Slide
Slide
Slide
previous arrow
next arrow

ಶಿವಾಜಿ ಮಹಾರಾಜರ ದೇಶಭಕ್ತಿ ಯುವ ಪೀಳಿಗೆ ಮಾದರಿ: ಸಾಜಿದ್ ಮುಲ್ಲಾ

300x250 AD

ಕಾರವಾರ: ರಾಷ್ಟ್ರವನ್ನು ಪರಕೀಯರ ಆಡಳಿತದಿಂದ ಮುಕ್ತಿಗೊಳಸಿ ರಕ್ಷಿಸುವಲ್ಲಿ ಶಿವಾಜಿ ಮಹಾರಾಜರ ಕೊಡುಗೆ ಆಪಾರವಾಗಿದೆ. ಶಿವಾಜಿ ಅವರ ರಾಷ್ಟ್ರ ಮನೋಭಾವ, ದೇಶಪ್ರೇಮ ಇಂದಿನ ಯುವಪೀಳಿಗೆಗೆ ಮಾದರಿಯಾಗಿವೆ ಎಂದು ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ ಹೇಳಿದರು.

ಅವರು ಬುಧವಾರ ನಗರ ಸಭೆ ಉದ್ಯಾವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರ ಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಛತ್ರಪತಿ ಶಿವಾಜಿ ಮಹಾರಾಜ ಜಯಂತಿಯನ್ನು ಶಿವಾಜಿ ಮಹಾರಾಜ ಪುತ್ಥಳಿಗೆ ಹಾಗೂ ಭಾವ ಚಿತ್ರಕ್ಕೆ ಪೂಜೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಶಿವಾಜಿ ಮಹಾರಾಜರು ಯಾವುದೇ ಧರ್ಮ, ಜಾತಿ, ಸಮಾಜಕ್ಕೆ ಸಿಮೀತಗೊಳದೇ , ಪರಕೀಯರ ಆಳ್ವಿಕೆಯ ಸಂದರ್ಭದಲ್ಲಿ ಸ್ವತಂತ್ರ ದೇಶವಾನ್ನಗಿಸಲು ದೇಶ ಉದ್ದಗಳಕ್ಕೂ ಓಡಾಡಿ ಎಲ್ಲರನ್ನು ಓಗ್ಗೂಡಿಸಿ ಸೇನೆಯನ್ನು ಸ್ಥಾಪಸಿದ್ದರು. ಪ್ರಜೆಗಳಲ್ಲಿ ದೇಶದ ಏಕತೆ, ಸಮಾನತೆ , ದೇಶಭಕ್ತಿಯ ಬಗ್ಗೆ ಅರಿವು ಮೂಡಿಸಿ ಪರಕೀಯರ ವಿರುದ್ದ ಹೊರಾಡಿದ ಫಲವಾಗಿ ಇಂದು ಭಾರತ ದೇಶ ಅಖಂಡ ದೇಶವಾಗಿ ನಿಮಾರ್ಣಗೊಂಡಿದ್ದು, ಇವರನ್ನು ರಾಷ್ಟ್ರೀಯ ನಾಯಕ ಎಂದು ಕರೆಯಲಾಗುತ್ತದೆ ಎಂದರು.
ಭಾರತಿಯ ನೌಕಾಪಡೆ ಎಂಬ ಪರಿಕಲ್ಪನೆಯನ್ನು ಹುಟ್ಟು ಹಾಕಿದವರೇ ಶಿವಾಜಿ ಮಹಾರಾಜರು ಇವರ ಆಸ್ಥಾನದಲ್ಲಿ ಯಾವುದೇ ಜಾತಿ, ಧರ್ಮ, ಭೇದ ಭಾವವಿಲ್ಲದೇ ದೀನ ದಲಿತರಿಗೂ ಆಶ್ರಯ ನೀಡುತ್ತಿದ್ದರು ಎಂದರು.
ನಗರಸಭೆ ಅಧ್ಯಕ್ಷ ರವಿರಾಜ ಚಂದ್ರಹಾಸ ಅಂಕೋಲೆಕರ ಮಾತನಾಡಿ, ಜೀಜಾಬಾಯಿಯವರ ಪ್ರೇರಣೆಯಿಂದ ಶಿವಾಜಿ ಮಹಾರಾಜರು ದೇಶಭಕ್ತಿಯನ್ನು ಮೈಗೂಡಿಸಿಕೊಂಡರು. ಸ್ವರಾಜ್ಯವನ್ನು ಕಟ್ಟುವುದೇ ಅವರ ಗುರಿಯಾಗಿತ್ತು. ಇವರ ಯುದ್ದಕಲೆಯನ್ನು ಸೇನೆಯಲ್ಲಿ ಇಂದಿಗೂ ಪಾಲನೆ ಮಾಡಲಾಗುತ್ತದೆ ಎಂದರು.
