ಹೊನ್ನಾವರ : ಇಂದು ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆ ಸಾಧನೆ ಮಾಡಿದ್ದಾಳೆ ಎಂದು ಅಂಗನವಾಡಿಯ ಮೇಲ್ವಿಚಾರಕಿ ಮಾಲತಿ ನಾಯ್ಕ ಹೇಳಿದರು. ಅವರು ಸಂಜೀವಿನಿ ಒಕ್ಕೂಟ ಹಾಗೂ ಗ್ರಾ.ಪಂ.ಕುದ್ರಗಿ ಸಹಯೋಗದೊಂದಿಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿ ನಿವೃತ್ತಿ ಶಿಕ್ಷಕಿ ಶ್ರೀಮತಿ ಸಾಧನಾ ಮಾತನಾಡಿ ಎಲ್ಲಾ ಹೋರಾಟಗಳಲ್ಲೂ, ತ್ಯಾಗಗಳಲ್ಲೂ, ಮಹಿಳೆಯರ ದೊಡ್ಡ ಪ್ರಮಾಣದ ಕೊಡುಗೆಗಳಿವೆ. ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಇಂದಿನ ಸ್ವಾವಲಂಬಿ ಹೋರಾಟದವರೆಗೂ ಮಹಿಳೆಯರ ಕೊಡುಗೆ ಅನಂತವೂ, ಅವಿಸ್ಮರಣಿಯೂ ಆಗಿದೆ ಎಂದು ಹೇಳಿ ಮಹಿಳಾ ದಿನಾಚರಣೆಯ ಕುರಿತು ಉಪನ್ಯಾಸವನ್ನು ನೀಡಿದರು.
ವೇದಿಕೆಯಲ್ಲಿ ಗ್ರಾಂ ಪಂ. ಪಿ. ಡಿ.ಓ. ಗಣೇಶ. ಗ್ರಾ. ಪಂ. ಸದಸ್ಯರಾದ ಗಂಗೆ ಹಳ್ಳೇರ್. ಸಾವಿತ್ರಿಹಳ್ಳೇರ್, ಮಹಿಳಾ ಸಂಘದ ಸಂಘದ ಅನಿತ, ಸವಿತಾ, ಲಾವಣ್ಯ, ಶೋಭಾ. ಸಾವಿತ್ರಿ ನಾಯ್ಕ ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಪದ್ಮಾ ಸ್ವಾಗತಿಸಿದರು. ಪ್ರೇಮ ನಾಯ್ಕ ನಿರೂಪಿಸಿದರು. ಸ್ಪರ್ಧೆ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಿದರು.