ಸಾಗರ: ಸ್ಪಂದನ (ರಿ) ಸಾಗರ ಇದರ 21ನೇ ವಾರ್ಷಿಕೋತ್ಸವದ ಅಂಗವಾಗಿ ಡಾ.ನಾ. ಡಿಸೋಜಾ ಸ್ಮರಣಾರ್ಥ ‘ಜತೆಗಿರುವನು ಚಂದಿರ’ ನಾಟಕವನ್ನು ಫೆ.22, ಶನಿವಾರದಂದು ಸಂಜೆ 6.30ರಿಂದ ಸಾಗರದ ಕಾಗೋಡ ತಿಮ್ಮಪ್ಪ ರಂಗಮಂದಿರಲ್ಲಿ ಆಯೋಜಿಸಲಾಗಿದೆ.
ನಾಟಕವನ್ನು ಮೈಸೂರಿನ ಸಂಕಲ್ಪ ಕಲಾ ತಂಡ ಪ್ರಸ್ತುತ ಪಡಿಸಲಿದ್ದಾರೆ. ನಾಟಕವನ್ನು ಜಯಂತ ಕಾಯ್ಕಿಣಿ ರೂಪಾಂತರಿಸಿದ್ದು, ಹುಲುಗಪ್ಪ ಕಟ್ಟೀಮನಿ ನಿರ್ದೇಶಿಸಿದ್ದಾರೆ. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಚಂದಗಾಣಿಸಲು ಸಂಘಟಕರು ಕೋರಿದ್ದಾರೆ.