Slide
Slide
Slide
previous arrow
next arrow

ಜೋಯಿಡಾದಲ್ಲಿ ಶ್ರೀ ಛತ್ರಪತಿ ಶಿವಾಜಿ ಜಯಂತಿ ಆಚರಣೆ

300x250 AD

ಜೋಯಿಡಾ : ತಾಲೂಕು ಕೇಂದ್ರದಲ್ಲಿರುವ ಶಿವಾಜಿ ವೃತ್ತದಲ್ಲಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜ ರಾಜರಾಜ ಜಯಂತಿ ಕಾರ್ಯಕ್ರಮವನ್ನು ಬುಧವಾರ ಸಂಭ್ರಮ, ಸಡಗರದಿಂದ ಆಚರಿಸಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಗೆ ಮಾಲಾರ್ಪಣೆಯನ್ನು ಮಾಡಿ ಗೌರವ ನಮನವನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಮರಾಠಾ ಸಮಾಜದ ಅಧ್ಯಕ್ಷರಾದ ಚಂದ್ರಕಾಂತ ದೇಸಾಯಿ ಅವರು ಹಿಂದವೀ ಸಾಮ್ರಾಜ್ಯದ ಸ್ಥಾಪಕರಾದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ದೇಶಭಕ್ತಿ, ರಾಷ್ಟ್ರ ಪ್ರೇಮ, ಯುದ್ಧ ನೀತಿ, ಧೈರ್ಯ, ಶೌರ್ಯ, ಮಹಿಳೆಯರ ಬಗ್ಗೆ ಇದ್ದ ಅಪಾರ ಗೌರವ, ಜಾತ್ಯತೀತ ಮನೋಭಾವನೆ ಸದಾ ಸ್ಮರಣೀಯವಾಗಿದೆ. ಶಿವಾಜಿ ಮಹಾರಾಜರು ಕಾಯಕಯೋಗಿಗಳಾದ ರೈತರ ಬಗ್ಗೆ ಅಪಾರವಾದ ಕಳಕಳಿಯನ್ನು ಹೊಂದಿದ್ದರು. ಮೊಘಲರೊಂದಿಗೆ ಯುದ್ಧ ಮಾಡಿ ಗೆದ್ದಿರುವ ಅವರು ಗೆರಿಲ್ಲ ಯುದ್ಧದ ಪರಿಣತರಾಗಿದ್ದರು. ಛತ್ರಪತಿ ಶಿವಾಜಿ ಮಹಾರಾಜರು ಬಾಲ್ಯದಿಂದಲೇ ರಾಮಾಯಣ, ಮಹಾಭಾರತ ಓದಿ ಸ್ವರಾಜ್ಯ ರಾಜ್ಯ ನಿರ್ಮಿಸಿದ ಹಿರಿಮೆ ಮತ್ತು ಗೌರವಕ್ಕೆ ಪಾತ್ರರಾದವರು. ಛತ್ರಪತಿ ಶಿವಾಜಿ ಮಹಾರಾಜರ ತತ್ವಾದರ್ಶಗಳನ್ನು ನಾವು ನೀವೆಲ್ಲರೂ ಮೈಗೊಡಿಸಿಕೊಂಡು ಸದೃಢ ಭಾರತ ನಿರ್ಮಾಣಕ್ಕೆ ನಮ್ಮನ್ನು ನಾವು ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.

300x250 AD

ಈ ಸಂದರ್ಭದಲ್ಲಿ ಪ್ರಮುಖರಾದ ವಿನಯ ದೇಸಾಯಿ, ಕಮಲಾಕರ ದೇಸಾಯಿ, ವಿನೋದ ಮಿರಾಶಿ, ಸುಧಾಕರ ದೇಸಾಯಿ, ನಿಲೇಶ್ ದೇಸಾಯಿ,ಅರುಣ್ ಕಾಮ್ರೇಕರ್, ಸೂರಜ ಹರಿಜನ, ಗಜಾನನ ದೇಸಾಯಿ, ಶ್ಯಾಮ್ ಪೋಕಳೆ, ರಶ್ಮಿ ರೇಡ್ಕರ್, ಸ್ನೇಹಾ ದೇಸಾಯಿ ಮೊದಲಾದವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top