ಸಿದ್ದಾಪುರ: ಗೋವಾದ ಡಾ.ಮನೋಹರ ಬಂಡಾರ್ಕರ್ ಇಂಡೋರ್ ಸ್ಟೇಡಿಯಂನ ಮಪ್ಪುಸಾದಲ್ಲಿ ನಡೆದ 9ನೇ ಅಂತರಾಷ್ಟ್ರೀಯ ಮುಕ್ತ ಕರಾಟೆ ಪಂದ್ಯಾವಳಿ-2025ರಲ್ಲಿ ತಾಲೂಕಿನ ಕತ್ರಗಾಲ್- ವಿದ್ಯಾಗಿರಿಯ ರಮಾನಂದ ಆಂಗ್ಲ ಮಾದ್ಯಮ ಶಾಲೆಯ ವಿದ್ಯಾರ್ಥಿಗಳು ಚಿನ್ನ ಹಾಗೂ ಬೆಳ್ಳಿ ಪದಕವನ್ನು ಪಡೆದುಕೊಂಡಿದ್ದಾರೆ.
ಮೊಹಮ್ಮದ್ ಅಜಾನ್ ಝಿಕ್ರಿಯ ಸಾಬ್ ಗೋಲ್ಡ್ ಮೆಡಲ್, ಗೌರೀಶ ಮತ್ತು ಶ್ರಾವ್ಯ ಇವರು ಬೆಳ್ಳಿ ಪದಕ ಪಡೆದು ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಪಾಲಕರು ಹಾಗೂ ರಮಾನಂದ ಆಂಗ್ಲ ಮಾದ್ಯಮ ಶಿಕ್ಷಣ ಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದೆ.
ಕರಾಟೆ ಸ್ಪರ್ಧೆ: ರಮಾನಂದ ಪ್ರೌಢಶಾಲೆ ವಿದ್ಯಾರ್ಥಿಗಳ ಸಾಧನೆ
