Slide
Slide
Slide
previous arrow
next arrow

ನಾಳೆ ಶಿರಸಿ ‘ರಂಗೋತ್ಸವ’

300x250 AD

ಶಿರಸಿ: ಗಣೇಶನ ಹಬ್ಬದಲ್ಲಿ ಶಿರಸಿ ಕಾ ಮಹಾರಾಜ ಮಹಾಗಣಪತಿಯನ್ನು ಶ್ರೀ ಅಯ್ಯಪ್ಪ ಸ್ವಾಮಿಯ ಸನ್ನಿಧಾನದಲ್ಲಿ ಪ್ರತಿಷ್ಠಾಪಿಸುವ ಮೂಲಕ ಇಡೀ ಜಿಲ್ಲೆಯ ಭಕ್ತಮಹಾಶಯರಲ್ಲಿ ಭಕ್ತಿಯ ಸಂಚಲನವನ್ನೇ ಮೂಡಿಸಿದ್ದ ಅಯ್ಯಪ್ಪ ನಗರದ ಶಿರಸಿ ಕಾ ಮಹಾರಾಜ ಶ್ರೀ ಗಣೇಶೋತ್ಸವ ಸಮಿತಿಯಿಂದ ಈ ಬಾರಿ ಹೋಳಿ ಹಬ್ಬದ ವಿಶೇಷವಾಗಿ ಪ್ರಥಮ ಬಾರಿಗೆ ಬೇಡರವೇಷದ ಬದಲಾಗಿ ಮಕ್ಕಳಲ್ಲಿ, ಮಹಿಳೆಯರಲ್ಲಿ,ಪುರುಷರಲ್ಲಿ ರಂಗು ರಂಗಿನ ಬಣ್ಣದ ಮಹತ್ವ ಸಾರುವ ಹಾಗು ಆ ಮೂಲಕ ಬಣ್ಣದಿಂದ ನಾವೆಲ್ಲರೂ ಒಂದು ಎನ್ನುವ ಪ್ರೀತಿ ಪ್ರೇಮದ ಭ್ರಾತೃತ್ವ ಸಾರುವ ಸುಮಧುರ ರಂಗಿನ ಶಿರಸಿ ರಂಗೋತ್ಸವ ( RAIN DANCE ) ವನ್ನು ಮಾ.14ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯ ವರೆಗೆ ಅಯ್ಯಪ್ಪ ನಗರದಲ್ಲಿ ಏರ್ಪಡಿಸಲಾಗಿದೆ. ಶಿರಸಿ ಇತಿಹಾಸದಲ್ಲಿ ಮೊದಲ ಬಾರಿಗೆ ನಾಳೆ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಶಾಸಕ ಭೀಮಣ್ಣ ಟಿ. ನಾಯ್ಕ ಚಾಲನೆ ನೀಡಲಿದ್ದಾರೆ. ಹೆಣ್ಣು ಮಕ್ಕಳಿಗಾಗಿ ವಿಶೇಷ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದೆ. 

300x250 AD
Share This
300x250 AD
300x250 AD
300x250 AD
Back to top