ಯಲ್ಲಾಪುರ: ಪಟ್ಟಣದ ಕೊಂಡೆಮನೆಯ ಸಾರ್ವಜನಿಕ ಅರಣ್ಯ ಪ್ರದೇಶದಲ್ಲಿ ಅಂದರ್-ಬಾಹರ್ ಇಸ್ಪೀಟ್ ಆಡುತ್ತಿದ್ದ 8 ಎಲೆ ಮಾನವರನ್ನು ಬಂಧಿಸಿದ ಯಲ್ಲಾಪುರ ಪೊಲೀಸರು ಒಟ್ಟೂ 1,04,670 ರೂ. ಮೌಲ್ಯದ ವಿವಿಧ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಪಟ್ಟಣದ ಮಂಜುನಾಥ ನಗರದ ಹರಿಗುರು ನಾರಾಯಣ ದೇವಳಿ, ನೂತನಗರದ ಅಬ್ದುಲ್ ರೆಹಮಾನ್ ಮಹಮ್ಮದ್ ಬಷೀರ ಶೇಖ್, ರವೀಂದ್ರ ನಗರದ ಸಂತೋಷ ಕುರಿಯನ್ ಮರಾಠಿ, ನೂತನಗರದ ಜಡ್ಡಿಯ ವಾಸುದೇವ ದೇವಾಜಿ ಜಾಧವ, ರವಿ ಜಟ್ಟಯ್ಯ ಮಹಾಲೆ , ಮಣಿಕುಮಾರ ಗಣಪತಿ ಪಟಗಾರ , ಗೌರೀಶ ನಾಗರಾಜ ಆಚಾರಿ , ಅಶೋಕ ವಿಠ್ಠಲ ಮಳ್ಳೂರಿ ಬಂಧಿತ ಎಲೆಮಾನವರಾಗಿದ್ದಾರೆ. ಇವರೆಲ್ಲರೂ ಸೇರಿಕೊಂಡು ಯಲ್ಲಾಪುರ ಪಟ್ಟಣದ ಕೊಂಡೆಮನೆಯ ಸಾರ್ವಜನಿಕ ಅರಣ್ಯ ಪ್ರದೇಶದಲ್ಲಿ ಅಂದರ ಬಾಹರ್ ಇಸ್ಪೀಟ್ ಜೂಗಾರಾಟ ಆಡುತ್ತಿದ್ದ ವೇಳೆ ಪಿ.ಎಸ್.ಐ ಸಿದ್ದಪ್ಪ ಗುಡಿ ನೇತೃತ್ವದಲ್ಲಿ ಸಿಬ್ಬಂದಿಗಳು ದಾಳಿ ನಡೆಸಿ, 8 ಎಲೆ ಮಾನವರನ್ನು ಬಂಧಿಸಿ, 814,170 ರೂ, ಇಸ್ಪೀಟ್ ಎಲೆಗಳು, ಒಟ್ಟೂ 25,500 ರೂ. ಮೌಲ್ಯದ 7 ಮೊಬೈಲ್ ಗಳು, 65 ಸಾವಿರ ರೂ. ಮೌಲ್ಯದ 3 ಬೈಕ್ ಸೇರಿದಂತೆ ಒಟ್ಟು 1,04,670 ರೂ. ಮೌಲ್ಯದ ವಿವಿಧ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.