರ್ಥಿಗಳು ಹೆಚ್.ಐ.ವಿ /ಏಡ್ಸ್ ಕುರಿತು ಸರಿಯಾದ ಮಾಹಿತಿ ಹೊಂದಿರಬೇಕು. ಗಂಡು ಹೆಣ್ಣಿನ ನಡುವಿನ ಸಂಬಂಧಗಳ ನೈತಿಕ ನಿರ್ವಹಣೆಯಿಂದ ಹೆಚ್.ಐ.ವಿ/ಏಡ್ಸ್ ನ್ನು ದೂರವಿಡಬಹುದಾಗಿದೆ” ಎಂದು ತಾಲೂಕ ಆಸ್ಪತ್ರೆಯ .ಸಿ.ಟಿ.ಸಿ ಆಪ್ತಸಮಾಲೋಚಕರಾದ ವಿನಾಯಕ ಪಟಗಾರ ಹೇಳಿದರು.
ಅವರು ಎಸ್.ಡಿ.ಎಂ ಪದವಿ ಕಾಲೇಜಿನ ರೆಡ್ ರಿಬ್ಬನ್ ಕ್ಲಬ್ ಮತ್ತು ರಾಷ್ಟ್ರೀಯ ಸೇವಾ ಯೋಜನೆ ವಿಭಾಗ ಮತ್ತು ಐ.ಸಿ.ಟಿ.ಸಿ ವಿಭಾಗ ತಾಲೂಕ ಆಸ್ಪತೆ ಹೊನ್ನಾವರ ಇವುಗಳ ಸಂಯುಕ್ತಾಶ್ರದಲ್ಲಿ ಎಸ್.ಡಿ.ಎಂ ಕಾಲೇಜಿನಲ್ಲಿ ಏರ್ಪಡಿಸಲಾದ “ಹೆಚ್.ಐ.ವಿ/ಏಡ್ಸ್ ಜಾಗೃತಿ” ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದರು. ಪಿಪಿಟಿ ಪ್ರಜಂಟೆಷನ್ ಮುಖಾಂತರ ಹೆಚ್.ಐ.ವಿ/ಏಡ್ಸ್ ಅಂದರೇನು, ಅದು ಹರಡುವ ವಿಧಾನ, ಹೆಚ್.ಐ.ವಿ ಕುರಿತ ಜಾಗತಿಕ ಪರಿಸ್ಥಿತಿ, ಹೆಚ್.ಐ.ವಿ ಬಗ್ಗೆ ಇರುವ ತಪ್ಪು ತಿಳುವಳಿಕೆ, ಯುವಕ, ಯುವತಿಯರಾಗಿ ಹೆಚ್.ಐವಿ ತಡೆಗಟ್ಟಲು ಅವರ ಪಾತ್ರದ ಕುರಿತು ವಿಸ್ತಾರವಾದ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಪ್ರಾಂಶುಪಾಲರಾದ ಡಾ. ಡಿ.ಎಲ್ ಹೆಗಡೆ “ಏಡ್ಸ್ ತಡೆಗಟ್ಟುವಲ್ಲಿ ಯುವಕರ ಪಾತ್ರ ಕುರಿತು ಏರ್ಪಡಿಸಿದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಾದ ಶ್ರೀಧರ ಎನ್ ಭಟ್, ವಂದನಾ ಎಂ ನಾಯ್ಕ,,ಸುಬ್ರಮಣ್ಯ ಎನ್ ಶೇಟ್ ರವರಿಗೆ ನಗದು ಬಹುಮಾನ ವಿತರಿಸಿ ಮಾತನಾಡುತ್ತ “ಹೆಚ್.ಐ.ವಿ ಕುರಿತು ವಿದ್ಯಾರ್ಥೀಗಳಲ್ಲಿ ಜಾಗೃತಿ ಅವಶ್ಯ,ಜನಸಂಖ್ಯೆಯಲ್ಲಿ ಹೆಚ್ಚಿರುವ ಭಾರತದಲ್ಲಿ ಹೆಚ್.ಐವಿ ಸೊಂಕು ಹೆಚ್ಚಿದಷ್ಟು ನಮ್ಮ ಆರ್ಥೀಕತೆಯ ಮೇಲೆ ಪರಿಣಾಮ ಬೀರಲಿದೆ. ಹೆಚ್.ಐ.ವಿ ಬಗ್ಗೆ ಮುಂಜಾಗೃತೆ ವಹಿಸುವುದು ಜಾಣತನ ಎಂದು ಹೇಳಿದರು. ರೆಡ್ ರಿಬ್ಬನ್ ಕ್ಲಬ್‌ನ ಸಂಯೋಜಕರಾದ ಎಂ.ಜಿ ಹೆಗಡೆ ಪ್ರಾಸ್ತವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಘಟಕಗಳ ಸಂಯೋಜಕರು, ಅಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.