Slide
Slide
Slide
previous arrow
next arrow

ಟಿಎಸ್ಎಸ್ ಸುಗ್ಗಿ ಸಂಭ್ರಮ ಹೆಚ್ಚಿಸಿದ ಚಿಣ್ಣರ ಛದ್ಮವೇಷ, ಜಾನಪದ ನೃತ್ಯ: ಬಹುಮಾನ ವಿತರಣೆ

300x250 AD

ಶಿರಸಿ: ದಿ ತೋಟಗಾರ್ಸ ಕೋ-ಆಪರೇಟಿವ್ ಸೇಲ್ ಸೊಸೈಟಿ ಪ್ರಧಾನ ಕಛೇರಿಯ ಆವರಣದಲ್ಲಿ ಫೆ.9 ರವಿವಾರ ಬೆಳಿಗ್ಗೆ ಸುಗ್ಗಿ ಸಂಭ್ರಮ-ವಿಶೇಷ ಡಿಸ್ಕೌಂಟ್ ಮೇಳದ ಮೂರನೇ ದಿನದ ಛದ್ಮವೇಷ ಸ್ಪರ್ಧೆ ಸಾಂಸ್ಕೃತಿಕ ಕಾರ‍್ಯಕ್ರಮದಲ್ಲಿ ಸುಮಾರು 32 ಮಕ್ಕಳು ವೈವಿಧ್ಯಮಯ ವೇಷಭೂಷಣಗಳಿಂದ ಕಂಗೊಳಿಸಿ ಜನ ಮನ ಸೆಳೆದು ಮೆಚ್ಚುಗೆಗೆ ಪಾತ್ರರಾದರು.

ಬಾಲರಾಮ, ಬಾಲಕೃಷ್ಣ, ಗೋಪಾಲಕೃಷ್ಣ, ಮುರಳೀಕೃಷ್ಣ, ವೇಣುಗೋಪಾಲ, ಲಕ್ಷ್ಮಿ ಸರಸ್ವತಿ, ಮಹಾಕಾಳಿ, ಅಕ್ಕಮಹಾದೇವಿ, ಮಠಾಧಿಪತಿಗಳು, ಭಕ್ತ ಕುಂಬಾರ, ಅಂಬೇಡ್ಕರ್, ಶಿಕ್ಷಕ, ಶ್ರವಣಕುಮಾರ, ವೃದ್ಧಾಶ್ರಮ, ಹೊಲ ಕಾಯುವಿಕೆ, ನರ್ಸ್, ಡಾಕ್ಟರ್ ಹೀಗೆ ಹತ್ತು ಹಲವಾರು ಪಾತ್ರಗಳಲ್ಲಿ ಮಿಂಚಿ ಜನ ಮನ್ನಣೆಗೆ ಪಾತ್ರವಾಯಿತು.
ಟಿ.ಎಸ್.ಎಸ್. ಉಪಾಧ್ಯಕ್ಷರಾದ ಎಂ.ಎನ್.ಭಟ್ಟ ತೋಟಿಮನೆ ಪ್ರಾಸ್ತಾವಿಕವಾಗಿ ಮಾತನಾಡಿ ಛದ್ಮವೇಷವೆಂಬುದು ಮಕ್ಕಳಿಗೆ ವಿನೂತನ ಶಿಕ್ಷಣ ಮತ್ತು ಸಂಸ್ಕಾರ ನೀಡುವ ಪದ್ದತಿಯಲ್ಲಿ ಒಂದಾಗಿದೆ. ವಯಸ್ಸಿಗೂ, ತಿಳುವಳಿಕೆಗೂ ಮೀರಿದ ಪ್ರಯತ್ನ ಮಾಡುತ್ತಿರುವ ಮಕ್ಕಳಿಗೆ ಮತ್ತು ಮಾರ್ಗದರ್ಶನ ಮಾಡುತ್ತಿರುವ ಪಾಲಕರಿಗೆ ಸ್ಪೂರ್ತಿದಾಯಕ ಮಾತುಗಳನ್ನಾಡಿದರು. ಟಿ.ಎಸ್.ಎಸ್. ಸುಗ್ಗಿ ಸಂಭ್ರಮದ ಸಾಂಸ್ಕತಿಕ ವೇದಿಕೆಯಲ್ಲಿ ಇದು ಅತ್ಯಂತ ಹೃದಯಸ್ಪರ್ಶಿ ಕರ‍್ಯಕ್ರಮವಾಗಿ ರಸದೂಟ ಸವಿದಂತೆ ಎಂದು ವಿಡಂಬನೆ ಮಾಡುವುದರೊಂದಿಗೆ ಮಕ್ಕಳ ಉಜ್ವಲ ಭವಿಷ್ಯಕ್ಕೆ ಆಶೀರ್ವದಿಸಿದರು.
ಛದ್ಮವೇಷ ಸ್ಪರ್ಧೆಯಲ್ಲಿ ಕುಮಾರಿ ಎ.ವಿ ಗುಣಶ್ರೀ ಪ್ರಥಮ ಬಹುಮಾನ ಪಡೆದರೆ ಕುಮಾರಿ ವೈದ್ಯುತಿ ಮನೋಜ ಹೆಗಡೆ ದ್ವಿತೀಯ ಹಾಗೂ ಕುಮಾರಿ ಚತುರ್ವಿಕೃಷ್ಣ ಅಭಯ ಭಟ್ಟ ತೃತೀಯ ಬಹುಮಾನ ವಿಜೇತರಾದರು. ಎಲ್ಲ ಮಕ್ಕಳಿಗೂ ವಿಶೇಷ ಉಡುಗೊರೆಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು. ಈ ಕಾರ‍್ಯಕ್ರಮಕ್ಕೆ ರಾಜಾರಾಮ ಹೆಗಡೆ ಕುಕ್ರಿ, ಶ್ರೀಮತಿ ಕಮಲಾಕ್ಷಿ ವಿ. ಹೆಗಡೆ ತುಂಬೇಮನೆ ಹಾಗೂ ಶ್ರೀಮತಿ ಲತಾ ಗಿರಿಧರ ಹೊನ್ನೆಗದ್ದೆ ಇವರುಗಳು ನಿರ್ಣಾಯಕರಾಗಿ ಆಗಮಿಸಿ ಕಾರ‍್ಯಕ್ರಮದ ಯಶಸ್ವಿಗೆ ಕಾರಣರಾದರು.

