ಶಿರಸಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿರಸಿ, ಗ್ರೀನ್ ಕೇರ್ ಸಂಸ್ಥೆ (ರಿ.), ಶಿರಸಿ, ಇಕೋ ಕೇರ್ (ರಿ.) ಶಿರಸಿ, ಸಂಕಲ್ಪ ಟ್ರಸ್ಟ್, ಶಿರಸಿ ಇವರ ಸಹಯೋಗದೊಂದಿಗೆ ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ತಾಲೂಕಿನ ಅಬ್ರಿಮನೆಯ ಸುಯೋಗಾಶ್ರಯದಲ್ಲಿ ಫೆ.15ರಂದು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಶಿರಸಿಯ ವಾಣಿಜ್ಯ ತೆರಿಗೆ ಅಧಿಕಾರಿಗಳಾದ ಶ್ರೀಮತಿ ಭುವನೇಶ್ವರಿ ಪಾಟೀಲ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಯೋಗಾಶಯದ ಶ್ರೀಮತಿ ಲತೀಕಾ ಭಟ್ ಅವರ ಸೇವೆಯನ್ನು ಪ್ರಶಂಶಿಸಿದರು ಮತ್ತು ಕೆಲವು ಹಿರಿಯ ನಾಗರಿಕರಿಗೆ ಕಣ್ಣಿನ ಪೊರೆ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆಯನ್ನು ಆರೋಗ್ಯ ಇಲಾಖೆಯವರ ಗಮನಕ್ಕೆ ತಂದು ಆದಷ್ಟು ಬೇಗ ಮಾಡಿಸಲು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಲತಿಕಾ ಭಟ್ ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ತಾಲೂಕ ಆರೋಗ್ಯ ಅಧಿಕಾರಿಗಳು ಡಾ. ವಿನಾಯಕ್ ಭಟ್, ಕಸ್ತೂರ್ಬಾ ಆಸ್ಪತ್ರೆ ಕಾರ್ಯಾಚರಣೆಗಳ ಉಪ ವ್ಯವಸ್ಥಾಪಕರು ಮತ್ತು ಗ್ರೀನ್ ಕೇರ್ ಸಂಸ್ಥೆಯ ಅಧ್ಯಕ್ಷರಾದ ಡಾ. ಶ್ಯಾಮಸುಂದರ ಎಸ್, ಅಸ್ಮಿತೆ ಫೌಂಡೇಶನ್ ನ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ರಿಯಾಜ್ ಸಾಗರ್, ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘ (ರಿ.) ಜಿಲ್ಲಾ ಶಾಖೆ: ಉತ್ತರ ಕನ್ನಡದ ಅಧ್ಯಕ್ಷರಾದ ಮಹೇಶ್ ಡಿ. ನಾಯಕ, ಬೆಂಗಳೂರಿನ ಖ್ಯಾತ ಉದ್ಯಮಿಗಳಾದ ಶಂಭು ಕುಮಾರ್ ಪುರೋಹಿತ್, ಸಂಕಲ್ಪ ಟ್ರಸ್ಟಿನ ಅಧ್ಯಕ್ಷರಾದ ಕುಮಾರ್ ಪಟಗಾರ ಮತ್ತು