ಸಿದ್ದಾಪುರ: ಪತ್ರಕರ್ತ ಶಿವಶಂಕರ ಕೋಲ್‌ಸಿರ್ಸಿ ರವರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಸಭೆ ನಡೆಸಲಾಯಿತು. ಮಾಧ್ಯಮ ಪ್ರತಿನಿಧಿಗಳ ಸಂಘ, ತಾಲೂಕು ಪತ್ರಕರ್ತರ ಸಂಘ, ತಾಲೂಕ ಕನ್ನಡ ಸಾಹಿತ್ಯ ಪರಿಷತ್, ಹಾಗೂ ನಾನಾ ಸಂಘಟನೆಗಳ ಸದಸ್ಯರು, ಶಿವಶಂಕರರವರಿಗೆ ನುಡಿನಮನ ಸಲ್ಲಿಸಿದರು. ಮಾಧ್ಯಮ ಪ್ರತಿನಿಧಿಗಳ ಸಂಘದ ಅಧ್ಯಕ್ಷ ಕನ್ನೇಶ್ ಕೊಲಸಿರ್ಸಿ, ಉಪಾಧ್ಯಕ್ಷ ನಾಗರಾಜ್ ನಾಯ್ಕ್ ಮಾಳ್ಕೋಡ್, ಕಾರ್ಯದರ್ಶಿ ಸುರೇಶ ಕಡಕೇರಿ, ಖಜಾಂಚಿ ಪ್ರಶಾಂತ್ ಶೇಟ್, ಸದಸ್ಯ ಟಿ. ಕೆ. ಎಂ. ಆಜಾದ್, ಕಾರ್ಯನಿರತ ಪತ್ರಕರ್ತ ಸಂಘದ ರಮೇಶ್ ಹಾರ್ಸಿಮನೆ, ಕಸಾಪ ಅಧ್ಯಕ್ಷ ಗೋಪಾಲ ನಾಯ್ಕ್ ಭಾಶಿ, ಕಾರ್ಯದರ್ಶಿ ಅಣ್ಣಪ್ಪ ನಾಯ್ಕ್ ಶಿರಳಗಿ,ಕೋಶಾಧ್ಯಕ್ಷ ಪಿ.ಬಿ. ಹೊಸೂರ್, ನಿವೃತ್ತ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಗೌಡರ, ಸದಸ್ಯ ಚಂದ್ರಶೇಖರ ನಾಯ್ಕ್ ಕುಂಬ್ರಿಗದ್ದೆ ,ರತ್ನಾಕರ್ ನಾಯ್ಕ್, ಪ್ರೊ. ಎಂ ಕೆ ನಾಯ್ಕ್ ಹೊಸಳ್ಳಿ ಸಾಮಾಜಿಕ ಧುರಿಣ ವಸಂತ ನಾಯ್ಕ್ ಮನ್ಮನೆ, ಗ್ಯಾರಂಟಿ ಯೋಜನೆ ಅಧ್ಯಕ್ಷ ಕೆ. ಜಿ ನಾಗರಾಜ್, ಸಾಹಿತಿ ಜಿ. ಜಿ. ಹೆಗಡೆ ಬಾಳಗೋಡ್, ತಮ್ಮಣ್ಣ ಬೀಗಾರ, ಕೃಷ್ಣಮೂರ್ತಿ ನಾಯ್ಕ್ ಐಸೂರ್, ಪ ಪಂ ಸದಸ್ಯ ನಂದನ್ ಬೋರ್ಕರ್, ಬಿ ಎಸ್ ಎನ್ ಡಿ ಪಿಯ ವಿನಾಯಕ ನಾಯ್ಕ ದೊಡ್ಗದ್ದೆ, ಧರ್ಮಸ್ಥಳ ಸಂಘದ ಯೋಜನಾಧಿಕಾರಿಗಳು ನೌಕರವರ್ಗ ಅಭಿಮಾನಿಗಳು ಬಂಧು ಮಿತ್ರರು ಉಪಸ್ಥಿತರಿದ್ದು ನುಡಿನಮನ ಸಲ್ಲಿಸಿದರು.
ಪತ್ರಕರ್ತ ಶಿವಶಂಕರ್‌ಗೆ ನುಡಿನಮನ
