ಅರಣ್ಯವಾಸಿಗಳ ಪರವಾಗಿ ಸಮರ್ಥ ವಾದಕ್ಕೆ ತೀರ್ಮಾನ: ರವೀಂದ್ರ ನಾಯ್ಕ
ಶಿರಸಿ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರಣ್ಯವಾಸಿಗಳನ್ನ ಒಕ್ಕಲೇಬ್ಬಿಸಿ, ಅರಣ್ಯೀಕರಣ ಮಾಡಬೇಕೆಂಬ ಪರಿಸರವಾದಿಗಳ ಸಾರ್ವಜನಿಕ ಹಿತಾಶಕ್ತಿ ಅರ್ಜಿಯ ಪ್ರಕರಣದಲ್ಲಿ ಅರಣ್ಯವಾಸಿಗಳ ಪರವಾಗಿ ಸಮರ್ಥ ವಾದ ಮಂಡಿಸಲು ತೀರ್ಮಾನಿಸಲಾಗಿದೆ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅವರು ಮಾ.೧೩ ರಂದು ಬೆಂಗಳೂರಿನ ಅವರ ಕಛೇರಿಯಲ್ಲಿ ಹೋರಾಟಕ್ಕೆ ಕಾನೂನು ಮಾರ್ಗದರ್ಶನಕ್ಕರಾಗಿರುವ ವಿಶ್ರಾಂತ ನ್ಯಾಯಮೂರ್ತಿ ಎಚ್.ಎನ್ ನಾಗಮೋಹನದಾಸ ಅವರೊಂದಿಗೆ ಕಾನೂನು ಅಂಶಗಳನ್ನ ಚರ್ಚಿಸಿದ ನಂತರ ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿದರು.
ದೇಶದ ೮ ಪರಿಸರವಾದಿ ಸಂಘಟನೆಗಳು ೨೦೦೯ ರ ಇಸ್ವಿಯಲ್ಲಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ತಿರಸ್ಕರಿಸಲ್ಪಟ್ಟ ಅರಣ್ಯವಾಸಿಗಳನ್ನ ಅರಣ್ಯ ಕ್ಷೇತ್ರದಿಂದ ಅರಣ್ಯವಾಸಿಗಳನ್ನ ಒಕ್ಕಲೆಬ್ಬಿಸಿ ಅತಿಕ್ರಮಿಸುವ ಕ್ಷೇತ್ರದಲ್ಲಿ ಅರಣ್ಯೀಕರಣ ಮಾಡಬೇಕೆಂಬ ಸಾರ್ವಜನಿಕ ಹಿತಾಶಕ್ತಿ ಅರ್ಜಿ ದಾಖಲಿಸಿತು. ಈ ಅರ್ಜಿ ಮುಂದಿನ ವಿಚಾರಣೆ ಎಪ್ರೀಲ್.೨ ರಂದು ಸುಪ್ರೀಂ ಕೋರ್ಟನಲ್ಲಿ ನ್ಯಾಯಮೂರ್ತಿಗಳ ಸಮೂಹದಲ್ಲಿ ಜರುಗಲಿದೆ ಎಂದು ಅವರು ಹೇಳಿದರು.
ಹೋರಾಟಗಾರರ ವೇದಿಕೆಯ ವಾದ:
ಕಾನೂನಿಗೆ ವತಿರಿಕ್ತವಾಗಿ ಕಾನೂನು ವಿಧಿವಿಧಾನ ಅನುಸರಿಸದೇ ವಯಕ್ತಿಕ ಮೂರು ತಲೆಮಾರಿನ ದಾಖಲೆ ಆಗ್ರವಿಸುವಿಕೆಯಿಂದ ಅರಣ್ಯವಾಸಿಗಳು ಭೂಮಿ ಹಕ್ಕಿನಿಂದ ರಾಜ್ಯದಲ್ಲಿ ವಂಚಿತರಾಗಿದ್ದು ಅರ್ಜಿಗಳು ತಿರಸ್ಕಾರವಾಗಿದ್ದು, ಶೇ.೫.೩ರಷ್ಟು ಅರ್ಜಿಗಳು ಮಾತ್ರ ದೊರಕಿರುತ್ತದೆ. ಅರಣ್ಯವಾಸಿಗಳಿಗೆ ಕಾನೂನು ಅಡಿಯಲ್ಲಿ ಅರಣ್ಯವಾಸಿಗಳು ಅತಿಕ್ರಮಿಸಿರುವ ಪ್ರದೇಶದ ಮೂರು ತಲೆಮಾರಿನ ಸಾಂದರ್ಭಿಕ ದಾಖಲೆ ಅಡಿಯಲ್ಲಿ ನೀಡುವ ಅರ್ಜಿಗಳನ್ನ ಪರಿಶೀಲಿಸುವ ಸಮಿತಿಗಳ ಇಂದಿನ ನೀತಿಯನ್ನು ಸುಪ್ರೀಂ ಕೋರ್ಟ ಗಮನಕ್ಕೆ ತರಲಾಗುವುದೆಂದು ಅವರು ಹೇಳಿದರು.
೧೮ ಲಕ್ಷಕ್ಕೂ ಮಿಕ್ಕಿ ಅರಣ್ಯವಾಸಿಗಳ ಅತಂತ್ರ—-!
ದೇಶಾದ್ಯಂತ ಪ್ರಥಮ ಹಂತದ ರಾಜ್ಯಗಳಲ್ಲಿ ೧೮,೦೧,೮೦೫ ಅರ್ಜಿಗಳು ತಿರಸ್ಕಾರವಾಗಿದ್ದು ಎಂದು ೨೧ ರಾಜ್ಯದ ಮುಖ್ಯಕಾರ್ಯದರ್ಶಿಗಳು ಸುಪ್ರೀಂ ಕೋರ್ಟಲ್ಲಿ ಪ್ರಮಾಣ ಪತ್ರ ಸಲ್ಲಿಸಲಾಗಿತ್ತು. ತಿರಸ್ಕಾರವಾದ ಅರಣ್ಯವಾಸಿಗಳ ಕುರಿತು ಸುಪ್ರೀಂ ಕೋರ್ಟ ವಿಚಾರಣೆಯಲ್ಲಿ ತೆಗೆದುಕೊಳ್ಳುವ ನಿರ್ಣಯ ಕುರಿತು ಅರಣ್ಯವಾಸಿಗಳಲ್ಲಿ ಆತಂಕ ಉಂಟು ಮಾಡಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.