Slide
Slide
Slide
previous arrow
next arrow

ಸ್ಕೊಡ್‌ವೆಸ್, ದೇಸಾಯಿ ಫೌಂಡೇಶನ್‌ನಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

300x250 AD

ಶಿರಸಿ: ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಕ್ಷೇತ್ರದಲ್ಲಿ ಸ್ಕೊಡ್‌ವೆಸ್ ಸಂಸ್ಥೆಯ ಪಾತ್ರ ಶ್ಲಾಘನೀಯ ಎಂದು ಶಿರಸಿ ತಾಲೂಕು ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯ ಮಾನ್ಯ ಪೋಲೀಸ್ ಉಪನಿರೀಕ್ಷಕರಾದ ಕು. ರತ್ನಾ ಎಸ್. ಕುರಿ ಮಾತನಾಡಿದರು.

ಮಾ.8ರಂದು ಶಿರಸಿಯ ಅಂಜನಾದ್ರಿ ಸಭಾಭವನದಲ್ಲಿ ಸ್ಕೊಡ್‌ವೆಸ್ ಸಂಸ್ಥೆ ಹಾಗೂ ದೇಸಾಯಿ ಫೌಂಡೇಶನ್ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಸಾಮಾಜಿಕ ಕ್ಷೇತ್ರದಲ್ಲಿ ಮಹಿಳೆಯರು ತಮ್ಮ ಸರ್ವತೋಮುಖ ಅಭಿವೃದ್ಧಿಗಾಗಿ ಸಿಕ್ಕ ಸೌಲಭ್ಯಗಳ ಸದುಪಯೋಗ ಪಡೆದುಕೊಂಡು ಅಭಿವೃದ್ಧಿ ಪಥದಲ್ಲಿ ಸಾಗುವುದು ಅತೀ ಅವಶ್ಯಕ.

ಕಾರ್ಯಕ್ರಮದಲ್ಲಿ ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ವೆಂಕಟೇಶ್ ನಾಯ್ಕ ಕಾರ್ಯಕ್ರಮದ ಕುರಿತು ಮಾತನಾಡಿ ಕಾರ್ಯಕ್ರಮದ ಉದ್ದೇಶವನ್ನು ತಿಳಿಸಿದರು. ಸ್ಕೊಡ್‌ವೆಸ್ ಸಂಸ್ಥೆಯು ಮಹಿಳಾ ಮತ್ತು ಮಕ್ಕಳ ಸಬಲೀಕರಣಕ್ಕಾಗಿ ಹಲವಾರು ಯೋಜನೆಗಳ ಮೂಲಕ ಕಾರ್ಯನಿರ್ವಹಿಸುತ್ತಿದ್ದು, ಮಹಿಳೆಯರು ಸ್ವಾವಲಂಬಿಯಾಗಿ ಬದಕಲು ಕೌಶಲ್ಯಾಭಿವೃದ್ಧಿ ತರಬೇತಿಗಳನ್ನು ಪಡೆದು ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.

300x250 AD

ಮುಖ್ಯ ಅತಿಥಿಗಳಾದ ರೋಟರಿ ಕ್ಲಬ್ ಶಿರಸಿ, ಅಧ್ಯಕ್ಷರಾದ ಡಾ. ಸುಮನ್ ಹೆಗಡೆ ಮಾತನಾಡಿ, ವಿಶ್ವ ಮಹಿಳಾ ದಿನಚಾರಣೆಯನ್ನು ಸ್ಕೊಡ್‌ವೆಸ್‌ನಿಂದ ಆಯೋಜಿಸುತ್ತಿರುವುದು ಹೆಮ್ಮೆಯ ವಿಷಯವಾಗಿದ್ದು, ಮಹಿಳಾ ದಿನಚಾರಣೆ ಕೇವಲ ಒಂದು ದಿನದ ಕಾರ್ಯಕ್ರಮವಾಗಬಾರದು. ಮಹಿಳೆಯರನ್ನು ಗೌರವಿಸಿ ಹಾಗೂ ಅವರ ಮೇಲಿನ ದೌರ್ಜನ್ಯವನ್ನು ಪ್ರತಿದಿನವು ತಡೆದಾಗ ಮಾತ್ರ ಈ ದಿನಕ್ಕೊಂದು ಅರ್ಥಸಿಕ್ಕಂತಾಗುತ್ತದೆ ಎನ್ನುವ ಮೂಲಕ ಈ ಕಾರ್ಯಕ್ರಮನ್ನು ಆಯೋಜಿಸಿದ ಸ್ಕೊಡ್‌ವೆಸ್ ಸಂಸ್ಥೆಯನ್ನು ಅಭಿನಂದಿಸಿದರು.
ಮುಖ್ಯ ಅತಿಥಿಗಳಾದ ಸರಸ್ವತಿ ಎನ್. ರವಿ ಕಾರ್ಯದರ್ಶಿಗಳು, ಮುಖ್ಯ ಹಣಕಾಸು ಮತ್ತು ಆಡಳಿತ ಅಧಿಕಾರಿಗಳು ಸ್ಕೊಡ್‌ವೆಸ್‌ಸಂಸ್ಥೆ ಶಿರಸಿ ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಹಿಳೆಯರು ತಮ್ಮಲ್ಲಿರು ಕೌಶಲ್ಯಾ ಹಾಗೂ ಅವಕಾಶಗಳನ್ನು ಬಳಸಿಕೊಂಡು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಧೃಡವಾಗಿ ಬದುಕುವುದು ಅತೀ ಅವಶ್ಯಕ, ಸ್ಕೊಡ್‌ವೆಸ್ ಸಂಸ್ಥೆಯು ದೇಸಾಯಿ ಫೌಂಡೇಶನ್ ಟ್ರಸ್ಟ್ ಸಹಯೋಗದಲ್ಲಿ ಆಸಾನಿ ಸ್ಯಾನಿಟರಿ ಪ್ಯಾಡ್‌ಗಳನ್ನು ಪರಿಚಯಿಸಿದ್ದು, ಮಹಿಳೆಯರಿಂದ ಮಹಿಳೆಯರಿಗಾಗಿ ತಯಾರಿಸಲ್ಪಡುವ ಈ ಪ್ಯಾಡ್‌ಗಳನ್ನು ಬಳಸುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಬಸವಂತವ್ವ ನಾಯ್ಕ ಅವರನ್ನು ‘ಸಂಗಿನಿ ಆಫ್ ದಿ ಇಯರ್’ ಎಂದು ಅಭಿನಂದಿಸಲಾಯಿತು.

ಸ್ಕೊಡ್‌ವೆಸ್ ಸಂಸ್ಥೆಯ ಯೋಜನಾ ಸಂಯೋಜಕರಾದ ಉಮೇಶ ಮರಾಠಿ ನಿರೂಪಿಸಿ, ಸಿಬ್ಬಂದಿ ಮಂಜುನಾಥ ಕಾಕ್ತಿಕರ ಸ್ವಾಗತಿಸಿ, ದಿನೇಶ ಮಡಿವಾಳರವರು ವಂದಿಸಿದರು. ದೇಸಾಯಿ ಫೌಂಡೇಶನ್ ಟ್ರಸ್ಟ್ನ ಶ್ರೀಮತಿ ವಿನಯಾ ನಾಯ್ಕ ಹಾಗೂ ಸಂಸ್ಥೆಯ ಸಿಬ್ಬಂದಿಗಳು ಮತ್ತು ಸಂಗಿನಿಯವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top