ಸಿದ್ದಾಪುರ: ಪಟ್ಟಣದ ಕೃಷಿ ಹುಟ್ಟುವಳಿ ಸಂಸ್ಕರಣ ಮತ್ತು ಮಾರಾಟ ಸಹಕಾರ ಸಂಘಕ್ಕೆ ಹಾಲಿ ಅಧ್ಯಕ್ಷ ರಮಾನಂದ ನಾರಾಯಣ ಹೆಗಡೆ ಮಳಗುಳಿ ಅವರ ನೇತೃತ್ವದ ತಂಡ ಜಯಗಳಿಸಿದೆ.
12ಸ್ಥಾನಕ್ಕೆ ನಡೆಯಬೇಕಾಗಿದ್ದ ಚುನಾವಣೆಯಲ್ಲಿ 4ಸ್ಥಾನಗಳು ಅವಿರೋಧವಾಗಿ ಆಯ್ಕೆ ಆಗಿದ್ದು ಇನ್ನುಳಿದ 8ಸ್ಥಾನಕ್ಕೆ ಶನಿವಾರ ಚುನಾವಣೆ ನಡೆದಿತ್ತು.
ಚುನಾವಣೆಯಲ್ಲಿ ರಮಾನಂದ ನಾರಾಯಣ ಹೆಗಡೆ ಮಳಗುಳಿ, ಚಂದ್ರಶೇಖರ ಹನುಮಂತ ನಾಯ್ಕ ಬೇಡ್ಕಣಿ,ಗುರುಮೂರ್ತಿ ರಾಮಚಂದ್ರ ನಾಯ್ಕ ಹುಲಿಮನೆ, ಕೃಷ್ಣಮೂರ್ತಿ ರಾಮಚಂದ್ರ ಹೆಗಡೆ ಹೆಬ್ಕುಳಿ, ಗಣಪತಿ ಶ್ರೀಧರ ಭಟ್ಟ ಸಾರಂಗ ಬಾಳೆಕುಳಿ, ಮಧುಕೇಶ್ವರ ರಾಮಕೃಷ್ಣ ಹೆಗಡೆ ಬಕ್ಕೆಮನೆ, ಸುಬ್ರಾಯ ರಾಮಚಂದ್ರ ಹೆಗಡೆ ಕೊಡ್ಸರ, ನಾಗರಾಜ ತಿಮ್ಮ ನಾಯ್ಕ ಶುಂಠಿ ಕೊಲಸಿರ್ಸಿ ಇವರು ಆಯ್ಕೆ ಆಗಿದ್ದಾರೆ.
ಅವಿರೋಧವಾಗಿ ನಾಗರಾಜ ಶಂಕರ ಗೌಡರ್ ಹೆಗ್ಗೋಡಮನೆ, ಗಣಪತಿ ಹೊಳೆಯ ಬಿಲ್ಛತ್ರಿ ಕನ್ನಳ್ಳಿ, ವಿನುತಾ ವಿನಾಯಕ ಹೆಗಡೆ ಕೆಳಗಿನಮನೆ ಹಾಗೂ ನೇತ್ರಾವತಿ ಈರಾ ಗೌಡ ಕಲ್ಮನೆ ಇವರು ಆಯ್ಕೆ ಆಗಿದ್ದಾರೆ.
ರಿಟರ್ನಿಂಗ್ ಅಧಿಕಾರಿಯಾಗಿ ತಾಲೂಕು ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಎಲ್ ಗುಡುಕೇರಿ ಕಾರ್ಯನಿರ್ವಹಿಸಿದ್ದರು.