ಇಕೋ ಕೇರ್ ಸಂಸ್ಥೆಯ ಅಧ್ಯಕ್ಷರಾದ ಸುನಿಲ್ ಭೋವಿ ಭಾಗವಹಿಸಿದ್ದರು. ಮುಖ್ಯ ಅತಿಥಿಗಳು ಮಾತನಾಡಿ ಸುಯೋಗಾಶ್ರಯ ನಡೆಸುತ್ತಿರುವ ಈ ಸೇವೆಯಲ್ಲಿ ನಾವು ಸೇವೆ ಮಾಡಲು ಸದಾ ಸಿದ್ಧ ಎಂದರು. ಈ ಸಂದರ್ಭದಲ್ಲಿ ಸಹಾಯಕ ಆಯುಕ್ತರು ಹಾಗೂ ಉಪ ವಿಭಾಗದ ದಂಡಾಧಿಕಾರಿಗಳು ಕು. ಕಾವ್ಯಾರಾಣಿ ಕೆ. ವಿ. ಕೆ.ಎ.ಎಸ್ ಆಶ್ರಮಕ್ಕೆ ಭೇಟಿಕೊಟ್ಟು ಆಶ್ರಮದ ಕೊಠಡಿಗಳನ್ನು ವೀಕ್ಷಿಸಿ ಆಶ್ರಮ ನಡೆಸುತ್ತಿರುವ ಶ್ರೀಮತಿ ಲತಿಕಾ ಭಟ್ ಅವರ ಸೇವೆಯನ್ನು ಮೆಚ್ಚಿ ಪ್ರಶಂಶಿಸಿ ನಿಮ್ಮ ಈ ಉತ್ತಮ ಸೇವೆಗೆ ನಮ್ಮ ಬೆಂಬಲ ಸದಾ ಇದ್ದೇ ಇರುತ್ತದೆ ಎಂದರು ಮತ್ತು ಗ್ರೀನ್ ಕೇರ್ ಸಂಸ್ಥೆ ಹಾಗೂ ಸಂಘ ಸಂಸ್ಥೆಗಳು ನಡೆಸುತ್ತಿರುವ ಈ ಸೇವೆಯನ್ನು ಪ್ರಶಂಶಿಸಿದರು. ಶ್ರೀಮತಿ ಲತಿಕಾ ಭಟ್ ಅವರು ಮಾತನಾಡಿ ಇಂಥ ಸೇವೆ ಮಾಡುತ್ತಿರುವ ಎಲ್ಲಾ ಸಂಘ-ಸಂಸ್ಥೆಗಳನ್ನು ಪ್ರಶಂಸಿಸಿದರು. ಸಭಾ ಕಾರ್ಯಕ್ರಮದ ನಂತರ ಡಾ. ಶ್ಯಾಮಸುಂದರ್ ಎಸ್. ಅವರು ಎಲ್ಲಾ ಹಿರಿಯ ನಾಗರಿಕರನ್ನು ಪರೀಕ್ಷಿಸಿ ಸೂಕ್ತ ಔಷಧಿಗಳನ್ನು ಕೊಟ್ಟರು. ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮಧುಮೇಹ, ಹಿಮೋಗ್ಲೋಬಿನ್, ರಕ್ತದೊತ್ತಡ, ಪರೀಕ್ಷೆಗಳನ್ನು ಮಾಡಿದರು. ಈ ಸಂದರ್ಭದಲ್ಲಿ ಗ್ರೀನ್ ಕೇರ್ ಸಂಸ್ಥೆಯ ಉಪಾಧ್ಯಕ್ಷರಾದ ಪ್ರಶಾಂತ್ ಮುಳೆ, ನಿರ್ದೇಶಕರಾದ ಉದಯ ಜಯಪ್ಪನವರ್, ಸಲಹೆಗಾರರಾದ ಶ್ರೀಧರ್ ನಾಯ್ಕ, ಶ್ರೀಮತಿ ಮಾಲಿನಿ ಶ್ರೀಧರ್ ಮತ್ತು ಗ್ರೀನ್ ಕೇರ್ ಸಂಸ್ಥೆಯ ಶ್ರೀಮತಿ ಉಪಸ್ಥಿತರಿದ್ದರು. ಗ್ರೀನ್ ಕೇರ್ ಸಂಸ್ಥೆಯ ಕಾರ್ಯದರ್ಶಿಗಳಾದ ಜಿತೇಂದ್ರ ಕುಮಾರ್ ಆರ್. ಎಂ. ಕಾರ್ಯಕ್ರಮ ನಿರೂಪಿಸಿದರು ಇಕೋ ಕೇರ್ ಸಂಸ್ಥೆಯ ನಿರ್ದೇಶಕರಾದ ರಾಜೇಶ್ ಶೇಟ್ ವಂದಿಸಿದರು.
ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ
