ಸಿದ್ದಾಪುರ : ಸಮಗಾರ ಹರಳಯ್ಯ ಜಯಂತಿಯನ್ನು ಸಿದ್ದಾಪುರದ ಡಾ. ಅಂಬೇಡ್ಕರ್ ಶಕ್ತಿ ಸಂಘದವರು ಸೋಮವಾರ ಚಮಗಾರ ಸಮುದಾಯದ ಕಾಯಕ ಭೂಮಿಯಲ್ಲಿ ವಿಶೇಷವಾಗಿ ಆಚರಿಸಿದರು. ಚಮಗಾರ ಸಮಾಜದವರು ಕುಲ ಕಸುಬು ನಡೆಸುತ್ತಿರುವ ಮುಗದೂರಿನಲ್ಲಿರುವ ಸ್ಥಳದಲ್ಲಿ ಹರಳಯ್ಯನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಜಯಂತಿಯ ಶುಭಾಶಯ ಕೋರಿದರು.
ಸಂಘದ ಅಧ್ಯಕ್ಷ ನಂದನ ಬೋರಕರ ಮಾತನಾಡಿ ಹರಳಯ್ಯನವರು ಸಮಾಜಕ್ಕೆ ನೀಡಿರುವ ಕೊಡುಗೆಗಳ ಕುರಿತು ತಿಳಿಸಿದರು ಮತ್ತು ಈ ಜಾಗದಲ್ಲಿ ಮುಂದಿನ ದಿನದಲ್ಲಿ ಶೈಕ್ಷಣಿಕ ಅಭಿವೃದ್ಧಿಗಾಗಿ ಕಟ್ಟಡ ಹಾಗೂ ಸಮುದಾಯ ಭವನ ಮತ್ತು ಗ್ರಂಥಾಲಯವನ್ನು ತೆರೆಯಲು ಸಮಾಜದವರು ಚಿಂತಿಸಿದ್ದೇವೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ನಮ್ಮ ಸಮಾಜದ ಉನ್ನತಿಗಾಗಿ ಮಾಡುತ್ತಿರುವ ಕೆಲಸಕ್ಕೆ ಸಹಕರಿಸಿ ಎಂದು ಮನವಿ ಮಾಡಿದರು.
ಸಂಘದ ಕೋಶಾಧ್ಯಕ್ಷ ಕಮಲಾಕರ ಜೋಗಳೇಕರ ಮಾತನಾಡಿ ನಮ್ಮ ಪೂರ್ವಜರು ಕೆಲಸ ಮಾಡಿದ ಈ ಜಾಗವನ್ನು ನಮ್ಮ ಮುಂದಿನ ಪೀಳಿಗೆಯ ಉಜ್ವಲ ಭವಿಷ್ಯಕ್ಕಾಗಿ ಕಾಪಾಡುವುದು ನಮೆಲ್ಲರ ಕರ್ತವ್ಯವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರಾದ ಚಂದ್ರಶೇಖರ ಕಾನಡೆ, ವೆಂಕಟೇಶ ಹೊನ್ನಾವರಕರ್, ಪ್ರಮುಖರಾದ ಕುಮಾರ, ರಿತೇಶ, ದೇವರಾಜ, ವಿಗ್ನೇಶ್,ವೆಂಕಟೇಶ ಇನ್ನಿತರರು ಉಪಸ್ಥಿತರಿದ್ದರು.
ಚಮಗಾರ ಸಮುದಾಯದವರು ಹಿಂದೆ ಕುಲ ಕಸುಬು ಮಾಡುತ್ತಾ ಬಂದ ಜಾಗದಲ್ಲಿ ಕೆಲವರು ಆತಿಕ್ರಮಣ ಮಾಡಿದ್ದರು ಸಮಾಜದ ಮುಖಂಡರೆಲ್ಲ ಸೇರಿ ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದೆವು ತಕ್ಷಣ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದರು, ಮೊನ್ನೆ ಸೋಮವಾರ ನಡೆದ ಕಾಯಕ ಶರಣರ ಜಯಂತಿ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಕಚೇರಿಯಲ್ಲಿ ಅರಣ್ಯ ಅಧಿಕಾರಿಗಳು ಅಲ್ಲಿ ಬಿದ್ದ ಕಸ ಕಡ್ಡಿ ತ್ಯಾಜ್ಯಗಳನ್ನು ತೆರವುಗೊಳಸಿ ಸಮುದಾಯದವರಿಗೆ ಸಂಬಂಧಪಟ್ಟಷ್ಟು ಜಾಗವನ್ನು ಬಳಕೆಗೆ ಒದಗಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತೇವೆ.–
ನಂದನ ಬೋರಕರ
ಅಧ್ಯಕ್ಷರು
ಡಾ. ಅಂಬೇಡ್ಕರ್ ಶಕ್ತಿ ಸಂಘ ಸಿದ್ದಾಪುರ.