ಸುಗ್ಗಿ ಸಂಭ್ರಮ-ವಿಶೇಷ ಡಿಸ್ಕೌಂಟ್ ಮೇಳದ ಸಂದರ್ಭದಲ್ಲಿ ಆಯೋಜಿಸಿದ್ದ ಜನಪದ ನೃತ್ಯ ಸ್ಪರ್ಧೆಯಲ್ಲಿ ಸುಮಾರು 10 ತಂಡಗಳು ಭಾಗವಹಿಸಿ ಅತ್ಯುತ್ತಮ ನೃತ್ಯ ಪ್ರದರ್ಶನ ನಡೆಸಿಕೊಟ್ಟರು.

ಜನಪದ ನೃತ್ಯ ಸ್ಪರ್ಧೆಯಲ್ಲಿ ಸ್ಪಂದನ ಅರುಣ ಹೆಗಡೆ ಹಾಗೂ ಸಂಗಡಿಗರು ಕಂಚಿಕೊಪ್ಪ ಶಾಲೆ ಪ್ರಥಮ ಬಹುಮಾನ ಪಡೆದರೆ ಶ್ರುತಿ ರಾಘವೇಂದ್ರ ಹೆಗಡೆ ಸಂಗಡಿಗರು ಹೆಗ್ಗರ್ಸಿಮನೆ, ದ್ವಿತೀಯ ಹಾಗೂ ಲಾವಣ್ಯ ಸಂಗಡಿಗರು ದೇವರಕೊಪ್ಪ ತೃತೀಯ ಬಹುಮಾನ ವಿಜೇತರಾದರು. ಎಲ್ಲ ಸ್ಪರ್ಧಾಳುಗಳಿಗೆ ಉಡುಗೊರೆಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.ಈ ಕರ‍್ಯಕ್ರಮಕ್ಕೆ ಶ್ರೀಮತಿ ನಿರ್ಮಲಾ ಎಂ ಹೆಗಡೆ ಗೋಳಿಕೊಪ್ಪ, ಶ್ರೀಮತಿ ಜಯಲಕ್ಷ್ಮಿ ಗಣಪತಿ ಹೆಗಡೆ ಹಾಗೂ ಶ್ರೀಮತಿ ಶುಭಾ ಭಟ್ಟ ಗಿಳಿಗುಂಡಿ ಇವರುಗಳು ನಿರ್ಣಾಯಕರಾಗಿ ಆಗಮಿಸಿ ಕಾರ‍್ಯಕ್ರಮದ ಯಶಸ್ವಿಗೆ ಕಾರಣರಾದರು.