ಬಾಡದ ಶಿವಾಜಿ ಶಿಕ್ಷಣ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಹಾಗೂ ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ನವೀನ್ ದೇವರಬಾವಿ ಶಿವಾಜಿ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಶಿವಾಜಿ ಎಂಬ ಹೆಸರಲ್ಲೇ ಶೌರ್ಯ, ಧೈರ್ಯ, ಸಾಹಸ, ಅಪ್ರತಿಮ ದೇಶಭಕ್ತಿಯನ್ನು ಕಾಣಬಹುದಾಗಿದೆ. ಏಕತೆಯ ಸಮಾನತೆಯನ್ನು ಸಾರಿ , ಹಿಂದೂಸ್ಥಾನದ ಪರಿಕಲ್ಪನೆಯಲ್ಲಿ ಹಿಂದು ಸಾಮ್ರಾಜ್ಯವನ್ನು ಸ್ಥಾಪಿಸುವಲ್ಲಿ ಕಾರಣಕರ್ತರಾಗಿದ್ದಾರೆ. ಶಿವಾಜಿ ಅವರ ಆದರ್ಶಗಳನ್ನು ಆಳವಡಿಸಿಕೊಂಡು ಉತ್ತಮ ರಾಷ್ಟ್ರ ನಿರ್ಮಾಣ ಮಾಡಲು ಎಲ್ಲರೂ ಕೈಜೋಡಿಸೋಣ ಎಂದರು.
ಕಾರ್ಯಕ್ರಮದ ಪೂರ್ವದಲ್ಲಿ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಶಿವಾಜಿ ಮಹಾರಾಜ ಅವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆ ಸ್ಥಾಯಿ ಸಮಿತಿಯ ಅಧ್ಯಕ್ಷೆ ಮಾಲಾ ಪ್ರದೀಪ ಹುಲಸ್ವಾರ, ನಗರಸಭೆ ಪೌರಾಯುಕ್ತ ಜಗದೀಶ್ ಹುಲಗಜ್ಜಿ, ಛತ್ರಪತಿ ಶಿವಾಜಿ ಮಹಾರಾಜರ ಅಭಿಮಾನಿ ಸಮಿತಿಯ ಅಧ್ಯಕ್ಷ ಸತೀಶ್ ಕೊಳಂಬಕರ, ನಗರಸಭೆ ಸದಸ್ಯರಾದ ಹನುಮಂತ ತಳವಾರು, ಗಿರೀಶ್, ಮನೋಜ್ ಬಾಂದೇಕರ್, ಸುಜಾತ, ಶ್ವೇತಾ ನಾಯ್ಕ, ನಗರಸಭೆ ಅಧಿಕಾರಿ ಸಿಬ್ಬಂದಿಗಳು , ಮರಾಠ ಸಮಾಜದವರು, ಸರಸ್ಪತಿ ವಿದ್ಯಾಲಯದ ವಿದ್ಯಾರ್ಥಿಗಳು ಮತ್ತಿತರರು ಇದ್ದರು.
ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಲಾ ಎಂ. ನಾಯ್ಕ ಸ್ವಾಗತಿಸಿದರು. ಶಿವಾಜಿ ವಿದ್ಯಾ ಮಂದಿರದ ಶಿಕ್ಷಕ ಮಹಾದೇವ ರಾಣೆ ನಿರೂಪಿಸಿ, ವಂದಿಸಿದರು.

300x250 AD
Share This
300x250 AD
300x250 AD
300x250 AD
Back to top