ಸಿದ್ದಾಪುರ: ತಾಲೂಕಿನ ಹಂಗಾರಖಂಡದಲ್ಲಿ ವೇ.ಮೂ. ವಿನಾಯಕ ಎಸ್.ಭಟ್ ಮಾರ್ಗದರ್ಶನದ ಶ್ರೀ ಚೌಡೇಶ್ವರಿ, ನಾಗ ಮತ್ತು ಪರಿವಾರ ದೇವತೆಗಳ 8 ನೇ ವರ್ಧಂತಿ ಉತ್ಸವವು ಜರುಗಲಿದೆ. ಬೆಳಗ್ಗಿನಿಂದಲೇ ವಿವಿಧ ಪೂಜೆಗಳು,ಧಾರ್ಮಿಕ ಕೈಂಕರ್ಯಗಳು,ಹವನ, ಪೂಜಾ ವಿಧಿ ವಿಧಾನಗಳು, ಮಹಾಮಂಗಳಾರತಿ, ತೀರ್ಥಪ್ರಸಾದ ವಿತರಣೆ, ವಿಪ್ರಾಶೀರ್ವಾದ, ನಂತರ ಅನ್ನ ಸಂತರ್ಪಣೆ ನಡೆಯಲಿದೆ. ನಂತರ ಮುಸ್ಸಂಜೆ 6-30 ರಿಂದ ಚಿಕ್ಕ ಮಕ್ಕಳಿಂದ ವಿವಿಧ ಮನರಂಜನಾ ಕಾರ್ಯಕ್ರಮಗಳು, ಸಭಾ ಕಾರ್ಯಕ್ರಮ,ಊರಿನ ಶಿಕ್ಷಣ- ಕ್ರೀಡೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಊರಿನ ಹಿರಿಯ ನಾಗರಿಕರಿಗೆ ಗೌರವ ಸಮರ್ಪಣೆ, ನಡೆಯಲಿದೆ. ನಂತರ ಶ್ರೀ ದೇವರಿಗೆ ಸಮರ್ಪಿಸಲಾದ ಫಲಾವಳಿಗಳ ಹರಾಜು ಪ್ರಕ್ರಿಯೆ, ತದನಂತರ ರಾತ್ರಿ 10 ರಿಂದ ದಕ್ಷಿಣೋತ್ತರ ಜಿಲ್ಲೆಯ ದಿಗ್ಗಜ ಕಲಾವಿದರಿಂದ ದಕ್ಷಯಜ್ಞ & ಚಂದ್ರಾವಳಿ ವಿಲಾಸ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಗಾನ ಗಂಧರ್ವ ಸುರೇಶ ಶೆಟ್ಟಿ ಶಂಕರನಾರಾಯಣ, ಗಾನಸಿರಿ ಸರ್ವೇಶ್ವರ ಹೆಗಡೆ ಮೂರೂರು, ಗಾನ ವಲ್ಲಭ ರಾಮಕೃಷ್ಣ ಹೆಗಡೆ ಹಿಲ್ಲೂರು, ವಿಘ್ನೇಶ್ವರ ಕೆಸರಕೊಪ್ಪ, ಅನಿರುದ್ಧ ವರ್ಗಾಸರ, ಅವರನ್ನೊಳಗೊಂಡ ಅಗ್ರಮಾನ್ಯ ಹಿಮ್ಮೇಳ, ಯಕ್ಷ ದಿಗ್ಗಜರಾದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಗೋಪಾಲ ಆಚಾರ್ಯ ತೀರ್ಥಹಳ್ಳಿ, ಸುಬ್ರಹ್ಮಣ್ಯ ಹೆಗಡೆ ಚಿಟ್ಟಾಣಿ,ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಅಶೋಕ ಭಟ್ ಸಿದ್ದಾಪುರ, ಹಾಸ್ಯ ಚಕ್ರವರ್ತಿ ಶ್ರೀಧರ ಭಟ್ಟ ಕಾಸರಕೊಡು, ಸುಬ್ರಹ್ಮಣ್ಯ ಹೆಗಡೆ ಮೂರೂರು, ಪ್ರವೀಣ ಹೆಗಡೆ ತಟ್ಟಿಸರ, ಅವಿನಾಶ್ ಕೊಪ್ಪ ,ಸದಾನಂದ, ರಕ್ಷಿತ್ , ಮಾಬ್ಲೇಶ್ವರ ಗೌಡ ಹಾರೆಕೊಪ್ಪ, ಗುರು ಭಟ್ ಕಡತೋಕಾ, ಮಂಜು ಗೌಡ, ಕು.ಆನಂದ, ಮುಂತಾದವರು ಮನರಂಜಿಸಲಿದ್ದಾರೆ.