ದಾಂಡೇಲಿ : ಶ್ರೀ ವಿ.ಆರ್.ಡಿ.ಎಂ ಟ್ರಸ್ಟ್, ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ, ಧಾರವಾಡದ ಎಸ್.ಡಿ.ಎಂ ದಂತ ಮಹಾವಿದ್ಯಾಲಯ, ಅಂಬಿಕಾನಗರದ ಕೆಪಿಸಿ ಆಸ್ಪತ್ರೆ ಮತ್ತು ಅಂಬಿಕಾ ನಗರ ಗ್ರಾಮ ಪಂಚಾಯ್ತು ಇವುಗಳ ಸಂಯುಕ್ತ ಆಶ್ರಯದಡಿ ಅಂಬಿಕಾ ನಗರದಲ್ಲಿ ಆಯೋಜಿಸಲಾಗಿದ್ದ ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವು ಯಶಸ್ವಿಯಾಗಿ ಸಂಪನ್ನಗೊಂಡಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎಸ್.ಡಿ.ಎಂ ಆಸ್ಪತ್ರೆಯ ಡಾ.ರಬಿ ಶಿರಹಟ್ಟಿ, ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯ ಯೋಜನಾ ಸಂಯೋಜಕರಾದ ವಿನಾಯಕ ಚೌವ್ಹಾಣ್, ಕೆಪಿಸಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ ಪ್ರಥ್ವಿ ಪೈ, ಆರೋಗ್ಯ ನಿರೀಕ್ಷಕರಾದ ನಾಗೇಶ್ವರ ರಾವ್, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸವಿತಾ,ಗ್ರಾ.ಪಂ ಸದಸ್ಯರಾದ ಸಿದ್ದಾರೂಢ, ಪ್ರಮುಖರಾದ ಭಾಗ್ಯ, ಮಣಿ, ದಿನೇಶ್ ಕಿತ್ತೂರು, ಮಣಿಕಂಠ ಮೊದಲಾದವರು ಉಪಸ್ಥಿತರಿದ್ದು ಶಿಬಿರದ ಯಶಸ್ಸಿಗೆ ಶುಭವನ್ನು ಕೋರಿದರು.
ಭಾಗ್ಯ ಮರಾಠೆ ಪ್ರಾರ್ಥನೆ ಹಾಡಿದರು. ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯ ಯೋಜನಾಧಿಕಾರಿ ಮಹಾಬಲೇಶ್ವರ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಂಸ್ಥೆಯ ಕ್ಷೇತ್ರ ಮೇಲ್ವಿಚಾರಕರಾದ ಅಂದಾನಪ್ಪ ಅಂಗಡಿ ವಂದಿಸಿದರು.
ಒಟ್ಟು 220 ಸಾರ್ವಜನಿಕರು ಶಿಬಿರದಲ್ಲಿ ಭಾಗವಹಿಸಿ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.