ಜೋಯಿಡಾ:ತಾಲೂಕಿನ ನಾಗೋಡಾ ಗ್ರಾಮ ಪಂಚಾಯತ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಕಾರಟೋಳಿಯಲ್ಲಿ ದಿ ಕೈಗಾ ಪ್ರೊಜೆಕ್ಟ್ ಎಂಪ್ಲಾಯ್ ಚಾರಿಟೇಬಲ್ ಥ್ರಿಫ್ಟ್ ಸೊಸೈಟಿ ಕೈಗಾ ಇವರಿಂದ ಜೋಯಿಡಾ ತಾಲೂಕಿನ ಶಾಲೆಗಳಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾರಟೋಳಿ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಖಾನಗಾಂವ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಾಗೇಲಿ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಾರಸಿಂಗಾಳ ಹಾಗೂ ಖಾನಗಾಂವ ಮತ್ತು ಕಾರಟೋಳಿ ಅಂಗನವಾಡಿ ಕೇಂದ್ರಗಳಿಗೆ ಶಾಲೆಗೆ ಅಗತ್ಯವಿರುವ ಶೈಕ್ಷಣಿಕ ಪರಿಕರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮವನ್ನು ಕೈಗಾದ ಚಾರೀಟಿ ಸೊಸೈಟಿಯ ಅಧ್ಯಕ್ಷರಾದ ಎ.ಎಲ್.ವಿ.ವಿಕ್ರಮ್ ರೆಡ್ಡಿಯವರು ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಹಳ್ಳಿಗಳ ಸರ್ಕಾರಿ ಶಾಲೆಗಳ ಮಕ್ಕಳ ಶೈಕ್ಷಣಿಕ ಜವಾಬ್ದಾರಿ ಕುರಿತು ಮಾತನಾಡಿ ಕುಗ್ರಾಮಗಳ ಸರ್ಕಾರಿ ಶಾಲೆಗಳ ಉತ್ತೇಜನಕ್ಕೆ ನಮ್ಮ ಆದ್ಯತೆ ಎಂದು ಹೇಳಿದರು. ಚಾರಿಟಿಯ ಉಪಾಧ್ಯಕ್ಷರಾದ ಸುರೇಶ ರೆಡ್ಡಿ ಇವರು ಪ್ರತಿ ವರ್ಷ ಜೋಯಿಡಾ ತಾಲೂಕಿನ ಶಾಲೆಗಳನ್ನು ಗುರುತಿಸಿ ಶೈಕ್ಷಣಿಕ ಪರಿಕರಗಳನ್ನು ನೀಡುತ್ತಿದ್ದೇವೆ ಎಂದು ಹೇಳಿದರು.ಸೂರಜ, ನಿರ್ದೇಶಕರಾದ ಶ್ರೀಧರ್ ಹುಟಗಿ, ಮಹೇಂದ್ರ ಕಾಂಬ್ಳೆ , ಬಿದ್ಯಾದರ ಮುರ್ಮು, ಉಲ್ಲಾಸ್ ಭಟ್, ಸೀತಾ ಹೆಗಡೆ , ಕಾರ್ಯದರ್ಶಿ ಉಚಿತ ನಾಯ್ಕ ಇತರರು ಉಪಸ್ಥಿತರಿದ್ದರು . ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಾಗೋಡಾ ಗ್ರಾಮ ಪಂಚಾಯತ ಅಧ್ಯಕ್ಷರಾದ ದಿವ್ಯಾ ನಾಯ್ಕರವರು ಉಪಸ್ಥಿತರಿದ್ದರು. ಜೋಯಿಡಾ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷರಾದ ಯಶವಂತ ನಾಯ್ಕ ಇವರು ಮಾತನಾಡಿ ಕುಗ್ರಾಮದ ಶಾಲೆಗಳನ್ನು ಗುರುತಿಸಿ ಶೈಕ್ಷಣಿಕ ಪರಿಕರಗಳನ್ನು ನೀಡುತ್ತಿರುವುದು ಶ್ಲಾಘನೀಯ ಎಂದರು.ತಾಲೂಕಿನ ಶಿಕ್ಷಣ ಇಲಾಖೆಯ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ತಾಲೂಕಾ ಕುಣಬಿ ಸಮಾಜದ ಅಧ್ಯಕ್ಷರಾದ ಪ್ರೇಮಾನಂದ ವೇಳಿಪ, ಕಾರಟೋಳಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಪ್ರೇಮಾನಂದ ವೇಳಿಪ, ಖಾನಗಾಂವ ಶಾಲೆಯ ಅಧ್ಯಕ್ಷರಾದ ಸಂತೋಷ ಗಾವಡಾ, ವಾಗೇಲಿ ಶಾಲೆಯ ಗಣಪತಿ ಸಾವಂತ , ಕಾರಸಿಂಗಾಳ ಗ್ರಾಮದ ಸುರೇಶ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು, ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ತಾಲೂಕಿನ ನಾಲ್ಕು ಶಾಲೆ ಹಾಗೂ ಎರಡು ಅಂಗನವಾಡಿಗಳು ಸೇರಿದಂತೆ ಸುಮಾರು ಒಂದು ಲಕ್ಷದ ನಲವತ್ತು ಸಾವಿರರೂಪಾಯಿಗಳಷ್ಟು ಮೌಲ್ಯದ ಪರಿಕರಗಳನ್ನು ವಿತರಿಸಲಾಯಿತು, ಅದರಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್,ನೋಟ್ ಪುಸ್ತಕ ಹಾಗೂ ಸ್ಮಾರ್ಟ್ ಟಿವಿ, ಚೇರ್ ಟೇಬಲ್, ಕುಕ್ಕರ್ , ಮಿಕ್ಸರ್, ರ್ಯಾಕ್ಸ್,ಕ್ರೀಡಾ ಸಾಮಗ್ರಿಗಳನ್ನು ಒಳಗೊಂಡಂತೆ ಇನ್ನೂ ಹಲವಾರು ಸಾಮಗ್ರಿಗಳನ್ನು ವಿತರಿಸಲಾಯಿತು. ಶಿಕ್ಷಕರಾದ ಶಾಂತಕುಮಾರ್ ಕೆ.ಎಸ್ ಇವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು, ವಿನಾಯಕ ಪಟಗಾರ ಸ್ವಾಗತಿಸಿದರು, ರಮ್ಯಾ ಮುಕ್ರಿ ವಂದಿಸಿದರು, ಕಮಲಾಕರ ಮೇಸ್ತ ಸಹಕರಿಸಿದರು.