Slide
Slide
Slide
previous arrow
next arrow

ಮೀಟರ್ ಬಡ್ಡಿ ದಂಧೆ ವಿರುದ್ಧ ಕಾರ್ಯಾಚರಣೆ: ಇಬ್ಬರ ಬಂಧನ

300x250 AD

ದಾಂಡೇಲಿ: ಅನಧೀಕೃತ ಮೀಟರ್ ಬಡ್ಡಿ ದಂಧೆ ಬಗ್ಗೆ ವ್ಯಾಪಕ ದೂರು ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಹಾಗೂ ಡಿವೈಎಸ್ಪಿ‌ ಶಿವಾನಂದ ಮದರಖಂಡಿ ಮಾರ್ಗದರ್ಶನದಲ್ಲಿ ನಗರ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಮೀಟರ್ ಬಡ್ಡಿ ದಂಧೆ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಬಗ್ಗೆ ಬುಧವಾರ ವರದಿಯಾಗಿದೆ.

ಗಾಂಧಿನಗರದ ಕಂಜರಬಾಟಿನ ನಿವಾಸಿ ಕಿಶನ ಸುಭಾಷ್ ಕಂಜರಬಾಟ ಹಾಗೂ ವಿನೋದ ಸುರೇಶ ಮಿನೇಕರ ಎಂಬಿಬ್ಬರು ಬಂಧಿತ ಆರೋಪಿಗಳಾಗಿದ್ದಾರೆ‌.

ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಎಸ್.ಬಿ.ಸಜ್ಜನ್ ನೀಡಿದ ದೂರಿನನ್ವಯ, ಪಿಎಸ್ಐ ಗಳಾದ ಅಮೀನ್ ಅತ್ತಾರ, ಕಿರಣ್ ಪಾಟೀಲ್ ಮತ್ತು ಜಗದೀಶ ಅವರ ನೇತೃತ್ವದಲ್ಲಿ ದೂರುದಾರರು, ಪಂಚರು ಹಾಗೂ ಪೊಲೀಸ್ ಸಿಬ್ಬಂದಿಯವರೊಂದಿಗೆ ಆರೋಪಿಗಳ‌ ಮನೆಯನ್ನು ಶೋಧನೆ ಮಾಡಲಾಯಿತು.

300x250 AD

ವಿನೋದ ಸುರೇಶ ಕಂಜರಬಾಟ್ ಈತನ ಮನೆಗೆ ದಾಳಿ ನಡೆಸಿದ ಸಂದರ್ಭದಲ್ಲಿ ಈತನ ವಶದಲ್ಲಿದ್ದ 5 ಖಾಲಿ ಚೆಕ್ ಗಳು, ಸಹಿ ಇರುವ 5 ಖಾಲಿ ಬಾಂಡ್ ಪೇಪರ್ ಗಳು, 4 ಆರ್.ಸಿ ಕಾರ್ಡ್ ಗಳನ್ನು ಜಪ್ತು ಮಾಡಿ, ಆತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಇನ್ನೋರ್ವ ಆರೋಪಿ ಕಂಜರಬಾಟ್ ನಿವಾಸಿ ಕಿಶನ್ ಸುಭಾಷ ಕಂಜರಬಾಟ್ ಈತನ ಮನೆಗೆ ದಾಳಿ ಮಾಡಿದ ಸಂದರ್ಭದಲ್ಲಿ ಈತನ ಮನೆಯಲ್ಲಿಯೂ ಅಕ್ರಮ ಬಡ್ಡಿ ವ್ಯವಹಾರಕ್ಕೆ ಸಂಬಂಧಿಸಿದ 02 ಖಾಲಿ ಸ್ಟ್ಯಾಂಪ್ ಪೇಪರ್ ದೊರೆತಿದ್ದು ಅದನ್ನು ಜಪ್ತು ಮಾಡಿ, ಆತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಇಬ್ಬರ ಮೇಲೆ ನಗರ ಠಾಣೆಯ ಪಿಎಸ್ಐ ಅಮೀನ್ ಅತ್ತಾರ ಅವರು ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿರುತ್ತಾರೆ.

Share This
300x250 AD
300x250 AD
300x250 AD
Back to top