ಶಿರಸಿ: ಶ್ರೀ ರಾಜರಾಜೇಶ್ವರೀ ವಿದ್ಯಾಸಂಸ್ಥೆಯ ಶ್ರೀನಿಕೇತನ ಶಾಲೆ ಇಸಳೂರಿನ ವಿದ್ಯಾರ್ಥಿಗಳು ಶಿರಸಿ ನಗರದ ಪ್ರತಿಷ್ಠಿತ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ್ದರು. ಶಾಲೆಯ ಗೈಡ್ಸ್ ಕ್ಯಾಪ್ಟನ್ ಶ್ರೀಮತಿ ದೀಪಾ ಮಡಗಾಂವಕರ್, ಸ್ಕೌಟ್ ಮಾಸ್ಟರ್ ಬಸವರಾಜ ಎಚ್. ಮತ್ತು ಜಿಲ್ಲಾ ಮುಖ್ಯ ಆಯುಕ್ತರಾದ ವಿ.ಎಚ್. ಭಟ್ಕಳ್ ಇವರ ಮಾರ್ಗದರ್ಶನದಲ್ಲಿ 41 ಮಕ್ಕಳಿಗೆ ಆಸ್ಪತ್ರೆಯ ಅಂಬುಲೆನ್ಸ್, ತುರ್ತು ಚಿಕಿತ್ಸೆ ಹಾಗೂ ಇನ್ನಿತರ ವೈದ್ಯಕೀಯ ಪರಿಕರಗಳ ಕುರಿತು ಮಾಹಿತಿ ನೀಡಲಾಯಿತು. ಈ ಸಂದರ್ಭದಲ್ಲಿ ಮಕ್ಕಳು ಒಳರೋಗಿಗಳಿಗೆ ಹಣ್ಣುಗಳನ್ನು ನೀಡುವ ಮೂಲಕ ಸಾರ್ವಜನಿಕ ಸೇವೆಯನ್ನು ಸಲ್ಲಿಸಿದರು.
ಅನಂತರ ಪ್ರಾದೇಶಿಕ ಸಾರಿಗೆ ಸಮೀತಿ (ಆರ್.ಟಿ.ಓ.) ಗೆ ಭೇಟಿ ನೀಡಿದ ವಿದ್ಯಾರ್ಥಿಗಳು ರಸ್ತೆ ಹಾಗೂ ಸಾರಿಗೆ ನಿಯಮಗಳ ಕುರಿತು ಮಾಹಿತಿ ಪಡೆದುಕೊಂಡರು. ಈ ಭೇಟಿಯು ಯಶಸ್ವಿಯಾಗಿರುವುದಕ್ಕೆ ಶಾಲೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕ ವೃಂದ ಹಾಗೂ ಪಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಶ್ರೀನಿಕೇತನ ಸ್ಕೌಟ್ಸ್- ಗೈಡ್ಸ್ ಆಸ್ಪತ್ರೆಗೆ ಭೇಟಿ