300x250 AD

ಹಾಗೆಯೇ ಸುಗ್ಗಿ ಸಂಭ್ರಮದ ಅಂಗವಾಗಿ ಆಯೋಜಿಸಲಾಗಿದ್ದ ಲಕ್ಕಿ ಡಿಪ್‌ನಲ್ಲಿ ಫೆ.8ರ ಖರೀದಿಯ ಮೇಲಿನ ಅದೃಷ್ಟಶಾಲಿ ವಿಜೇತರ ವಿವರಗಳನ್ನು ತಂತ್ರಜ್ಞಾನದ ಸಹಾಯದಿಂದ ಆಯ್ಕೆ ಮಾಡಿ ಪ್ರಕಟಿಸಲಾಯಿತು. ನಾಜಿಮಾ ಹುಸೇನ್ ಖಾನ್ ಭದ್ರಾಪುರ ಪ್ರಥಮ ಬಹುಮಾನ ಕೆಂಟ್ ವಾಟರ್ ಪಿಲ್ಟರ್, ಸದಾಶಿವ ಅಣ್ಣಯ್ಯ ಭಟ್ಟ ಭರಣಿ ದ್ವಿತೀಯ ಬಹುಮಾನ ಟೈಟಾನ್ ವಾಚ್, ರಾಮಚಂದ್ರ ಜಟ್ಟಯ್ಯ ಜೈನ್ ತೃತೀಯ ಬಹುಮಾನ ಬೊರೋಸಿಲ್ ಗ್ಲಾಸ್ ಸೆಟ್, ಪವಿತ್ರ ಜಿ ನಾಯ್ಕ ಮುಂಡಗನಮನೆ ಚತುರ್ಥ ಬಹುಮಾನ 1.8 ಲೀಟರ್ ಥರ್ಮಸ್ ಹಾಗೂ ಪ್ರಭಾಕರ ವಿ ನಾಯ್ಕ ಹೆಬ್ಬಾರ್‌ಬೈಲ್ ಕಪ್‌ಸೆಟ್ ಐದನೇ ಬಹುಮಾನ ತಮ್ಮದಾಗಿಸಿಕೊಂಡರು. ಎಲ್ಲ ಲಕ್ಕಿಡಿಪ್ ವಿಜೇತರನ್ನು ಸಂಘದವತಿಯಿಂದ ಅಭಿನಂದಿಸಲಾಯಿತು.
ಸೊಸೈಟಿ ಕಂಪನಿಯ ಟೀ ಖರೀದಿಯ ಮೇಲಿನ ಉಡುಗೊರೆ 5 ಫಾಸ್ಟ್ರಾಕ್ ವಾಚ್‌ನ ಲಕ್ಕಿ ಡಿಪ್‌ನ್ನು ಈ ಕೆಳಗಿನವರು ವಿಜೇತರಾದರು. ಕೃಷ್ಣ ಎಸ್ ಹೆಗಡೆ ಅಗಸಾಲ ಕಿಬ್ಬಳ್ಳಿ, ಅನಿತಾ ಶಿರಸಿಕರ, ಶ್ರೀರಾಮ ಜಿ ದೇವ್ ದೇವನಿಲಯ, ಅನಂತ ಎಸ್ ಹೆಗಡೆ ಲಯನ್ಸ ನಗರ ಶಿರಸಿ ತಮ್ಮದಾಗಿಸಿಕೊಂಡರು. ಫೆ. 7ರ ಲಕ್ಕಿ ಡಿಪ್ ವಿಜೇತರ ಉಡುಗೊರೆಗಳನ್ನು ವಿತರಿಸಲಾಯಿತು.
ಟಿ.ಎಸ್.ಎಸ್. ವತಿಯಿಂದ ಎಲ್ಲ ಕರ‍್ಯಕ್ರಮ ಸಂಯೋಜಕರಿಗೆ, ಪ್ರಾಯೋಜಕರಿಗೆ, ಸ್ಪರ್ಧಾಳುಗಳಿಗೆ ವಿಜೇತರಿಗೆ ಶುಭ ಹಾರೈಸುವುದರೊಂದಿಗೆ ಧನ್ಯವಾದ ಸಮರ್ಪಿಸಲಾಯಿತು.

ಸಂಘದ ಸಿಬ್ಬಂದಿ ಲತಾ ಹೆಗಡೆ ಸಭೆಗೆ ನಿರ್ಣಾಯಕರ ಪರಿಚಯ ಮಾಡಿಕೊಟ್ಟರು.
ಸಂಘದ ಸಿಬ್ಬಂದಿ ಮಂಜುನಾಥ ಭಟ್ಟ ಪ್ರಾರ್ಥನೆ ನೆರವೇರಿಸಿದರು. ಟಿ.ಎಸ್.ಎಸ್. ಪ್ರಧಾನ ವ್ಯವಸ್ಥಾಪಕರು, ನಿರ್ದೇಶಕರು, ಸಲಹಾ ಸಮಿತಿ ಸದಸ್ಯರು, ಗ್ರಾಹಕ ಸದಸ್ಯರು, ಸಿಬ್ಬಂದಿಗಳು, ಉಪಸ್ಥಿತರಿದ್ದರು. ಸಂಘದ ನೌಕರರಾದ ರವಿಚಂದ್ರ ಹೆಗಡೆ ಕಾರ‍್ಯಕ್ರಮ ಸಂಯೋಜಕರಿಗೆ, ಪ್ರಾಯೋಜಕರಿಗೆ, ಸ್ಪರ್ಧಾಳುಗಳಿಗೆ ಧನ್ಯವಾದ ಸಮರ್ಪಿಸಿದರು. ಸಂಘದ ಸಿಬ್ಬಂದಿ ಶ್ರೀಮತಿ ಪ್ರೀತಿ ಪಿ ಭಟ್ಟ ಸ್ವಾಗತಿಸಿ ಕಾರ‍್ಯಕ್ರಮ ನಿರೂಪಿಸಿದರು.

Share This
300x250 AD
300x250 AD
300x250 AD
Back to top