ಹನುಮಾನ್ ಲೇನ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಯಶಸ್ವಿ
ಜೋಯಿಡಾ: ಜಿಲ್ಲಾ ಪಂಚಾಯತ ಉತ್ತರಕನ್ನಡ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಶಿರಸಿ ಶೈಕ್ಷಣಿಕ ಜಿಲ್ಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಜೋಯಿಡಾ, ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಹನುಮಾನ್ ಲೇನ ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಹನುಮಾನ್ ಲೇನ ಇವರ ಸಂಯುಕ್ತಾ ಶ್ರಯದಲ್ಲಿ 2024 -2025 ನೇ ಸಾಲಿನ ಶಾಲಾ ವಾರ್ಷಿಕ ಸ್ನೇಹ ಸಮ್ಮೇಳನ ಯಶಸ್ವಿಯಾಗಿ ಸಂಪನ್ನಗೊಂಡಿತು.
ಕಾರ್ಯಕ್ರಮವು ಹನುಮಾನ್ ಮಂದಿರದ ಮಿರಾಶಿ ಶಡ್ಡು ಮಿರಾಶಿಯವರ ಪೂಜೆಯೊಂದಿಗೆ, ವಿಧ್ಯಾರ್ಥಿಗಳ ಭಕ್ತಿ ಗೀತೆಯ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ವೇದಿಕೆ ಕಾರ್ಯಕ್ರಮದ ಆರಂಭದಲ್ಲಿ ಸಿಆರ್ಪಿಗಳು, ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾದ ಬಿ.ಹೆಚ್. ಭಾಗವಾನರವರು ಹಾಗೂ ಸಹ ಶಿಕ್ಷಕಿಯಾದ ನಾಗರತ್ನ ಮೊಗೇರರವರು ವೇದಿಕೆ ಕಾರ್ಯಕ್ರಮಕ್ಕೆ ಅತಿಥಿಗಳನ್ನು ಹೃದಯ ಪೂರ್ವಕವಾಗಿ ಆಮಂತ್ರಿಸಿ, ವಿಧ್ಯಾರ್ಥಿಗಳಿಂದ ಪುಷ್ಪ ಗುಚ್ಛವನ್ನು ನೀಡಿ ಸ್ವಾಗತಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದ ಆರಂಭದಲ್ಲಿ ಶಾಲೆಯ ಸಹ ಶಿಕ್ಷಕರಾದ ಮಂಜುನಾಥ ಕೂಟಬಾಗಿ ಶಾಲೆಯ ಶೈಕ್ಷಣಿಕ ವರ್ಷದ ಪ್ರಗತಿಯ ವರದಿವಾಚನವನ್ನು ವಿಷಯವಾರು ವಿವರವಾಗಿ ಮಾಡಿದರು. ವೇದಿಕೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉದಯ ಗುರವ್ ಸಹ ಶಿಕ್ಷಕರು ಪ್ರೌಢಶಾಲೆ ರಾಮನಗರ ಮಾತನಾಡಿ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಹನುಮಾನ್ ಲೇನನವರು ಈ ವರ್ಷ ಪ್ರಥಮವಾಗಿ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತಸದ ವಿಷಯ,ಇಲ್ಲಿನ ಕ್ರಿಯಾಶೀಲ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯವರ ಹಾಗೂ ಉತ್ತಮ ಶಿಕ್ಷಕ ವೃಂದದವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಶಿಂದೋಳಿಯ ಮುಖ್ಯ ಶಿಕ್ಷಕರಾದ ಅನಿಲ ರಾಠೋಡ ಮಾತನಾಡಿ ಹನುಮಾನ್ ಲೇನ ಶಾಲೆಯ ಶಿಕ್ಷಕ ವೃಂದ ಹಾಗೂ ಶಾಲಾಭಿವೃದ್ಧಿ ಸಮಿತಿ ಮತ್ತು ಮೇಲುಸ್ತುವಾರಿ ಸಮಿತಿಯವರು ಸುತ್ತಮುತ್ತಲಿನ ಶಾಲೆಗಳು ಸಮುದಾಯ ಸಹಭಾಗಿತ್ವದಲ್ಲಿ ಅಭಿವೃದ್ಧಿ ಹೊಂದಿರುವ ಪ್ರೇರಣೆಯ ಭಾಗವಾಗಿ,ತಮ್ಮ ಶಾಲೆಯಲ್ಲಿಯೂ ಶೈಕ್ಷಣಿಕ ಚಟುವಟಿಕೆಗಳನ್ನು,ಕೈಗೊಂಡು ಪ್ರಥಮ ಬಾರಿಗೆ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಹಮ್ಮಿಕೊಂಡಿರುವುದು ಹೆಮ್ಮೆಯ ವಿಷಯ,ಮನಸ್ಥಿತಿ ಬದಲಾದರೆ,ಪರಿಸ್ಥಿತಿ ಬದಲಾಗುತ್ತೆ ಎಂದು ಹೇಳಿದರು.
