ಶಿರಸಿ: ಹೆಸರಾಂತ ಕೃಷಿತಜ್ಞ ಡಾ.ಡಿ.ಎಂ.ಹೆಗಡೆ ಕಾನಮುಷ್ಕಿ ಅವರಿಗೆ ಮಹಾರಾಷ್ಟ್ರದ ಫಾರ್ಮಿಂಗ್ ಸಿಸ್ಟಮ್ ರಿಸರ್ಚ ಮತ್ತು ಅಭಿವೃದ್ಧಿ ಅಸೋಸಿಯೇಶನ್ ನೀಡುವ ಲೈಫ್ ಟೈಂ ಅಚೀವರ್ಸ್ ಅವಾರ್ಡ್ ಪ್ರದಾನ ಮಾಡಲಾಯಿತು.
ಸೂರತ್ ಮೋದಿಪುರಂನಲ್ಲಿ ನಡೆದ ಅಂತರಾಷ್ಟ್ರೀಯ ಸಮಾವೇಶದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ. ಡಿ.ಎಂ.ಹೆಗಡೆ ಅವರು ಭಾರತ ದೇಶ ಮಟ್ಟದ ವಿಜ್ಞಾನಿಯಾಗಿದ್ದು, ಅನೇಕ ಅಂತರಾಷ್ಟ್ರೀಯ ಮಟ್ಟದ ಕಾರ್ಯಾಗಾರಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿದ್ದಾರೆ. ಅನೇಕ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ.
ಕೃಷಿತಜ್ಞ ಡಾ.ಡಿ.ಎಮ್.ಹೆಗಡೆಗೆ ಲೈಫ್ ಟೈಂ ಅಚೀವರ್ಸ್ ಪ್ರಶಸ್ತಿ ಪ್ರದಾನ
