ಹೊನ್ನಾವರ; ಮಕ್ಕಳ ಪ್ರತಿಭೆ ಗುರುತಿಸಿ ವೇದಿಕೆ ಕಲ್ಪಿಸಿ ಪೊತ್ಸಾಹ ನೀಡಿದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದು ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ ಹೇಳಿದರು.
ತಾಲೂಕಿನ ಸಾಲ್ಕೋಡ್ ಪ್ರಾಥಮಿಕ ಶಾಲಾ ಆವರಣದಲ್ಲಿ ಗೆಳೆಯರ ಬಳಗ ಸಾಲ್ಕೋಡ್ ಇವರು ಆಯೋಜಿಸಿದ ತೃತೀಯ ವರ್ಷದ ಜಿಲ್ಲಾಮಟ್ಟದ ಕೌಂಟಿ ಕ್ರಿಕೇಟ್ ಪಂದ್ಯಾವಳಿಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಯುವಕರೆಲ್ಲರೂ ಸಂಘಟಿತರಾಗಿ ಕ್ರೀಡೆಯ ಜೊತೆ ಮನೊರಂಜನಾ ಕಾರ್ಯಕ್ರಮ ಆಯೋಜಿಸಿ ಯಶ್ವಸಿಯಾಗಿದ್ದಾರೆ. ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಪಠ್ಯ ಹಾಗೂ ಪಠ್ಯೇತರ ವಿಭಾಗದಲ್ಲಿ ಸಾಧನೆ ಮಾಡಲು ಪಾಲಕರು ಪರಿಶ್ರಮ ಪಡುತ್ತಾರೆ. ಮಕ್ಕಳಲ್ಲಿ ಯಾವ ವಿಭಾಗದಲ್ಲಿ ಆಸಕ್ತಿ ಇದೆಯೋ ಆ ರಂಗದಲ್ಲಿ ಮುಂದುವರೆಯುವಂತೆ ತಂದೆ ತಾಯಿಗಳು ವಿಶೇಷ ಒತ್ತು ನೀಡುವಂತೆ ಪೊತ್ಸಾಹ ನೀಡುವಂತೆ ಮನವಿ ಮಾಡಿದರು.
ಕ್ರೀಡಾಂಗಣ ಉದ್ಘಾಟಿಸಿದ ಕಾಂಗ್ರೇಸ್ ಮುಖಂಡರು ಹಾಗೂ ಉದ್ದಿಮೆದಾರರಾದ ಮಂಜುನಾಥ ನಾಯ್ಕ ಕುಮಟಾ ಮಾತನಾಡಿ ಯುವಕರು ಕ್ರೀಡೆಯ ಜೊತೆಗೆ ಸಾಮಾಜಿಕ ಕ್ಷೇತ್ರದಲ್ಲಿಯೂ ಒಗ್ಗೂಡಿ ಉತ್ತಮ ಕಾರ್ಯ ನಡೆಸಬೇಕು. ಸಮಾಜ ಸಂಘಟಿತವಾಗಲು ಯುವಕರ ಪಾತ್ರ ಬಹುಮುಖ್ಯವಾಗಿದೆ. ಕ್ರೀಡೆಯು ದೈಹಿಕವಾಗಿ ಸದೃಡ ಮಾಡುವ ಜೊತೆಗೆ ಮನೊರಂಜನೆ ನೀಡುದರಿಂದ ಪ್ರತಿಯೋರ್ವರ ಮೇಲೂ ಒಳ್ಳೆಯ ಪರಿಣಾಮ ಬೀರಲಿದೆ ಎಂದರು.
ಗ್ರಾ.ಪಂ. ಉಪಾಧ್ಯಕ್ಷ ಬಾಲಚಂದ್ರ ನಾಯ್ಕ, ಗ್ರಾ.ಪಂ. ಸದಸ್ಯ ಸಚೀನ ನಾಯ್ಕ, ಲಕ್ಷ್ಮೀ ಮುಕ್ರಿ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಗಜಾನನ ನಾಯ್ಕ ಸಂಘಟನೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ.ಅಧ್ಯಕ್ಷರಾದ ಯಮುನಾ ನಾಯ್ಕ ಮಾತನಾಡಿ ಕ್ರೀಕೇಟ್ ಪಂದ್ಯಾವಳಿಯು ನಿರಂತರವಾಗಿ ನಡೆಯಲಿ ಎಂದು ಶುಭಹಾರೈಸಿದರು.
ವೇದಿಕೆಯಲ್ಲಿ ಗ್ರಾ.ಪಂ. ಸದಸ್ಯ ಪಾತ್ರೋನ್ ಮೆಂಡಿಸ್, ಸಂಘಟನೆಯ ಅಧ್ಯಕ್ಷ ವಸಂತ ನಾಯ್ಕ ಉಪಸ್ಥಿತರಿದ್ದರು. ಶಿಕ್ಷಕರಾದ ಸತೀಶ ನಾಯ್ಕ ಸ್ವಾಗತಿಸಿ ಗಣೇಶ ಭಾಗ್ವತ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮಕ್ಕೂ ಮೊದಲು ಡಾನ್ಸ ಸ್ಪರ್ಧಾ ಕಾರ್ಯಕ್ರಮ ಜರುಗಿತು. ವಿಜೇತ ವಿದ್ಯಾರ್ಥಿಗಳಿಗೆ ವೇದಿಕೆಯಲ್ಲಿ ಬಹುಮಾನ ವಿತರಿಸಲಾಯಿತು.