ಸಿದ್ದಾಪುರ: ಸ್ಥಳೀಯ ಆಧಾರ ಸಂಸ್ಥೆ (ರಿ.) ಆಶ್ರಯದಲ್ಲಿ ಮಂಗಳೂರು ಹಾರ್ಟ್ ಸ್ಕ್ಯಾನ್ ಪೌಂಡೇಷನ್ ಹಾಗೂ ಒಮೇಗಾ ಹಾಸ್ಪಿಟಲ್ ಇವರ ಆಶ್ರಯದಲ್ಲಿ ಫೆ.16ರಂದು ಪಟ್ಟಣದ ಎಂ.ಎಚ್.ಪಿ.ಎಸ್. ಬಾಲಿಕೊಪ್ಪಾದಲ್ಲಿ ದಿ||ಡಿ.ಎನ್. ಶೇಟ್ ಸ್ಮರಣಾರ್ಥ ಬೃಹತ್ ಉಚಿತ ಹೃದಯ ತಪಾಸಣ ಶಿಬಿರ ಆಯೋಜಿಸಲಾಗಿದೆ.
ಹಲವು ವರ್ಷಗಳ ನಂತರ ತಾಲೂಕಿನಲ್ಲಿ ನಡೆಯುತ್ತಿರುವ ಈ ಬೃಹತ್ ಉಚಿತ ಹೃದಯ ತಪಾಸಣಾ ಶಿಬಿರದಲ್ಲಿ ಖ್ಯಾತ ಹೃದಯರೋಗ ತಜ್ಞರಾದ ಡಾ|| ಕೆ. ಮುಕುಂದ, ಡಾ|| ಅಮಿತ್ ಕಿರಣ ಹಾಗೂ ಡಾ|| ಮೇಘನಾ ಮುಕುಂದ ಇವರುಗಳು ಶಿಬಿರದಲ್ಲಿ ಪಾಲ್ಗೊಂಡು ಹೃದಯ ತಪಾಸಣೆ ನಡೆಸಲಿದ್ದಾರೆ. ಶಿಬಿರದಲ್ಲಿ ಹೃದಯರೋಗ ತಪಾಸಣೆ ಹಾಗೂ ಸಾಮಾನ್ಯ ವೈದ್ಯಕೀಯ ತಪಾಸಣೆ, ಇ.ಸಿ.ಜಿ. ಹಾಗೂ ಎ.ಸಿ.ಎಚ್.ಒ. ಪರೀಕ್ಷೆ ನಡೆಸಲಾಗುವುದು. ಅಲ್ಲವೇ ಮದುಮೇಹ ರಕ್ತ ಪರೀಕ್ಷೆ ನಡೆಸಲಾಗುವುದು.
ತಪಾಸಣೆ ಶಿಬಿರಕ್ಕೆ ಬರುವಾಗ ಈ ಹಿಂದೆ ತಪಾಸಣೆ ಮಾಡಿದ್ದರೆ ಇತ್ತೀಚಿಗೆ ನಡೆಸಲಾದ ವೈದ್ಯಕೀಯಾ ತಪಾಸಣಾ ದಾಖಲೆಗಳನ್ನು ಹಾಗೂ ನೀಡಲಾದ ಔಷದಿಗಳ ಮಾಹಿತಿಯನ್ನು ತರುವುದು ಕಡ್ಡಾಯವಾಗಿದೆ. ಶಿಬಿರದಲ್ಲಿ ಪಾಲ್ಗೊಳ್ಳಲು ಫೆ. 15 ರ ಒಳಗೆ ಹೆಸರನ್ನು ಈ ಕೆಳಗಿನ ದೂರವಾಣಿ ಸಂಖ್ಯೆಗೆ ಕರೆಮಾಡಿ ನೊಂದಾಯಿಸಿಕೊಳ್ಳಬೇಕು. ನಾಗರಾಜ ನಾಯ್ಕ ಮಾಳ್ಕೋಡ (Tel:+918105406513), ಪ್ರಶಾಂತ ಡಿ. ಶೇಟ್ (Tel:+919448347570), ಧರ್ಮ ಅಂಬಿಗ (Tel:+918867144092), ಸುರೇಶ ಮಡಿವಾಳ ಕಡಕೇರಿ (Tel:+919945774548). ತಪಾಸಣಾ ಶಿಬಿರವು ಬೆಳಿಗ್ಗೆ 9.00 ರಿಂದ ಮಧ್ಯಾಹ್ನ 2.00 ಗಂಟೆಯ ವರೆಗೆ ನಡೆಯಲಿದ್ದು ಸಾರ್ವಜನಿಕರು, ಆಸಕ್ತರು ಇದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಆಧಾರ ಸಂಸ್ಥೆಯ ಅಧ್ಯಕ್ಷರಾದ ನಾಗರಾಜ ನಾಯ್ಕ ಮಾಳ್ಕೋಡ ಹಾಗೂ ಶಿಬಿರದ ಸಂಯೋಜಕರಾದ ಧರ್ಮ ಅಂಬಿಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫೆ.16ಕ್ಕೆ ಸಿದ್ದಾಪುರದಲ್ಲಿ ಬೃಹತ್ ಉಚಿತ ಹೃದಯ ತಪಾಸಣಾ ಶಿಬಿರ