ರಾಮನಗರ ಗ್ರಾಮ ಪಂಚಾಯತ ಅಧ್ಯಕ್ಷರಾದ ಶಿವಾಜಿ ಗೋಸಾವಿ ಮಾತನಾಡಿ ಪಾಲಕರು,ಪೋಷಕರು ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ವಿಶೇಷ ಗಮನ ಹರಿಸಿ, ಮೊಬೈಲ್ ಬಳಕೆಯ ಬಗ್ಗೆ ಜಾಗೃತಿ ವಹಿಸಬೇಕೆಂದು ಕಿವಿ ಮಾತು ಹೇಳಿದರು, ಅದೇ ರೀತಿಯಾಗಿ ಗ್ರಾಮ ಪಂಚಾಯತನಿಂದ ಶಾಲೆಗೆ ಸಂಬಂಧಿಸಿದ ಅಭಿವೃದ್ಧಿ ಕೆಲಸಗಳಿಗೆ ನಿರಂತರ ಸಹಕಾರ ಇರಲಿದೆ ಎಂದು ಹೇಳಿದರು. ಗ್ರಾಮ ಪಂಚಾಯತ ಉಪಾಧ್ಯಕ್ಷೆ ಸುನಿತಾ ಮಾತನಾಡಿ ಇವತ್ತು ಶಾಲಾ ವಾರ್ಷಿಕ ಸ್ನೇಹ ಸಮ್ಮೇಳನದ ನಿಮಿತ್ತ ಜನ ಸಮೂಹ ಸೇರಿರುವದ್ದನ್ನು ಗಮನಿಸಿದರೆ ಜಾತ್ರೆಯ ವಾತಾವರಣ ನಿರ್ಮಾಣ ಆಗಿದ ಹಾಗೆ ಕಾಣುತ್ತಿದ್ದು,ಇಲ್ಲಿನ ಶಾಲಾ ಸಮಿತಿಯವರ, ಪಾಲಕರ, ಪೋಷಕರ, ಶಿಕ್ಷಕರ, ವಿಧ್ಯಾರ್ಥಿಗಳ ಉತ್ಸಾಹ ಮೆಚ್ಚುವಂತದ್ದು ಎಂದು ಹೇಳಿದರು.
ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾರುತಿ ಪಾಟೀಲ (ಗಾವಡೆ) ಮಾತನಾಡಿ ಹನುಮಾನ್ ಲೇನ ಶಾಲೆಯ ಶಿಕ್ಷಕ ವೃಂದ ಹಾಗೂ ಶಾಲಾಭಿವೃದ್ಧಿ ಸಮಿತಿ,ಪಾಲಕರ, ಪೋಷಕರ ವಾರ್ಷಿಕ ಸ್ನೇಹ ಸಮ್ಮೇಳನದ ಕಾರ್ಯಕ್ರಮ ಆಯೋಜನೆಯ ವಿಷಯ ಮೆಚ್ಚುವಂತದ್ದು. ಮುಂದಿನ ದಿನಗಳಲ್ಲಿ ನಮ್ಮೆಲ್ಲರ ಸಹಕಾರ ನಿರಂತರವಾಗಿ ಇರಲಿದೆ ಎಂದು ಹೇಳಿದರು. ತಾಲೂಕಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಯಶವಂತ ನಾಯ್ಕ ಮಾತನಾಡಿ ಹನುಮಾನ್ ಲೇನ ಶಾಲೆಯ ಶಾಲಾ ಆಡಳಿತ ಮಂಡಳಿವವರು, ಪಾಲಕರು, ಪೋಷಕರು ಶಿಕ್ಷಕ ವೃಂದದವರು ಜೊತೆಗೂಡಿ ಶಾಲೆಯ ಶೈಕ್ಷಣಿಕ ಕ್ಷೇತ್ರದಲ್ಲಿ ಅತ್ಯುತ್ತಮ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಸಿಆರ್ಪಿಗಳು,ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾದ ಬಿ. ಹೆಚ್ ಭಾಗವಾನ್ರವರು ಮಾತನಾಡಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯವರ,ಪಾಲಕರ, ಪೋಷಕರ,ಸಹ ಶಿಕ್ಷಕರ ಪ್ರೋತ್ಸಾಹಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಗ್ರಾಮ ಪಂಚಾಯತ ಸದಸ್ಯರಾದ ವಿನೋದ ದೇಸಾಯಿ, ಶೋಭಾ ದೇಸಾಯಿ, ಕಿಶೋರಿ ಪರಿವಾರ, ಗಂಧಾಲಿ ಕಾಮತ, ಅನಂತ ನಾಯ್ಕ, ನಂದಿಗದ್ದೆ ಗ್ರಾಮ ಪಂಚಾಯತ ಸದಸ್ಯರು,ಶಿಕ್ಷಣ ಪ್ರೇಮಿಗಳು ಆದ ಧವಳೋ ಗಣೇಶ ಸಾವರ್ಕರ್,ನಿವೃತ್ತ ಶಿಕ್ಷಕ ಗಣಪತಿ ವಿ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಸಚಿಕುಮಾರ ನಾಯರ, ಉಪಾಧ್ಯಕ್ಷೆ ವಿನಂತಿ ಸೋಲೇಯಕರ, ಇನ್ನಿತರ ಸದಸ್ಯರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಶಾಲಾ ಆರಂಭದಲ್ಲಿ ಸೇವೆ ಸಲ್ಲಿಸಿದ ಗುರುಮಾತೆ ಆರುಂಧತಿ ಮಾಲಶೇಟ ಅವರನ್ನು ,ಅದೇ ರೀತಿಯಾಗಿ ಅಗಷ್ಟ ತಿಂಗಳಲ್ಲಿ ನಿವೃತ್ತಿಯಾಗಲಿರುವ ಗುರುಮಾತೆ ಶಕುಂತಲಾ ಕುಡ್ತರಕರ ಅವರನ್ನು,ಕಳೆದ ವರ್ಷ ಅತ್ಯುತ್ತಮ ಸೇವೆ ಸಲ್ಲಿಸಿ ಕಾನೇಕರ್ ಲೈನ್ ಶಾಲೆಗೆ ವರ್ಗವಾಗಿ ಈ ಶಾಲೆಯಿಂದ ಹೋಗಿರುವ ಗುರುಮಾತೆ ಸ್ಮಿತಾ ಜಾದವ್ ಅವರನ್ನು, ಹಾಗೆಯೇ ಶಾಲೆಯ ಅತ್ಯುತ್ತಮ ವಿಧ್ಯಾರ್ಥಿ ಯಾಗಿ ಅನ್ವೇಷ ದೇಸಾಯಿ,ಅತ್ಯುತ್ತಮ ವಿಧ್ಯಾರ್ಥಿನಿಯಾಗಿ ಶರ್ವರಿ ಗುರವ್ ಅವರನ್ನು ವೇದಿಕೆಯ ಮೇಲಿದ್ದ ಗಣ್ಯರು ಸನ್ಮಾನಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರಿಗೆ,ತಾಲೂಕಿನ ಬೇರೆ ಶಾಲೆಯ ಶಿಕ್ಷಕ ವೃಂದದವರಿಗೆ, ಶಾಲೆಯಹಳೆಯ ವಿದ್ಯಾರ್ಥಿಗಳಾದ ನಾಗರತ್ನಾ ಹೊಸಮನಿ, ನಿಕಿತಾ ಮಿರಾಶಿ,ಪೂಜಾ ದೇಸಾಯಿ,ಆಶಾ ದೇಸಾಯಿ,ಸಾವಿತ್ರಿ ಹೊಸಮನಿ,ರವಿಕಲಾ ರಾವತ್, ಇಕ್ತಾ ಗಾವಡೆ ರವರಿಗೆ ಸವಿ ನೆನಪಿನ ಕಾಣಿಕೆಯನ್ನು ಶಾಲೆಯ ವತಿಯಿಂದ ನೀಡಲಾಯಿತು.