ಶಿರಸಿ: ದಾವಣಗೆರೆಯ ಕೊಂಡಜ್ಜಿ ಬಸಪ್ಪ ಸ್ಕೌಟ್ಸ್ & ಗೈಡ್ಸ್ ತರಬೇತಿ ಕೇಂದ್ರದಲ್ಲಿ ನಡೆದ 2024-25ನೇ ಸಾಲಿನ ರಾಜ್ಯ ಪುರಸ್ಕಾರ ಪರೀಕ್ಷೆಯಲ್ಲಿ ಶಿರಸಿ ಲಯನ್ಸ್ ಶಾಲೆಯ ವಿದ್ಯಾರ್ಥಿಗಳು ಸಾಧನೆ ಮೆರೆದಿದ್ದಾರೆ. ಸ್ಕೌಟ್ ವಿಭಾಗದ ವಿದ್ಯಾರ್ಥಿಗಳಾದ ಪ್ರಜ್ವಲ್ ಜೈನ್, ಅಕ್ಷಯ ನಾಯಕ, ಸ್ಕಂದ ಶೆಟ್ಟಿ, ಪಾರ್ಥ ಶೆಟ್ಟಿ ಗೈಡ್ಸ್ ವಿಭಾಗದ ವಿದ್ಯಾರ್ಥಿನಿಯರಾದ ಅದಿತಿ ನಾಯ್ಕ, ಪಿ.ಬಿ. ಶ್ರೇಯಾ, ಅನಘಾ ಹೆಗಡೆ, ಸಮೀಕ್ಷಾ ರಾಯ್ಕರ, ಪ್ರತಿಕ್ಷಾ ಶೆಟ್ಟಿ, ಸಿಂಚನಾ ಶೆಟ್ಟಿ, ಶ್ರಾವ್ಯ ಎಸ್.ಕೆ. ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಈ ವಿದ್ಯಾರ್ಥಿಗಳಿಗೆ ಸ್ಕೌಟ್ ಮಾಸ್ಟರ್ ರಾಘವೇಂದ್ರ ಹೊಸೂರು ಹಾಗೂ ಗೈಡ್ಸ್ ಕ್ಯಾಪ್ಟನ್ ಶ್ರೀಮತಿ ಚೇತನಾ ಪಾವಸ್ಕರ ತರಬೇತಿ ನೀಡಿರುತ್ತಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ, ಪ್ರಾಚಾರ್ಯರು, ಶಿಕ್ಷಕ-ಶಿಕ್ಷಕೇತರ ಬಾಂಧವರು, ಲಯನ್ಸ್ ಬಳಗ ಮತ್ತು ಪಾಲಕವೃಂದ ಅಭಿನಂದನೆ ಸಲ್ಲಿಸಿರುತ್ತಾರೆ.
ರಾಜ್ಯ ಪುರಸ್ಕಾರ ಪದಕ ಪರೀಕ್ಷೆ: ಲಯನ್ಸ್ ವಿದ್ಯಾರ್ಥಿಗಳ ಸಾಧನೆ