ಅತಿಥಿ ಶಿಕ್ಷಕಿಯಾದ ಸಂಜನಾ ಮಿರಾಶಿಯವರು ಕೊನೆಯಲ್ಲಿ ವಂದಿಸಿದರು. ಸಾಂಸ್ಕ್ರತಿಕ ಕಾರ್ಯಕ್ರಮದ ಆರಂಭದಲ್ಲಿ ನಲಿಕಲಿ ವಿದ್ಯಾರ್ಥಿಗಳಿಂದ ಮೋಟು ಪತ್ಲೂ, ನಟರಾಜ್, ಲೇ ಲೇ ಪಾಡಿ, ಕೋಲಾಟ, ಮಲ್ಲಾರಿ ಡ್ಯಾನ್ಸ್, ತಾತ್ಯಾ ಬಾಯ್ಸ, ಹೆಣ್ಣು, ಗಂಡಿಗೆ ಸಮಾನ ಶಿಕ್ಷಣ ಕಿರು ನಾಟಕ, ಜಾನಪದ ನೃತ್ಯ, ಬಂಬ ಬಂಬ ಬೋಲೋ, ಸುಗ್ಗಿ ಕಾಲ,ಡೈರೆಕ್ಟರ್ ಸ್ಕೀಟ,ಜಿಂಗಾಟ,ಲಿಂಬು ಡ್ಯಾನ್ಸ್,ಇಂಗ್ಲಿಷ್ ಗ್ರಾಸ್ಪರ್, ಪನ್ನಿ ಡ್ಯಾನ್ಸ್, ಮರಾಠಿ ಲಾವಣಿ, ಜೈ ಹೋ, ಫಸ್ಟ ಕ್ಲಾಸ್,ಮರಾಠಿ ರಿಮಿಕ್ಸ, ಕನ್ನಡ ನಾಡು ನುಡಿಗೆ ಸಂಬಧಿಸಿದ ಕನ್ನಡ ಬೆಳಸಿ,ಕನ್ನಡ ಉಳಿಸಿ, ಓ ದೇಶ ಮೇರೆ, ಪ್ರೊಪೇಶನ, ಚಂಟಿ ಸ್ಕಿಟ, ಪಾಠ ಶಾಲೆ,ಇಂಡಿಯಾ ವಾಲೆ,ವಿಠಲ ರಿಮಿಕ್ಸ,ಇಂಗ್ಲಿಷ್ ಸ್ಕಿಟ್,ಛೋಟಾ ಬಚ್ಚಾ, ಚಿಟಕುಲಿಯಾ ನೃತ್ಯಗಳು ಕಿಕ್ಕಿರಿದು ನೆರೆದಿದ್ದ ಪ್ರೇಕ್ಷಕರ ಜನಮನ ಸೊರೆಗೊಂಡಿತು. ಸಾಂಸ್ಕ್ರತಿಕ ಕಾರ್ಯಕ್ರಮಗಳ ತಯಾರಿಗೆ ಕ್ರಿಯಾಶೀಲ ಸಿಆರ್ ಪಿ ಗಳು,ಪ್ರಭಾರ ಮುಖ್ಯ ಶಿಕ್ಷಕರಾದ ಬಿ ಹೆಚ್ ಭಾಗವಾನ,ಸಹ ಶಿಕ್ಷಕರಾದ ಮಂಜುನಾಥ ಕೂಟ ಬಾಗಿ, ನಾಗರತ್ನಾ ಮೊಗೇರ, ಶಕುಂತಲಾ ಕುಡ್ತರಕರ, ಅನಿಸ್ ಫಾತಿಮಾ, ಸುನಿತಾ ಆರ್, ಸಂಜನಾ ಮಿರಾಶಿ,ಹಳೆ ವಿಧ್ಯಾರ್ಥಿಗಳು ಇನ್ನಿತರರು ಸಹಕರಿಸಿದರು. ಶಾಲಾ ಪ್ರಭಾರ ಮುಖ್ಯ ಶಿಕ್ಷಕರಾದ ಬಿ ಹೆಚ್ ಭಾಗವಾನರವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಪ್ರತ್ಯಕ್ಷ, ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.